ಸಡಗರ ಸಂಭ್ರಮದಿಂದ ಜರುಗಿದ ಬಸವಣ್ಣನ ಜಾತ್ರೆ
ಚಿತ್ತಾಪುರ:ಆ.21: ತಾಲ್ಲೂಕಿನ ದಂಡಗುಂಡ ಗ್ರಾಮದಲ್ಲಿನ ಬಸವಣ್ಣ ದೇವರ ಜಾತ್ರೆ ನಿಮಿತ್ತ ಸೋಮವಾರ ಸಂಜೆ ಅಪಾರ ಭಕ್ತರ ಜಯಘೋಷದೊಂದಿಗೆ,ವಿವಿಧ ವಾದ್ಯ ಮೇಳಗಳೊಂದಿಗೆ ಸಡಗರ ಸಂಭ್ರಮದಿಂದ ಬಸವಣ್ಣನ ರಥೋತ್ಸವ ಜರುಗಿತು.
ಜಾತ್ರಾ ಮಹೋತ್ಸವವು ಸಂಪ್ರದಾಯದಂತೆ ಬೆಳಿಗ್ಗೆ ದೇವಸ್ಥಾನದಲ್ಲಿ ವಿಶೇಷ ಅಲಂಕಾರ, ಪೂಜೆ, ಅಭಿಷೇಕ ಕಾರ್ಯಕ್ರಮಗಳು ಜರುಗಿದವು,ಮಧ್ಯಾಹ್ನ ದಂಡಗುಂಡ ಗ್ರಾಮದಿಂದ ಪಲ್ಲಕ್ಕಿ ಉತ್ಸವ, ಕಳಸ, ಕುಂಭದ ಮೆರವಣಿಗೆ ಪ್ರಾರಂಭಗೊಂಡು ಸಾಯಂಕಾಲ ದೇವಸ್ಥಾನಕ್ಕೆ ತಲುಪಿದ ನಂತರ ಅದ್ದೂರಿ ರಥೋತ್ಸವ ಜರುಗಿತು.
ದೇವಸ್ಥಾನದ ಪೂಜಾರಿಯು ಬಸವಣ್ಣನ ಮೂರ್ತಿ ಹಿಡಿದುಕೊಂಡು ರಥದಲ್ಲಿ ಕುಳಿತುಕೊಂಡ ನಂತರ ರಥ ಮುಂದೆ ಸಾಗುತ್ತಿದ್ದಂತೆ ಸಾಗರೋಪಾದಿಯಲ್ಲಿ ನೆರೆದ ಭಕ್ತರು ಹೂವು, ಬಾಳೆಹಣ್ಣು, ಉತ್ತತ್ತಿ, ನಾಣ್ಯಗಳನ್ನು ರಥಕ್ಕೆ ಎಸೆದು ತಮ್ಮ ಭಕ್ತಿ ಮೆರೆದರು.
ಪೆÇಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್:
ಪ್ರತಿವರ್ಷ ಜಾತ್ರೆಗೆ ರಾಜ್ಯ ಮತ್ತು ಪರರಾಜ್ಯದಿಂದ ಬರುವ ಸಹಸ್ರಾರು ಜನ ಭಕ್ತಾದಿಗಳ ಜನದಟ್ಟಣೆ ಮತ್ತು ವಾಹನ ಸಂಚಾರಕ್ಕೆ ಅಡ್ಡಿಯಾಗಬಾರದು ಎಂದು ಡಿವೈಎಸ್ಪಿ ಶಂಕರ್ ಗೌಡ ಪಾಟೀಲ್ ಅವರು ಸುಗಮ ಸಂಚಾರಕ್ಕೆ ಯೋಜನೆ ರೂಪಿಸಿಕೊಂಡು ಇಬ್ಬರು ಸಿಪಿಐ ಐದು ಜನ ಪಿಎ???,8 ಜನ ಎಎ???, ಪೇದೆ ಮತ್ತು ಮುಖ್ಯಪೇದೆ 45ಜನ ಹಾಗೂ ಎರಡು ಡಿಆರ್ ವಾಹನಗಳನ್ನು ನೇಮಿಸಿ ಅಡಚಣೆ ಉಂಟಾಗದಂತೆ ಸೂಕ್ತ ಬಂದೋಬಸ್ತ್ ವದಗಿಸಿದರು.
ಮಠದ ಸ್ವಾಮಿಗಳಿಲ್ಲದೆ ನಡೆದ ಜಾತ್ರೆ:
ಪ್ರತಿ ವರ್ಷದ ಜಾತ್ರೆಯಲ್ಲಿ ಸಂಗಮೇಶ್ವರ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಸಂಗಮೇಶ್ವರ ಶಿವಾಚಾರ್ಯರು ರಥದಲ್ಲಿ ಕುಳಿತುಕೊಂಡ ನಂತರ ರಥೋತ್ಸವ ಜರುಗುವ ಸಂಪ್ರದಾಯವಿತ್ತು. ಆದರೆ ದೇವಸ್ಥಾನ ಮತ್ತು ಮಠದ ಅಭಿವೃದ್ಧಿಗಾಗಿ ಕಟ್ಟಡದ ಕೆಲ ಭಾಗವನ್ನು ನೆಲಸಮ ಮಾಡಿದ್ದು ಹಾಗು ಮಠದ ಶಿವಾಚಾರ್ಯರಿಗೆ ಜೀವ ಭಯವಿದೆ ಎಂದು ಗ್ರಾಮದಿಂದ ದೂರ ಉಳಿದಿದ್ದು ಮೊದಲ ಬಾರಿಗೆ ಅವರ ಅನುಪಸ್ಥಿತಿಯಲ್ಲಿ ಬಸವಣ್ಣನ ಜಾತ್ರೆಯ ಕಾರ್ಯಕ್ರಮಗಳು ಜರುಗಿತು.
ಈ ಸಂದರ್ಭದಲ್ಲಿ ಬಸವೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿಯ ಸದಸ್ಯರಾದ ಭಾಗಣ್ಣಗೌಡ ಸಂಕನೂರು, ಭೀಮಣ್ಣ ಸಾಲಿ, ಚಂದ್ರಶೇಖರ ಅವಂಟಿ, ರಾಜಶೇಖರ ಪಾಟೀಲ್, ಭೀಮರಾಯಗೌಡ ಚಾಮನೂರು, ಮಹಾಂತಗೌಡ ಪಾಟೀಲ್ ಸೇರಿದಂತೆ ಅನೇಕ ಗಣ್ಯರು ರಥೋತ್ಸವದಲ್ಲಿ ಉಪಸ್ಥಿತರಿದ್ದರು.