ಅಂಗನವಾಡಿ ಕೇಂದ್ರಗಳಿಗೆ ನ್ಯಾಯಾಧೀಶರು ಭೇಟಿ: ಅಲ್ಲಿನ ಅವ್ಯವಸ್ಥೆ ಕಂಡು ಸಿಡಿಮಿಡಿಗೊಂಡ ಜಡ್ಜ್
ಬೀದರ್:ಆ.21: ನಿನ್ನೆ ಹಾಗೂ ಇಂದು ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ನ್ಯಾ.ಪ್ರಕಾಶ ಎ ಬನಸೋಡೆ ಅವರು ಕರ್ನಾಟಕ ಹೈಕೋರ್ಟ್ ನಿರ್ದೇಶನದಂತೆ ಬೀದರ್ ನಗರದ ನಾಲ್ಕು ಹಾಗೂ ಬೀದರ್ ತಾಲೂಕಿನ ಮಾಳೆಗಾಂವ ಗ್ರಾಮದ 2 ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶಿಲಿಸಿದರು.
ಮಾಳೆಗಾಂವ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಹಾಜರಾತಿ ಕುರಿತು ಸರಿಯಾಗಿ ದಾಖಲೇ ನಿರ್ವಹಣೆ ಮಾಡಿರುವುದಿಲ್ಲ. ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಶೌಚಾಲಯದ ವ್ಯವಸ್ಥೆ ಇರುವುದಿಲ್ಲ. ಪ್ರತೇಕವಾದ ಅಡುಗೆ ಕೋಣೆ ಹಾಗೂ ಸಂಗ್ರಹಣ ಕೊಠಡಿ ಇರುವುದಿಲ್ಲ. ಹಾಜರಾತಿ ಪ್ರಕಾರ ಅಂಗನವಾಡಿ ಕೇಂದ್ರದಲ್ಲಿ ಹಾಜರಿರಲ್ಲಿಲ್ಲ ಅವರು ಸರ್ಕಾರಿದಿಂದ ಪ್ರಾರಂಭವಾದ ಐ.ಞ.ಉ ಹಾಗೂ U.ಏ.ಉ ವರ್ಗಗಳಿಗೆ ಹೊಗಿರುತ್ತಾರೆಂದು ಅಂಗನವಾಡಿ ಶಿಕ್ಷಕಿ ತಿಳಿಸಿರುತ್ತಾರೆ. ಮತ್ತೊಂದು ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿ ಸಹಾಯಕಿ ಇದ್ದರು, ಅಂಗನವಾಡಿ ಶಿಕ್ಷಕಿ ಗೈರಾಜರಿದ್ದರು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಶೌಚಾಲಯದ ವ್ಯವಸ್ಥೆ ಇರಲಿಲ್ಲ. ಪ್ರತೇಕವಾದ ಅಡುಗೆ ಕೋಣೆ ಹಾಗೂ ಸಂಗ್ರಹಣ ಕೊಠಡಿ ಇರಲಿಲ್ಲ. ಅಂಗನವಾಡಿ ಕೇಂದ್ರದಲ್ಲಿ ಹಾಜರಿರಲ್ಲಿಲ್ಲ.
ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿ ಶಿಕ್ಷಕಿ ಹಾಗೂ ಸಹಾಯಕಿ ಹಾಜರಿದ್ದರು ಇದ್ದರು. ಒಟ್ಟು 45 ಮಕ್ಕಳಲ್ಲಿ 7 ಜನ ಅಂಗನವಾಡಿ ಮಕ್ಕಳು ಹಾಜರಿದ್ದರು. ಈ ಅಂಗನವಾಡಿ ಕೇಂದ್ರ ಬಾಡಿಗೆ ಮನೆಯಲ್ಲಿ ಇರುತ್ತದೆ 45 ಮಕ್ಕಳಿಗೆ ಕೇವಲ ಒಂದು ಶೌಚಾಲಯ ಇರುತ್ತದೆ. ಪ್ರತೇಕವಾದ ಅಡುಗೆ ಕೋಣೆ ಇರುತ್ತದೆ ಆದರೆ ಸಂಗ್ರಹಣ ಕೊಠಡಿ ಇರುವುದಿಲ್ಲ. ಶುದ್ದವಾದ ಕುಡಿಯುವ ನೀರಿನ ವ್ಯವಸ್ಥೆ ಇರುವುದಿಲ್ಲ. ನಗರದ ಲಂಗರಗಲ್ಲಿ ಅಂಗನವಾಡಿ ಕೇಂದ್ರ, ಶಹಾಗಂಜ ಅಂಗನವಾಡಿ ಕೇಂದ್ರ-292 ಮತ್ತು ಲೇಬರ ಕಲೋನಿ ಅಂಗನವಾಡಿ ಕೇಂದ್ರ – 311 ಬೆಳಿಗ್ಗೆ 10:20, 10:30, 10:50 ಗಂಟೆಗೆ ಬೇಟಿ ನೀಡಿದಾಗ ಮೂರು ಅಂಗನವಾಡಿ ಕೇಂದ್ರಗಳು ಮುಚ್ಚಿರುವುದು ಕಂಡುಬಂದಿರುತ್ತವೆ. ಒಟ್ಟಾರೆ ಹೆಸರಿಗೆ ಮಾತ್ರ ಅಂಗನವಾಡಿ ಕೇಂದ್ರಗಳು ನಡೆಯುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.