ಸ್ವಚ್ಛತೆ ಕೊರತೆ  ಗಬ್ಬುನಾರುತ್ತಿರುವ ಚಿಕ್ಕ ಸಿಂದೋಗಿ
ರುದ್ರಪ್ಪ ಭಂಡಾರಿ
ಕೊಪ್ಪಳ : ತಾಲ್ಲೂಕಿನ ಕೋಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಚಿಕ್ಕ ಸಿಂಧೋಗಿ  ಗ್ರಾಮದಲ್ಲಿ ಚರಂಡಿ ಸ್ವಚ್ಚತೆ  ಕೊರತೆ  ಮತ್ತು ಕಸ ಕಡ್ಡಿಗಳು ಯಚೆತ್ತವಾಗಿ ಬೆಳೆದಿರುವ ಪರಿಣಾಮ ಚರಂಡಿ ನೀರು ಹಿರೇ ಹಳ್ಳಕ್ಕೆ ಸೇರದೆ ಜಮಾ ಗೊಂಡು ಸುತ್ತಲಿನ  ಪ್ರದೇಶದಲ್ಲಿ ವಾಸಿಸುವ ಜನರು ನಿತ್ಯಪರದಾಡುವಂತಾಗಿದೆ.
ಗ್ರಾಮದ  ವಿವಿಧ ಕಾಲೋನಿಯಿಂದ  ಮಾರುತಿ ದೇವಸ್ಥಾನ ಹಾಗೂ  ರೇವಣ ಸಿದ್ದೇಶ್ವರ ದೇವಸ್ಥಾನ ವರೆಗೆ  ಇರುವ ಚರಂಡಿ ಅವಸ್ತೆಯಿಂದ ನೀರು ಸುಗಮವಾಗಿ ಹರಿಯದೇ ಮಲಿನಗೊಂಡ ನೀರು ಒಂದೇ ಕಡೆ ಸಂಗ್ರಹಗೊಂಡು ಸಾವ ೯ಜನಿಕರು ಅನಾರೋಗ್ಯ ಭೀತಿ ಎದುರಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಈ ಸಮಸ್ಯೆ ಎದುರಾಗಿದೆ ಸಂಭಂಧಿಸಿದ ಪಂಚಾಯಿತಿ ಯವರಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನ ಆಗಿಲ್ಲ ಎಂದು ಸ್ಥಳೀಯರ ಆರೋಪವಾಗಿದೆ. ಪ್ರಸ್ತುತ ಮಳೆಗಾಲ ಮಲಿನ ಗೊಂಡ ನೀರಿನ ದುವಾ೯ಸನೆ ಒಂದೆಡೆ ಮತ್ತೊಂದೆಡೆ ಸಾಂಕ್ರಾಮಿಕ ಕಾಯಿಲೆಗಳಿಂದ ಜನರು ಬಳಲುವಂತಾಗಿದೆ. ಚಿಕ್ಕ ಸಿಂಧೂ ಗೀ  ಸಮಸ್ಯೆ ಬಗ್ಗೆ ಪತ್ರಿಕೆ ಗ್ರಾಮದಲ್ಲಿ ಸಂಚರಿಸಿದಾಗ ಜನರು ನರಕ ಯಾತನೆಯಲ್ಲಿ ಬಳಲುವಂತೆ ಕಂಡು ಬರುತ್ತದೆ  ಗ್ರಾಮದ ರಸ್ತೆ ಸ್ಥಿತಿಯಂತೂ ಹೇಳತೀರದು. ಸಂಚಾರಿಗಳು ಊರು ದಾರಬೇಕೆಂದ್ರೆ ಲಂಕೆ ದಾಟಿದಂತ ಅನುಭವ.
ಸಾವ೯ಜನಿಕರು ನಿತ್ಯ ಅನಭವಿಸುತ್ತಿರುವ ಸಮಸ್ಯೆಗಳನ್ನು ಸಂಬಂದಿಸಿದ   ಪಂಚಾಯತ್ ಅಧಿಕಾರಿಗಳು, ಆರೋಗ್ಯ ಇಲಾಖೆ ಯವರು.
ಎಚ್ಚೆತ್ತು ಕೂಳ್ಳುವುದು  ಯಾವಾಗ? ವಿಳಂಬವಾದರೆ ಕಾಲರಾ ಡೆಂಗ್ಯೂ ಮಹಾಮಾರಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಸ್ಥಳೀಯರ ಅಭಿಪ್ರಾಯ.
ಕೋಳೂರು ಪಂಚಾಯ್ತಿಯ ಚಿಕ್ಕ ಸಿಂಧೂಗಿ ಒಂದು ವಾದ್೯  ಇಲ್ಲಿಯ ಸದಸ್ಯ ನಿತ್ಯ ಪರಿಸ್ಥಿತಿ ನೋಡುತ್ತಾರೆ ಆದರೆ ಕೆಲಸ ಶೂನ್ಯ. ಜನರು ಸಮಸ್ಯೆ ಮಾತಾಡಿದರೆ ಅವರಿಲ್ಲ  ಇವರಿಲ್ಲ … ಗಾಡಿ ಸಿಗುತ್ತಿಲ್ಲ ಲೆಬರ್ ಸಿಗುತ್ತಿಲ್ಲ ಎಂಬ ಸಾಬೂನು ಹೇಳಿ ಹೋಗುತ್ತಾರೆ ಆದರೆ ಮೆಂಬರ್ ಆಗೋಕೆ  ಆಸಕ್ತಿ  ನಂತರ ಜನರ ಆರೋಗ್ಯದ ದೃಷ್ಟಿಯಿಂದ ಕೆಲಸ ಮಾತ್ರ ವಿಳಂಬ.   ಕೂಡಲೇ ಎಚ್ಚೆತ್ತು ಜನರ ಗೋಳಾಟ ಸಂಕಟಗಳನ್ನು ಅರಿತು ಸಕಾರಾತ್ಮಕ ಸ್ಪಂದಿಸುವ ಮೂಲಕ ನೆರವಾಗಬೇಕು ಎಂಬುದು ಚಿಕ್ಕ ಸಿಂಧೂಗಿ ಜನ ಒತ್ತಾಯಿಸಿದ್ದಾರೆ.