ಹೈಕಮಾಂಡ್ ಸಂಸ್ಕೃತಿಗೆ ಎದೆಯೊಡ್ಡಿನಿಂತ ರಾಜಕಾರಣಿ ಅರಸು    – ಡಾ. ಡಿ.ವಿ. ಪರಮಶಿವಮೂರ್ತಿ
ಸಂಜೆವಾಣಿ ವಾರ್ತೆ
ಹೊಸಪೇಟೆ ಆ21 : “ಕರ್ನಾಟಕದ ಆರ್ಥಿಕತೆಗೆ, ರಾಜಕಾರಣಕ್ಕೆ, ಸಮಾಜಕ್ಕೆ, ಸಂಸ್ಕೃತಿಗೆ, ಅದ್ವಿತೀಯ ಕೊಡುಗೆ ನೀಡಿದ, ಹಿಂದುಳಿದ ವರ್ಗಗಳನ್ನು ರಾಜಕೀಯವಾಗಿ ಸಂಚಯಿಸಿದ ಅತ್ಯಂತ ಹೆಸರಾಂತ ಧೀಮಂತ ರಾಜಕಾರಣಿ ಡಿ. ದೇವರಾಜ ಅರಸ ಹೈಕಮಾಂಡ್ ಸಂಸ್ಕೃತಿಗೆ ಎದೆಯೊಡ್ಡಿನಿಂತಿದ್ದರು ಎಂದು ಡಾ.ಡಿ.ವಿ. ಪರಶಿಮಮೂರ್ತಿ ತಿಳಿಸಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ವಿಶೇಷ ಘಟಕ ಅನಿಕೇತನ ವಸತಿ ನಿಲಯದಲ್ಲಿ ಡಿ. ದೇವರಾಜು ಅರಸು ಅವರ 109ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬಹುಸಂಖ್ಯಾತರಾದ ತೀರಾ ಹಿಂದುಳಿದ ವರ್ಗಗಳಿಗೆ ಮರು ಜೀವಕೊಟ್ಟು, ಇತರೆ ಹಿಂದುಳಿದ ವರ್ಗದವರಿಗೆ ದೊಡ್ಡ ಧ್ವನಿಯಾಗುತ್ತಾರೆ. ಉಳ್ಳವರು ಮತ್ತು ಇಲ್ಲದವರ ಮಧ್ಯೆ, ಉಳ್ಳವರ ಪಟ್ಟಿಯಲ್ಲಿ ಇಲ್ಲದವರೂ ಕೂಡ ಅನೇಕ ಜನ ಸೇರಿಹೋಗಿದ್ದರು. ಅದನ್ನು ಗುರುತಿಸದಂತ ದೇವರಾಜು ಅರಸರು ಸಮಾಜದಲ್ಲಿಯ ಅಸಮತೋಲನ ನಿವಾರಣೆಗೆ ವಿಶೇಷ ಮೀಸಲಾತಿಯನ್ನು ಕೊಡುವ ಮೂಲಕ ಶೈಕ್ಷಣಿಕವಾಗಿ ಅವರನ್ನು ಮುಂದುವರೆಯುವಂತೆ ಮಾಡಿದರು. ಅಲ್ಲದೆ ಕರ್ನಾಟಕ ರಾಜ್ಯಾದ್ಯಾಂತ ಓಬಿಸಿ ವಿದ್ಯಾರ್ಥಿಗಳಿಗೆ ವಸತಿನಿಲಯಗಳನ್ನು ಸ್ಥಾಪಿಸಿದರು. ಹಿಂದುಳಿದ ವರ್ಗದ ಜನಸಾಮನ್ಯರ ಅಭಿವೃದ್ಧಿಗಾಗಿ ಇಡೀ ತಮ್ಮ ಅನುಭವವನ್ನು ಧಾರೆಯೆರೆದರು. ಇದಕ್ಕೋಸ್ಕರ ಡಿ. ದೇವರಾಜ ಅರಸರ ಜನ್ಮದಿನಾಚರಣೆಯನ್ನು ಅರ್ಥಗರ್ಭಿತವಾಗಿ ಮಾಡಬೇಕಾಗಿದೆ ಎಂದರು..
ಆಧುನಿಕ ಕರ್ನಾಕಟದ ಕನಸನ್ನು ಕಂಡವರು ಹಾಗೂ ಜಮಿನ್ದಾರಿ ಕುಟುಂಬದಲ್ಲಿ ಜನಿಸಿದರೂ ಸಹ ಎಲ್ಲಾ ಸಮುದಾಯದ ಬಡವರು ಸಹ ಏಳಿಗೆಯನ್ನು ಹೊಂದಬೇಕು ಅನ್ನುವ ಅಸಮಾನ್ಯ ಕನಸನ್ನು ಕಂಡು ಅದನ್ನು ಸಹಕಾರಗೊಳಿಸಲಕ್ಕೆ ಪ್ರಮಾಣಿಕ ಪ್ರಯತ್ನವನ್ನು ಮಾಡುತ್ತಾರೆ. ತಮ್ಮ ಪದವಿ ಹೋದರೂ ಸರಿಯೇ ನನ್ನ ತತ್ವಗಳನ್ನು ನಾನು ತ್ಯೆಜಿಸುದಿಲ್ಲವೆಂದು ಗಟ್ಟಿಯಾಗಿ ನೆಲೆಯೂರಿದ ಹೆಸರಾಂತ ರಾಜಕಾರಣಿ ಡಿ. ದೇವರಾಜ ಅರಸರು. ಅವರು ಕಂಡಂತಹ ಆಧುನಿಕ ಕರ್ನಾಟಕದ ಕನಸನ್ನು, ತತ್ವಗಳನ್ನು ಸಹಕಾರಗೊಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕೈ ಜೋಡಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಸಂಯೋಜನಾಧಿಕಾರಿಗಳಾದ ಡಾ. ಎಸ್.ಆರ್. ಚನ್ನವೀರಪ್ಪ ಮಾತನಾಡಿ, ಹಾವನೂರ ಆಯೋಗವು ಕರ್ನಾಟಕದ ಸಾಮಾಜಿಕ ಮತ್ತು ರಾಜಕೀಯ ಇತಿಹಾಸದಲ್ಲಿ ರಾಜ್ಯದ ಮೀಸಲಾತಿ ನೀತಿಗಳನ್ನು ಸುಧಾರಣೆ ಮಾಡಿ ಸಮಾಜದ ಪಿಂಚಣಿ, ಶಿಕ್ಷಣ ಹಾಗೂ ಉದ್ಯೋಗಾವಕಾಶಗಳಲ್ಲಿ ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ಅಂಚಿತ ಸಮುದಾಯಗಳಿಗೆ ಸಮಾನತೆ ಒದಗಿಸುವಲ್ಲಿ ಮಹತ್ವದ ಪ್ರಭಾವ ಬೀರಿದೆ ಎಂದು ತಿಳಿಸಿದರು.
ವಸತಿ ನಿಲಯ ಪಾಲಕರಾದ ಶೇಖರನಾಯ್ಕ ಅವರು ಸಹಕಾರ ನೀಡಿರುತ್ತಾರೆ. ಕಾರ್ಯಕ್ರಮದಲ್ಲಿ ಬೋಧಕ ಹಾಗೂ ಬೋಧಕೇತರ ವರ್ಗದವರು ಹಾಗೂ ಸಂಶೋಧನಾರ್ಥಿಗಳು ಪಾಲ್ಗೊಂಡಿದ್ದರು.