ಶುಕ್ರವಾರ ಅಹೋರಾತ್ರಿ ಉಪವಾಸ ಧರಣಿ ಸತ್ಯಾಗ್ರಹ ಪ್ರಾರಂಭ
(ಸಂಜೆವಾಣಿ ಪ್ರತಿನಿಧಿಯಿಂದ)
ಮಾನವಿ,ಆ ೨೧,
ಕಂದಾಯ ಇಲಾಖೆಗೆ,ಪುರಸಭೆಗೆ, ತಾಲೂಕು ಪಂಚಾಯತಿಗೆ ಹಾಗೂ ಪಟ್ಟಣದ ಮುಖ್ಯ ವೃತ್ತದಲ್ಲಿ ಬಾರೆ ಬೇಲಿಯನ್ನು ಇಟ್ಟು ಉಪವಾಸ ಸತ್ಯಗ್ರಹ ಮತ್ತು ಪ್ರತಿಭಟನೆ ಮಾಡಲಾಗುವದು.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಜನಸೇವಾ ಸಂಘದ ರಾಜ್ಯಾಧ್ಯಕ್ಷರಾದ ಜಾವಿದ್ ಖಾನ್ ಅವರು ಮಾನವಿ ತಾಲೂಕಿನ ಸರ್ವೆ ನಂಬರ್ ೧೨೭ ವಿಸ್ತೀರ್ಣ ೦೧ ಎಕರೆ ೧೨ ಗುಂಟೆ ಕೃಷಿ ಭೂಮಿಯನ್ನು ಸಾರ್ವಜನಿಕರ ರಸ್ತೆ ಅತಿಕ್ರಮಣ ಮಾಡಿ, ನಗರ ಯೋಜನಾ ಪ್ರಾಧಿಕಾರ ಹಾಗೂ ಪುರಸಭೆ ಕಾರ್ಯಾಲಯದಿಂದ ಮತ್ತು ಜೆಸ್ಕಾಂ ಇಲಾಖೆಯಿಂದ ಯಾವುದೆ ಪರವಾನಿಗೆ ಪಡೆಯದೆ ಬೃಹತ್ ಐದು ಹಂತಸ್ತಿನ ಕಟ್ಟಡ ನಿರ್ಮಾಣ ಮಾಡಿದ ಆಲ್ದಾಳ್ ವೀರಭದ್ರಪ್ಪ ತಂದೆ ಬಸನಗೌಡ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಹಾಗೂ ಅಕ್ರಮವಾಗಿ ಕಟ್ಟಿದ ಕಟ್ಟಡವನ್ನು ನೆಲಸಮ ಮಾಡಬೇಕು.
ತಾಲೂಕಿನಲ್ಲಿ ಇರುವ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ರಾಯಚೂರು ಗ್ರಾಮೀಣ ಭಾಗದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ತಮ್ಮ ಸ್ವಂತ ಲಾಭಕ್ಕಾಗಿ ಅಧಿಕಾರಿಗಳು ಮತ್ತು ಕಟ್ಟಡದ ಮಾಲೀಕರು ಸೇರಿ ವಿದ್ಯಾರ್ಥಿಗಳಿಗೆ ಮೂಲ ಭೂತ ಸೌಕರ್ಯಗಳು ಇಲ್ಲದೆ ಸರಿಯಾದ ಶೌಚಾಲಯ ವೆವಸ್ಥೆ ಇಲ್ಲದಿರುವದು ಹಾಗೂ ಊಟದ ವ್ಯವಸ್ಥೆಗೆ ಸರಿಯಾದ ಕೊಠಡಿ ಇಲ್ಲದಿರುವದು ಹಾಗೂ ಕೇವಲ ಒಂದೆ ಚಿಕ್ಕ ಕೊಠಡಿಯಲ್ಲಿ ಸರಿ ಸುಮಾರು ೨೫-೩೦ ವಿದ್ಯಾರ್ಥಿನಿಯರಿಗೆ ಕಾಲು ಚಾಚಲು ಜಾಗವಿಲ್ಲದೆ ವಿದ್ಯಾರ್ಥಿಗಳು ನರಳುತ್ತಿದ್ದಾರೆ.
ಅಧಿಕಾರಿಗಳು ಮತ್ತು ಮುಖ್ಯೋಪಾಧ್ಯಯರು ಸೇರಿ ವಿದ್ಯಾರ್ಥಿಗಳಿಗೆ ಪಾಲಕರಿಗೆ ದೊಡ್ಡ ಮೋಸ ಮಾಡುತ್ತಿದ್ದಾರೆ, ಕೇವಲ ಲೂಟಿ ಮಾಡುವುದು ಇವರ ಕೆಲಸವಾಗಿಬಿಟ್ಟಿದೆ. ನಮ್ಮ ಸಂಘದ ಮುಖಂಡರು ಹಾಗೂ ಸದಸ್ಯರು ಪ್ರಶ್ನೆ ಮಾಡಲು ಹೋದರೆ ಗುಂಡಗಳನ್ನು ಬಿಟ್ಟು ಹೆದರಿಸಿತ್ತಾರೆ. ಗುಂಡಗಳ ವಿರುದ್ಧ ದೂರು ನೀಡಲು ಹೋದರೆ ನಮ್ಮ ತಾಲೂಕಿನ ಶಾಸಕರಾದ ಹಂಪಯ್ಯ ನಾಯಕ್ ಅವರು ಪೊಲೀಸರಿಗೆ ಕರೆ ಮಾಡಿ ಗೌಡ ನಮ್ಮ ಪರವಾಗಿ ಇದ್ದಾರೆ. ಯಾರಾದರೂ ಅವರ ವಿರುದ್ಧ ದೂರು ನೀಡಲು ಬಂದರೆ,ಅವರನ್ನು ಒದ್ದು ಒಳಗಡೆ ಹಾಕಿ ಎಂದು ಪೊಲೀಸರಿಗೆ ಸೂಚಿಸುತ್ತಾರೆ.
ಇದು ಯಾವ ನ್ಯಾಯ ಕೂಡಲೆ ಇಂತ ಅಧಿಕಾರಿಗಳನ್ನು ಮತ್ತು ಮುಖ್ಯೋಪಾಧ್ಯಯರನ್ನು ಸೇವೆಯಿಂದ ಅಮಾನತ್ತು ಮಾಡಿ ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸಬೇಕು ಎಂದರು.
ನಂತರ ಮಾತನಾಡಿದ ರೈತರ ಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆಯಾದ ಅನಿತಾ ನವಲಕಲ್ ಅವರು ಪಟ್ಟಣದ ಪುರಸಭೆ ಅಧಿಕಾರಿಗಳು ಭಾರಿ ಭ್ರಷ್ಟಾಚಾರ ಮಾಡಿ ಸಿ.ಎ. ಸೈಟ್‌ನಲ್ಲಿ ಸ.ನಂ:೧೬//೩ ಎನ್, ಭೂಮಿಯ ಮುನ್ಸಿಪಲ್ ನಂ: ೧೪-೬-೫೭೩/೧೬/೧/೩/೧೭ ಜಾಗದಲ್ಲಿ ೯ ರಿಂದ ೧೦ ಮನೆಗಳು ಶಿವರಾಜ ಪಾಟೀಲ್ ತಂ/ ವೀರನಗೌಡ ಇವರು ಏಕ ನಿವೇಶನ ವಿನ್ಯಾಸ ಅನುಮೋದನೆಯಂತೆ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ.ವಿನ್ಯಾಸ ಅನುಮೋಧನೆಯಲ್ಲಿ ೯ ಮೀಟರ್ ರಸ್ತೆ ತೋರಿಸಿದ್ದು ರಸ್ತೆಯನ್ನು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ. ನಮ್ಮ ಮಾನವಿ ಪಟ್ಟಣದಲ್ಲಿ ಜನಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಆದರೆ ಗುಲ್ಬರ್ಗಾ ವಿದ್ಯುತ್ ಪ್ರಸರಣ ನಿಗಮ.ನಿ ವತಿಯಿಂದ ಮಾನವಿ ತಾಲೂಕಿನ ಜನರಿಗೆ ಸರಿಯಾಗಿ ವಿದ್ಯುತ್ ನೀಡದೆ ಮೋಸ ಮಾಡುತ್ತಿದ್ದಾರೆ. ಸಿಂಧನೂರು ರಸ್ತೆಯ ಯರಮಲದೊಡ್ಡಿ ಗ್ರಾಮದ ಸ.ನಂ:೧೨೭//೩ ರಲ್ಲಿ ಆಲ್ದಾಳ್ ವೀರಭದ್ರಪ್ಪ ತಂದೆ ಬಸನಗೌಡ ಕಟ್ಟಡಕ್ಕೆ ಯಾವುದೆ ಅನುಮತಿ ಹಾಗೂ ನಗರ ಯೋಜನಾ ಪ್ರಾಧಿಕಾರದಿಂದ ಮತ್ತು ಪುರಸಭೆ ಮಾನವಿ ವತಿಯಿಂದ ಕಟ್ಟಡ ಪರವಾನಿಗೆ ಪಡೆಯದೆ ಕಟ್ಟಡ ನಿರ್ಮಾಣ ಮಾಡಿದ ಕಟ್ಟಡಕ್ಕೆ ಹತ್ತು ಅಕ್ರಮ ಆರ್.ಆರ್. ನಂಬರಗಳನ್ನು ನೀಡಿ ಅಕ್ರಮವೆಸಗಿದ್ದಲ್ಲದೆ.
ವಿದ್ಯುತ್ ಮಾಪಕವನ್ನು ಅಳವಡಿಸಿದ್ದಾರೆ.
ಕೂಡಲೆ ಜೆ.ಇ.ಹಾಗೂ ಗುತ್ತೇದಾರರಾ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಅಧಿಕಾರಿಗಳನ್ನು ಸೇವೆಯಿಂದ ಅಮಾನತ್ತು ಮಾಡಿ, ಗುತ್ತೇದಾರರ ಪರವಾನಿಗೆಯನ್ನು ಕಷ್ಟು ಪಟ್ಟಿಗೆ ಸೇರಿಸಬೇಕು ಎಂದರು.
ಈ ಸಂದರ್ಭದಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಹೊಳೆಯಪ್ಪ ಊಟಕನೂರ್, ಅಮರೇಶ್ ಕಾವಲಿ, ಪ್ರದೀಪ್ ಕಪಗಲ್, ಸಯ್ಯದ್ ಮುದಸೀರ್, ಚಂದ್ರಶೇಖರ್ ನೀರಮಾನವಿ,ಬಸವರಾಜ,ಸಿ.ಎಂ ಮಲ್ಲೇಶ, ವಿಜಯಕುಮಾರ ಕೆ. ,ಸಮೀರ ಪಾಷಾ, ಗಂಗಾಧರ ರಾವ್, ಚನ್ನಪ್ಪ, ಹನುಮಂತ ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು.