ಸದ್ಭಾವನೆ ಮಾರ್ಗದಿಂದ ಸಮಾಜ ಸುಧಾರಣೆ ಸಾಧ್ಯ
ರಾಯಚೂರು,ಆ.೨೦-
ಅನ್ಯ ಧರ್ಮಗಳ ಭಾರತೀಯರಲ್ಲಿ ರಾಷ್ಟ್ರೀಯ ಏಕೀಕರಣ ಶಾಂತಿ, ವಾತ್ಸಲ್ಯ, ಮತ್ತು ಕೋಮು ಸೌಹಾರ್ದತೆಯನ್ನು ಉತ್ತೇಜಿಸಲು ಸದ್ಭಾವನಾ ದಿನವನ್ನು ಆಚರಣಗೆ ತರಲಾಗಿದ್ದು, ಸದ್ಭಾವನೆ ಮಾರ್ಗದಿಂದ ನಡೆದಾಗ ಮಾತ್ರ ಸಮಾಜ ಸುಧಾರಣೆಯಾಗಲು ಸಾಧ್ಯ ಎಂದು ರಾಯಚೂರು ವಿಶ್ವವಿದ್ಯಾಲಯದ ಕುಲಸಚಿವರು(ಮೌಲ್ಯಮಾಪನ) ಪ್ರೊ.ಎಂ.ಯರಿಸ್ವಾಮಿ ಅವರು ಅಧ್ಯಕ್ಷೀಯ ನುಡಿಗಳನ್ನಾಡಿದರು.
ರಾಯಚೂರು ವಿಶ್ವವಿದ್ಯಾಲಯದಲ್ಲಿ ಇಂದು ಮಾಜಿ ಪ್ರಧಾನಿ ದಿವಂಗತ ರಾಜಿವ್‌ಗಾಂಧಿ ಅವರ ಜನ್ಮದಿನಾಚರಣೆ ಅಂಗವಾಗಿ ಸದ್ಭಾವನಾ ದಿನವನ್ನು ಹಮ್ಮಿಕೊಂಡಿದ್ದು, ರಾಜೀವ್‌ಗಾಂಧಿ ಅವರು ಏಕತೆ ಮತ್ತು ಕೋಮು ಸೌಹಾರ್ದದ ಪ್ರತಿಪಾದಕರಾಗಿದ್ದರು. ಭಾರತದಂತಹ ವೈವಿದ್ಯಮಯ ರಾಷ್ಟ್ರದಲ್ಲಿ ಏಕತೆಯನ್ನು ಪಾಲನೆಮಾಡುವುದರೊಂದಿಗೆ ವಿವಿಧ ಅಭಿಪ್ರಾಯಗಳನ್ನು ವಿಭಜಿಸುವ ಬದಲು ಆಚರಿಸುವುದು ಎಂಬ ಸಂದೇಶವನ್ನು ಬಲಪಡಿಸುತ್ತದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಕಲಾ ನಿಕಾಯ ಡೀನರಾದ ಪ್ರೊ.ಪಿ.ಭಾಸ್ಕರ್ ವೇದಿಕೆ ಮೇಲೆ ಉಪಸ್ಥಿತರಿದ್ದರು. ವಿವಿಧ ವಿಭಾಗಗಳ ಅತಿಥಿ ಉಪನ್ಯಾಸಕರು, ವಿದ್ಯಾರ್ಥಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು. ಎನ್ ಎಸ್ ಎಸ್ ಸಂಯೋಜನಾಧಿಕಾರಿ ಡಾ.ಜಿ.ಎಸ್.ಬಿರಾದಾರ ಸದ್ಬಾವನಾ ಪ್ರತಿಜ್ಞಾ ವಿಧಿ ಬೋಧಿಸಿದರು. ಎನ್ ಎಸ್ ಎಸ್ ನ ಪುರುಷ ಘಟಕದ ಶಿವರಾಜ ಹರವಿ ಸ್ವಾಗತಿಸಿ, ನಿರೂಪಿಸಿದರು. ಮಹಿಳಾ ಘಟಕದ ನಾಗವೇಣಿ ಸರೋದೆ ವಂದಿಸಿದರು.