ನೂತನ ಅಧ್ಯಕ್ಷರಾಗಿ ವಿವೇಕಾನಂದ, ಉಪಾಧ್ಯಕ್ಷರಾಗಿ ಗಾಯಿತ್ರಿ ದೇವಿ ಅವಿರೋಧವಾಗಿ ಆಯ್ಕೆ
ಸಂಜೆ ವಾಣಿ ವಾರ್ತೆ
ಕೊಟ್ಟೂರು : ಪಟ್ಟಣದ ವೀರಶೈವ ಪತ್ತಿನ ಸಹಕಾರ ಸಂಘ ನಿಯಮಿತ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಕೆ.ವಿವೇಕಾನಂದ  ಹಾಗೂ ಉಪಾಧ್ಯಕ್ಷರಾಗಿ ಗಾಯಿತ್ರಿ ದೇವಿ ಈರ್ವರೂ ಮಂಗಳವಾರ ಅವಿರೋಧವಾಗಿ ಆಯ್ಕೆಯಾದರು.
ಚುನಾವಣೆ ಅಧಿಕಾರಿ ಬಿ.ಮಾನಸ ಅಧ್ಯಕ್ಷ -ಉಪಾಧ್ಯಕ್ಷರ ಸ್ಥಾನಗಳನ್ನು ಘೋಷಣೆ ಮಾಡಿದರು. ಈ ವೇಳೆ ನಿರ್ಧೇಶಕರಾದ ಸಿ.ಬಿ.ಕೊಟ್ರೇಶಪ್ಪ, ಎಂ.ಶಿವಣ್ಣ, ಎಸ್.ಕೊಡದಪ್ಪ, ಹೆಚ್.ಪ್ರಕಾಶ, ಬಿ.ಪಂಪಾಪತಿ, ಡಿ.ಶಿವಚರಣ, ಲೀಲಾ ಹಾಜರಿದ್ದರು.
ನೂತನ ಅಧಿಕಾರ ಸ್ವೀಕರಿಸಿದ ಅಧ್ಯಕ್ಷ ಕೆ.ವಿವೇಕಾನಂದ ಅವರು ಮಾತನಾಡಿ ನಾನು ಪಂಚಮಸಾಲಿ ಸಮಾಜದ ವ್ಯಕ್ತಿಯಾಗಿ ಸಮಾಜದ ಸರ್ವರ ಸಲಹೆ ಸೂಚನೆ ಮೇರೆಗೆ ಸಹಕಾರಿ ಬ್ಯಾಂಕ್ ನ ಸರ್ವಾಂಗೀಣ ಅವೃದ್ದಿಗೆ ಹಾಗೂ ಪಂಚಮಸಾಲಿ ಸಮಾಜದ ಬಲವರ್ಧನೆಗೆ ಶ್ರಮಿಸುವೆ ಎಂದು ಭರವಸೆ ನೀಡಿದರು.
ಮಾಜಿ ಅಧ್ಯಕ್ಷರು ಹಾಗೂ ಹಾಲಿ ನಿರ್ದೇಶಕರು ಎಂ.ಶಿವಣ್ಣ ಪ್ರಾರಂಭದಲ್ಲಿ ಸಂಘದಲ್ಲಿ ಕುಳಿತು ಕೊಳ್ಳಲು ಕುರ್ಚಿ, ಎಲೆಕ್ಟ್ರಿಕ್ ವ್ಯವಸ್ಥೆ ಇದ್ದಿಲ್ಲ,ಒಂದು ಸಾವಿರ ರೂ. ಶೇರುದಾರರ ಹಣ ಮತ್ತು ಪಂಚಮಸಾಲಿ ಸಮಾಜದ ದಾನಿಗಳ ಸಹಾಯದಿಂದ ಇಂದು ಈ ಬ್ಯಾಂಕ್ ಈ ಮಟ್ಟದಲ್ಲಿ ಅಭಿವೃದ್ಧಿ ಕಂಡುಕೊಂಡಿದೆ.
ನೂತನ ಅಧ್ಯಕ್ಷರು ಇದನ್ನು ಕಾಯ್ದುಕೊಂಡು ಸಮಾಜದ ಬಂದುಗಳನ್ನ ಗುಂಪಾಗಿ ಪರಿಗಣಿಸದೆ, ಪ್ರತಿಯೊಬ್ಬರು ಪಂಚಮಸಾಲಿಗಳು ಎಂಬ ಮನೋಭಾವದಿಂದ ವಿಶ್ವಾಸಕ್ಕೆ ಪಡೆದು ಅಭಿವೃದ್ಧಿ ಕಡೆ ನಡೆಯಬೇಕು ಎಂದು ಸಲಹೆ ನೀಡಿದರು.
ಉಪಾಧ್ಯಕ್ಷೆ ಗಾಯತ್ರೀ ಅಶೋಕ ,ಪಂಚಮಸಾಲಿ ಸಮಾಜದ ತಾಲೂಕು ಘಟಕ ಅಧ್ಯಕ್ಷರು ಚಾಪಿ ಚಂದ್ರಪ್ಪ, ಪಂಚಮಸಾಲಿ ಮುಖಂಡರಾದ ನೀಲಕಂಠಪ್ಪ,ಖಾನಾವಳಿ ಶಿವಕುಮಾರ್ ಮಾತನಾಡಿದರು.ಭರಮನಗೌಡ ಅವರು ಸ್ವಾಗತಿಸಿ, ವಂದಿಸಿದರು.
ಈ ವೇಳೆ ಪಂಚಮಸಾಲಿ ಸಮಾಜದ ತಾಲೂಕು ಘಟಕದ ಕಾರ್ಯದರ್ಶಿ ಆರ್.ಅಶೋಕ್, ಮುಖಂಡರು ಅಂಗಡಿ ಪಂಪಾಪತಿ, ಅನೀಲ್ ಹೊಸಮನಿ, ಸಿ.ಶಿವಪ್ರಕಾಶ್, ಅಶೋಕ್ ಎಂಜಿನಿಯರ್, ಬೇಲಿಗೌಡ್ರ ಸೋಮಣ್ಣ, ಡಿ.ಕೊಟ್ರೇಶಪ್ಪ, ಹುಲ್ಲುಮನಿ ಮಲ್ಲೇಶ್, ಕೆ.ಬಿ. ಮಲ್ಲಿಕಾರ್ಜುನ, ಪಂಚಮಸಾಲಿ ಸಮಾಜದ ನಿವೃತ್ತ ಉಪ ತಹಶಿಲ್ದಾರ ನಾಗರಾಜ್, ಕೆ.ಶಿವಕುಮಾರ್ ಗೌಡ, ಕಾರ್ಯದರ್ಶಿ ಮುದುಕಪ್ಪ, ಪಿಗ್ಮಿ ಏಜೆಂಟ್ ಪ್ರಕಾಶ್ ಇದ್ದರು.