ಫಸಲ್ ಬೀಮಾ ಯೋಜನೆಯಲ್ಲಿ ಅವ್ಯವಹಾರ ಖಂಡಿಸಿ ಅಂಕಿ ಸಂಖ್ಯೆ ಇಲಾಖೆಗೆ ಬೀಗ ಜಡಿದು ರೈತರ ಪ್ರತಿಭಟನೆ
ಸಂಜೆವಾಣಿ ವಾರ್ತೆ,
ವಿಜಯಪುರ,ಅ.೨:ಜಿಲ್ಲೆಯಲ್ಲಿ ಫಸಲ್ ಭೀಮಾ ಯೋಜನೆಯಡಿ ಸಾಕಷ್ಟು ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿಗೆ ಬೀಗ ಜಡಿದು ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
೨೦೨೩-೨೪ ರಲ್ಲಿ ಜಿಲ್ಲೆಯಲ್ಲಿ ಹಾನಿ ಅನುಭವಿಸಿದ ಎಲ್ಲ ರೈತರಿಗೂ ಬೆಳೆ ವಿಮೆಯ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ನಗರದ ಅಂಬೇಡ್ಕರ ವೃತ್ತದಿಂದ ಜಿಲ್ಲಾಡಳಿತದ ವಿರುದ್ಧ ಹಾಗೂ ಸಂಬAಧಿಸಿದ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ಮಾಡಿ ೪ ಘಂಟೆಗಳ ಕಾಲ ಧರಣಿ ಮಾಡಿ ವಿಮೆಯಲ್ಲಿ ಆಗಿರುವ ಮೋಸವನ್ನು ಸರಿಪಡಿಸಿ ನಷ್ಟಗೊಂಡ ರೈತರಿಗೆ ಪರಿಹಾರ ನೀಡಲೇಬೇಕು ಎಂದು ಪ್ರತಿಭಟನೆಕಾರರು ಒತ್ತಾಯಿಸಿದರು.
ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಅವರು ಮಾತನಾಡಿ, ಕಳೆದ ೩ ತಿಂಗಳಿನಿAದ ವಿಮೆಯಲ್ಲಿ ಆಗಿರುವ ಅನ್ಯಾಯದ ವಿರುದ್ಧ ಹೋರಾಟ ಮಾಡಿ ಸರಕಾರಕ್ಕೂ ಮನವಿ ಮಾಡಿದ್ದಾಗ್ಯೂ ಇಲ್ಲಿಯವರೆಗೆ ಮಾಹಿತಿ ನೀಡುತ್ತಿಲ್ಲ, ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜಂಟಿ ಇಲಾಖೆಗಳಿಂದ ಕೈಗೊಂಡ ಬೆಳೆ ಸಮೀಕ್ಷೆ ಹಾಗೂ ಬೆಳೆ ಕಟಾವು ಮಾಡಿರುವ ವರದಿ, ಫೋಟೊ ಹಾಗೂ ವಿಡಿಯೋ ನೀಡಬೇಕು, ಫಸಲ್ ಭೀಮಾ ಯೋಜನೆ ಅನ್ನುವುದು ಅವೈಜ್ಞಾನಿಕ ಹಾಗೂ ಅಪಾರದರ್ಶಕವಾಗಿದೆ. ಇವುಗಳ ಸಂಪೂರ್ಣ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.
ಕಳೆದ ವರ್ಷ ಬರಗಾಲದಿಂದ ತತ್ತರಿಸಿರುವ ರೈತರಿಗೆ ರಾಜ್ಯ ಹಾಗೂ ಕೇಂದ್ರ ಪ್ರಕೃತಿ ವಿಕೋಪದ ಪರಿಹಾರದಡಿ ೪೧೩ ಕೋಟಿ ನೀಡಿದ್ದರು, ರೈತರಿಗೆ ಅಲ್ಪ ಸ್ವಲ್ಪವಾದರೂ ಅನುಕೂಲವಾಗಲಿ ಎನ್ನುವ ದೃಷ್ಟಿಕೊನದಿಂದ ಸಾಲಮಾಡಿ ೨೦೨೩-೨೪ ನೇ ಸಾಲಿನ ಫಸಲ್ ಭೀಮಾ ಯೋಜನೆಯಡಿ ವಿಮಾ ಹಣ ತುಂಬಿದ್ದರು. ಆದರೆ ವಿಮಾ ಕಂಪನಿಯವರು ಸ್ಥಳೀಯ ಅಧಿಕಾರಿಗಳೊಡನೆ ಸೇರಿ ಜಿಲ್ಲೆಯ ಹಲವಾರು ಕಡೆಗಳಲ್ಲಿ ಬೆಳೆ ಚೆÀನ್ನಾಗಿ ಬಂದಿದೆ ಎಂದು ತಪ್ಪು ವರದಿ ಸಲ್ಲಿಸಿ ಅನೇಕರಿಗೆ ವಿಮೆ ಬಾರದ ಹಾಗೆ ಮಾಡಿರುತ್ತಾರೆ ಎಂದು ಹೇಳಿದರು.
ಕೊಲ್ಹಾರ ತಾಲೂಕಾ ಅಧ್ಯಕ್ಷ ಸೋಮು ಬಿರಾದಾರ ಅವರು ಮಾತನಾಡಿ, ಇದಕ್ಕೆ ಉತ್ತರ ನೀಡಬೇಕಿರುವ ಕೃಷಿ ಸಚಿವರು, ಕೃಷಿ ಆಯುಕ್ತರು, ಜಿಲ್ಲಾಧಿಕಾರಿಗಳು, ಜಂಟಿ ಕೃಷಿ ನೀರ್ದೇಶಕರು, ತೋಟಗಾರಿಕಾ ಸಹಾಯಕ ನಿರ್ದೇಶಕರು, ಕಂದಾಯ ಇಲಾಖೆ, ಪಂಚಾಯತ್ ರಾಜ್ಯ ಇಲಾಖೆ ಹಾಗೂ ವಿಮೆ ಅಧಿಕಾರಿಗಳು ನಮ್ಮ ಹತ್ತಿರ ಮಾಹಿತಿ ಇಲ್ಲ, ಅವರಿಗೆ ಕೇಳಿ, ಇವರಿಗೆ ಕೇಳಿ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದರು.
ಫಸಲ್ ಭೀಮಾ ಯೋಜನೆಯಡಿ ೧೩೧ ಕೋಟಿ ವಿಮೆ ಪರಿಹಾರ ಕೊಟ್ಟು ಕೈತೊಳೆದುಕೊಂಡಿದ್ದಾರೆ, ಬರಗಾಲದಿಂದ ತತ್ತರಿಸಿರುವ ಜಿಲ್ಲೆಗೆ ಸುಮಾರು ೧೦೦೦ ಕೋಟಿ ಪರಿಹಾರ ಬರಬೇಕಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷö್ಯ ಹಾಗೂ ಶಾಮಿಲಾಗಿರುವುದರಿಂದ ಪರಿಹಾರ ಬಾರದೇ ಪರಿತಪಿಸುವಂತಾಗಿದೆ ಎಂದರು.
ದೇವರ ಹಿಪ್ಪರಗಿ ತಾಲೂಕು ಅಧ್ಯಕ್ಷ ಈರಪ್ಪ ಕುಳೆಕುಮಟಗಿ ಮಾತನಾಡಿ, ಕೂಡಲೇ ವಿಜಯಪುರ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಬೆಳೆ ವಿಮೆ ಅಡಿಯಲ್ಲಿ ಕೈಗೊಂಡಿರುವ ರೈತರ ಜಮೀನಿನ ಸರ್ವೇ ನಂಬರ ಆಯ್ಕೆಯ ದಿನಾಂಕ ಹಾಗೂ ವಿವರ, ಬೆಳೆ ಸಮೀಕ್ಷೆ ಹಾಗೂ ಬೆಳೆ ಕಟಾವು ಮಾಡಿರುವ ಫೋಟೋ ಹಾಗೂ ವಿಡಿಯೋ ವಿವರ ಹಾಗೂ ಅಧಿಕಾರಿಗಳ ವಿವರ, ವಿಮೆ ಇತ್ಯರ್ಥ ಪಡಿಸಿದ ವಿವರ, ಇವುಗಳ ಮಾಹಿತಿ ಶೀಘ್ರದಲ್ಲಿ ನೀಡಬೇಕು.
ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ಸೋಮಲಿಂಗಯ್ಯ ಗೆಣ್ಣೂರ, ತೋಟಗಾರಿಕಾ ಸಹಾಯಕ ನಿರ್ದೇಶಕÀ ರಾಹುಲ್ ಬಾವಿದೊಡ್ಡಿ, ಜಂಟಿ ಕೃಷಿ ಇಲಾಖೆ ಸಿಬ್ಬಂದಿ, ಹಾಗೂ ಜಿಲ್ಲಾ ಪ್ರಭಾರಿ ಸಂಖ್ಯಾ ಸಂಗ್ರಣಾಧಿಕಾರಿ ಅಲ್ತಾಫ ಮಣಿಯಾರ ಸೇರಿಕೊಂಡು ನಮಗೆ ಮಾಹಿತಿ ನೀಡಲು ಮೇಲಿಂದ ಆದೇಶ ಬಂದಿದೆ. ನೀವು ಕೇಳಿದ ಮಾಹಿತಿಯನ್ನು ನಾವೂ ಕೊಡುತ್ತೇವೆ ಎಂದು ಹೇಳಿದರು. ನಂತರ ಜಿಲ್ಲಾಧಿಕಾರಿಗಳು ಹಾಗೂ ವಿಮೆಗೆ ಸಂಬAಧಿಸಿದ ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಗೂ ರೈತ ಮುಖಂಡರೊಡನೆ ಸಭೆ ಮಾಡಿ ನಷ್ಟಗೊಂಡ ರೈತರಿಗೆ ಪರಿಹಾರ ಕೊಡಿಸಬೇಕು ಎಂದು ಸೂಚನೆ ಮೇರೆಗೆ ಹೋರಾಟ ಹಿಂಪಡೆಯಲಾಯಿತು.
ಜಿಲ್ಲಾ ಸಂಚಾಲಕ ರಾಮನಗೌಡ ಪಾಟೀಲ, ಹೋರಾಟಗಾರ ಸತೀಶ ಪಾಟೀಲ, ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕÀ ಅಕ್ಷಯಕುಮಾರ ಅಜಮನಿ, ರೈತ ಮುಖಂಡÀ ರಘುನಾಥ ಖಾಡೆ, ಜಕರಾಯ ಪೂಜಾರಿ ಮಾತನಾಡಿದರು.
ಈ ವೇಳೆ ಜಿಲ್ಲಾ ಸಂಚಾಲಕÀ ರಾಮನಗೌಡ ಪಾಟೀಲ, ಮಹಾಂತೇಶ ಮಮದಾಪುರ, ವಿಜಯಪುರ ತಾಲೂಕಾ ಅಧ್ಯಕ್ಷ ಮಹಾದೇವಪ್ಪ ತೇಲಿ, ತಾಳಿಕೋಟೆ ತಾಲೂಕು ಅಧ್ಯಕ್ಷ ಶ್ರೀಶೈಲ ವಾಲಿಕಾರ, ಬಬಲೇಶ್ವರ ತಾಲೂಕು ಅಧ್ಯಕ್ಷÀ ಮಕಬುಲ್ ಕೀಜಿ, ತಿಕೋಟಾ ತಾಲೂಕು ಅಧ್ಯಕ್ಷ ಸಾತಲಿಂಗಯ್ಯ ಸಾಲಿಮಠ, ಚಡಚಣ ತಾಲೂಕು ಅಧ್ಯಕ್ಷ ಮಹಾದೇವ ಬನಸೋಡೆ, ಇಂಡಿ ತಾಲೂಕು ಅಧ್ಯಕ್ಷ ಎಂ.ಹೆಚ್. ಪೂಜಾರ, ತಾಳಿಕೋಟೆ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಸುಜಾತಾ ಅವಟಿ, ವಿಜಯಪುರ ತಾಲೂಕು ಅಧ್ಯಕ್ಷೆ ಸವಿತಾ ವಾಲಿಕರ, ತಿಕೋಟಾ ತಾಲೂಕ ಮಹಿಳಾ ಘಟಕದ ಅಧ್ಯಕ್ಷೆ ಸಂಗೀತಾ ರಾಠೋಡ, ಮಹಾದೇವ ಕದಂ, ಗೌಡಪ್ಪಗೌಡ ಹಳಿಮನಿ, ಬಸವರಾಜ ಮಸೂತಿ, ಅನವೇಶ ಜಮಖಂಡಿ, ಶಾನೂರ ನಂದರಗಿ, ಆತ್ಮಾನಂದ ಭೈರೊಡಗಿ, ಶಶಿಕಾಂತ ಬಿರಾದಾರ, ಸತ್ಯಪ್ಪ ಕಲ್ಲೊಳ್ಳಿ, ಕುಮಾರ ಕಾಪ್ಸೆ ಸೇರಿದಂತೆ ನೂರಾರು ಜನ ಇದ್ದರು.