ಓದು ನಿಮ್ಮದು ಓದಿಸುವ ಕರ್ತವ್ಯ ನಮ್ಮದು:ಮುರಗನ
ಸೈದಾಪುರ:ಆ.21:ಓದು ನಿಮ್ಮದು ಓದಿಸುವ ಕರ್ತವ್ಯ ನಮ್ಮದು ಎನ್ನುವ ದ್ಯೇಯದೊಂದಿಗೆ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗಾಗಿ ನಮ್ಮ ಕಂಪನಿ ಸಹಾಯ ಮಾಡುತ್ತಿದೆ ಎಂದು ಜೊನಲ ವ್ಯವಸ್ಥಾಪಕರಾದ ಬಾಲ ಮುರಗನ್ ಅಭಿಪ್ರಾಯಪಟ್ಟರು.
ಪಟ್ಟಣದ ವಿದ್ಯಾ ವರ್ಧಕ ಪ್ರೌಢ ಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಬಯೋಜೈಮ್ ಕಂಪನಿ ವತಿಯಿಂದ ಪ್ರಗತಿ ಸ್ಕಾಲರ ಶಿಪ್ ವಿತರಣೆ ಮಾಡಿ ಮಾತನಾಡಿದರು. ನಮ್ಮ ಕಂಪನಿಯಿಂದ ಬಂದ ಆದಾಯದಲ್ಲಿ ಒಟ್ಟು 4000 ಸಾವಿರ ವಿದ್ಯಾರ್ಥಿಗಳಿಗೆ 2500 ರೂಪಾಯಿಯಂತೆ ಶಿಷ್ಯವೇತನ ನೀಡಲಾಗುತ್ತಿದೆ. ವಿಶೇಷವಾಗಿ ರೈತರ ಮಕ್ಕಳನ್ನು ಪರಿಗಣಿಸಲಾಗುತ್ತಿದೆ. ಇದರಿಂದ ಅವರ ಹಾದಿ ಕೇವಲ ಗದ್ದೆಗಳತ್ತ ಅಲ್ಲ ಜಗತ್ತಿನತ್ತ ತೆರೆದುಕೊಳ್ಳುತ್ತಾ ಹೋಗುತ್ತದೆ. ಆಸರೆ ಕಲಿಯಲು ಆಸರೆ ಬೆಳೆಯಲು ಉದ್ದೇಶ ಹೊಂದಿದೆ. ಬೆಳೆ ಬೆಳೆಯಬೇಕು ಹೌದು ಜೊತೆಗೆ ಮುಂದಿನ ಪೀಳಿಗೆಯೂ ಬೆಳೆಯಬೇಕು. ಅದಕ್ಕಾಗಿ ಅವರಿಗೆ ಶಿಕ್ಷಣವೂ ಬೇಕು. ಇದು ನಮ್ಮ ಮಣ್ಣಿನಲ್ಲಿ ಬೆಳೆದು, ನಾಳೆ ದೇಶವನ್ನು ಪ್ರಗತಿಯ ಪಥದಲ್ಲಿ ನಳನಳಿಸುವಂತೆ ಮಾಡುತ್ತದೆ. ಇಂದಿನಿಂದ ಶಿಕ್ಷಣದತ್ತ ಮುಖಮಾಡಿದ ನಿಮ್ಮ ಪ್ರತಿ ಹೆಜ್ಜೆಯೊಂದಿಗೆ ನಾವಿದ್ದೇವೆ. ಈ ಕಾರ್ಯಕ್ರಮದ ಸರಿಯಾದ ಸದುಪಯೋಗ ಪಡೆದುಕೊಂಡು ಉತ್ತಮ ಸಾಧನೆ ನಿಮ್ಮದಾಗಲಿ ಎಂದು ಹಾರೈಸಿದರು.
ಮುಖ್ಯಗುರು ಲಿಂಗಾರೆಡ್ಡಿ ನಾಯಕ, ಕಂಪನಿಯ ರಾಜಶೇಖರ.ಆರ್.ಆರ್À, ಸಾಯಿಬಣ್ಣ ಬಿರಾದರ, ಪ್ರಾಂಶುಪಾಲ ಹಂಪಣ್ಣ ಸಜ್ಜನಶೆಟ್ಟಿ, ಕರಬಸಯ್ಯ ದಂಡಿಗಿಮಠ, ವಿತರಕರಾದ ಬಸವರೆಡ್ಡಿ, ಶಿಕ್ಷಕ ಕಾಶೀನಾಥ ಶೇಖಸಿಂದಿ, ವಿದ್ಯಾರ್ಥಿಗಳು ಪೋಷಕರು ಸೇರಿದಂತೆ ಇತರರಿದ್ದರು.