ರೈತ ಸಂಘದಿಂದ ಸಭೆ ಬಹಿಷ್ಕಾರ
(ಸಂಜೆವಾಣಿ ಪ್ರತಿನಿಧಿಯಿಂದ)
ಮಾನವಿ,ಆ ೨೧,ಮಾನವಿ, ಸಿರವಾರ ಹಾಗೂ ಮಸ್ಕಿ ತಾಲ್ಲೂಕಿನ ಕೃಷಿ ಪರಿಕರ ಮಾರಾಟಗಾರರ ಸಭೆ ಕೃಷಿ ಅಧಿಕಾರಿ ಗುರುನಾಥ ಅವರು ಪಟ್ಟಣ ಕೃಷಿ ಉತ್ಪನ್ನ ಮಾರುಕಟ್ಟೆ ಸಭಾಂಗಣದಲ್ಲಿ ಆಯೋಜನೆ ಮಾಡಿದ್ದರು.
ಮಾನವಿ, ಸಿರವಾರ ಹಾಗೂ ಮಸ್ಕಿ ತಾಲ್ಲೂಕಿನಲ್ಲಿ ರಸಗೊಬ್ಬರ,ಕೀಟನಾಶಕ ಹಾಗೂ ಬೀಜ ಮಾರಾಟಗಾರರು ೪೪೦ ಅಂಗಡಿ ಮಾಲೀಕರು ಆಗಮಿಸಬೇಕಾಗಿತ್ತು. ಆದರೆ ಕೇವಲ ೬೦ ಮಳಿಗೆಯ ಮಾಲೀಕರು ಸಭೆಯಲ್ಲಿ ಹಾಜರಾಗಿದ್ದರು.
ಇದನ್ನು ಕಂಡ ರೈತ ಸಂಘದ ಮುಖಂಡರು ಹಾಗೂ ಸದಸ್ಯರು ಆಕ್ರೋಶ ಗೊಂಡು ಸಭೆಯಲ್ಲಿ ಸಹಾಯಕ ಕೃಷಿ ನಿರ್ದೇಶಕರು ಹಾಗೂ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳಿಗೆ ಹಾಗೂ ರೈತರಿಗೆ ಮಳಿಗೆ ಮಾಲೀಕರು ಅವಮಾನ ಮಾಡಿದ್ದಾರೆ ಎಂದು ಸಭೆಯನ್ನು ಬಹಿಷ್ಕಾರ ಮಾಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.