ಮಹಿಳಾ ಸ್ವಸಹಾಯ ಗುಂಪುಗಳ ಉತ್ಪನ್ನಗಳ ಖರೀದಿಗೆ ಗ್ರಾಹಕರು ಮುಂದೆ ಬರಬೇಕು: ರಮಾದೇವಿ
ಕಲಬುರಗಿ:ಆ.21: ಮಹಿಳಾ ಸ್ವಸಹಾಯ ಸಂಘದ ಮಹಿಳೆಯರು ತಯಾರಿಸುವ ಅಗತ್ಯ ವಸ್ತುಗಳನ್ನು ಗ್ರಾಹಕರು ಖರೀದಿಸುವ ಮೂಲಕ ಅವರಿಗೆ ಬೆಂಬಲ ಹಾಗೂ ಪ್ರೋತ್ಸಾಹ ನೀಡುವ ಕೆಲಸ ಮಾಡಬೇಕು ಎಂದು ಮಾನವ ಸಂಪನ್ಮೂಲ ಯುವತಿಯಾದ ರಮಾದೇವಿ ಅವರು ವಿನಂತಿಸಿಕೊಂಡರು.
ಅವರು ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋಶಿಪ್ ಕಾರ್ಯಕ್ರಮದ ಅಂಗವಾಗಿ ಅಫಜಲಪೂರ ತಾಲ್ಲೂಕಿನ ಕನಯ್ಯಾ ಮಹಿಳಾ ಸ್ವಸಹಾಯ ಸಂಘದ ವತಿಯಿಂದ ಹಾಕಲಾದ ಮಹಿಳಾ ಸ್ವಸಹಾಯ ಗುಂಪಿನ ಉತ್ಪನಗಳ ಮಾರಾಟ ಮಳಿಗೆಯ ನೇತೃತ್ವವಹಿಸಿ ಮಾತನಾಡಿದರು. ಮಹಿಳೆಯರು ಸ್ವಸಹಾಯ ಗುಂಪನ್ನು ಕಟ್ಟಿಕೊಂಡು ಸಾಮಾಜಿಕ,ಆರ್ಥಿಕ, ಸಬಲೀಕರಣವಾಗಿ ಬೆಳೆಯಬೇಕೆಂಬ ಉದ್ದೇಶದಿಂದ ಹಲವಾರು ಯೋಜನೆಗಳನ್ನು ಹಾಕಿಕೊಂಡು ಗ್ರಾಹಕರಿಗೆ ಅನುಕೂಲವಾಗಿ ನಿಟ್ಟಿನಲ್ಲಿ ಗೃಹ ಬಳಕೆಯ ವಸ್ತುಗಳನ್ನು ಉತ್ಪಾದಿಸುತ್ತಾರೆ ಅದನ್ನೂ ಸೂಕ್ತವಾದ ಮಾರುಕಟ್ಟೆ ಇಲ್ಲದ ಕಾರಣ ಸೂಕ್ತ ಬೆಲೆ ಸಿಗುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ಮಹಿಳಾ ಸ್ವಸಹಾಯದ ಮಹಿಳೆಯರು ಉತ್ಪಾದಿಸುವ ತಿನಿಸು, ಗೃಹ ಬಳಕೆ ವಸ್ತುಗಳಿಗೆ ಸೂಕ್ತ ವೇದಿಕೆಯನ್ನು ಸರ್ಕಾರ ಕಲ್ಪಿಸಿಕೊಡುವ ಮೂಲಕ ಮಹಿಳೆಯರ ಶ್ರಮಕ್ಕೆ ಬೆಲೆ ಕೊಡಬೇಕೆಂದು ಅವರು ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಈ ಸಂದರ್ಭದಲ್ಲಿ ಅನೀತಾ, ಪ್ರಭಾವತಿ, ಪ್ರತಿಭಾ ಮಹೇಂದ್ರಕರ್, ರೇಣುಕಾ ಬಸವರಾಜ್ ಸೇರಿದಂತೆ ಅನೇಕ ಸ್ವಸಹಾಯ ಸಂಘದ ಇತರೇ ಮಹಿಳಾ ಸದಸ್ಯರು ಭಾಗವಹಿಸಿದ್ದರು.