ಅಕ್ಷರ ಜಾತ್ರೆ ಹೊಟ್ಟೆಯ ಜೊತೆಗೆ ನೆತ್ತಿಗೆ ಜ್ಞಾನ ತುಂಬಿದೆ:ಗುAಡಕನಾಳಶ್ರೀ
ತಾಳಿಕೋಟೆ : ಅ.೨:ಅಕ್ಷರ ಜಾತ್ರೆ ಎಂದರೆ ಜ್ಞಾನದ ಜಾತ್ರೆಯಾಗಿದೆ ಪ್ರತಿ ಜಾತ್ರೆಯಲ್ಲಿ ಹೊಟ್ಟೆ ತುಂಬಿದರೆ ಇಲ್ಲಿ ಹೊಟ್ಟೆಯ ಜೊತೆಗೆ ನೆತ್ತಿಯಲ್ಲಿ ಜ್ಞಾನ ತುಂಬುತ್ತಿದೆ ಅಂತಹ ಕಾರ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಹಾಸಿಂಫೀರ ವಾಲಿಕಾರ, ತಾಲೂಕಾ ಅಧ್ಯಕ್ಷ ಆರ್.ಎಲ್.ಕೊಪ್ಪದ ಅವರು ಮಾಡಿದ್ದಾರೆಂದು ಗುಂಡಕನಾಳ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.
ಮಂಗಳವಾರರAದು ಪಟ್ಟಣದ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ತಾಳಿಕೋಟೆ ನೇತೃತ್ವದಲ್ಲಿ ಕರ್ನಾಟಕ ಸುವರ್ಣ ಸಂಭ್ರಮ-೫೦ ರ ಅಂಗವಾಗಿ ಶ್ರೀ ಸಂಗಮೇಶ್ವರ ಸಭಾಭವನದಲ್ಲಿ ನಡೆದ ತಾಳಿಕೋಟೆ ತಾಲೂಕಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ದಿವ್ಯ ಸಾನಿದ್ಯ ವಹಿಸಿ ಮಾತನಾಡುತ್ತಿದ್ದ ಅವರು ಕನ್ನಡ ಭಾಷೆ ಸಾಂಸ್ಕೃತ ಭಾಷೆಯ ನಂತರ ಎರಡನೇ ಭಾಷೆಯೇ ಕನ್ನಡ ಭಾಷೆಯಾಗಿದೆ ಹಲ್ಮಿಡಿ ಶಾಸನದಿಂದ ಬಂದ ಕನ್ನಡ ಭಾಷೆ ಅತ್ಯಂತ ಪ್ರಾಚೀನ ಭಾಷೆಯಾಗಿದೆ ಈ ಕನ್ನಡ ಭಾಷೆಗೆ ವಿಶಿಷ್ಠವಾದ ಸ್ಥಾನಮಾನವಿದೆ ನಾಲಿಗೆ ಹಿತವನ್ನು ನೀಡುವ ಕನ್ನಡ ಭಾಷೆಗೆ ದೊಡ್ಡ ಗೌರವವಿದೆ ಎಂದ ಅವರು ಕನ್ನಡ ಕಂಪು ಶ್ರೀ ಖಾಸ್ಗತಜ್ಜನ ನೆಲದಲ್ಲಿ ಬೆಳಗಲಿಕ್ಕೆ ಹತ್ತಿದೆ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಕನ್ನಡ ಸಾಹಿತ್ಯಕ್ಕೆ ಕೊಡುಗೆಯನ್ನು ನೀಡಿದ ಡಾ.ಜಿ.ಎಂ.ಘೀವಾರಿ ಅವರನ್ನು ಆಯ್ಕೆ ಮಾಡಿರುವದು ಶ್ಲಾಘನೀಯವಾಗಿದೆ ಎಂದರು.
ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಳಗಾನೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಶ್ರೀಮತಿ ಮಡಿವಾಳಮ್ಮ ನಾಡಗೌಡ ಅವರು ಮಾತನಾಡಿ ಕನ್ನಡ ಮನಸ್ಸುಗಳು ಒಗ್ಗೂಡಿ ನಡೆಸಿದ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯತ್ತ ದಾಪುಗಾಲು ಹಾಕಿ ಇತಿಹಾಸ ನಿರ್ಮಿಸಿದೆ ಎಂದ ಅವರು ತಾಲೂಕಾ ಕನ್ನಡ ಸಮ್ಮೇಳನಕ್ಕೆ ಜಿಲ್ಲೆಯ ವಿವಿಧ ಭಾಗಗಳಿಂದ ಸಾಕಷ್ಟು ಸಾಹಿತಿಗಳು, ಕವಿಗಳು, ಜಾನಪದ ಕಲಾವಿದರು ಆಗಮಿಸಿ ಸಮ್ಮೇಳನದ ಯಶಸ್ವಿಗೆ ಕಾರಣೀಕರ್ತರಾಗಿದ್ದಾರೆ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಹಾಸಿಂಫೀರ ವಾಲಿಕಾರ ಹಾಗೂ ತಾಲೂಕಾ ಅಧ್ಯಕ್ಷ ಆರ್.ಎಲ್.ಕೊಪ್ಪದ ಅವರು ಸುಮಾರು ತಿಂಗಳಾAತ್ಯದಿAದ ಶ್ರಮವಹಿಸಿ ನೂರಾರು ಕೈಗಳನ್ನು ಜೊತೆಗೂಡಿಸಿಕೊಂಡು ಸಮ್ಮೇಳನದ ಯಶಸ್ವಿಗೆ ಕಾರಣರಾಗಿದ್ದಾರೆ, ಕನ್ನಡ ಭಾಷೆ ಆಡು ಭಾಷೆಯಾಗದೇ ಹೃದಯ ಶ್ರೀಮಂತಿಕೆ ಹೊಂದಿದ ಭಾಷೆಯಾಗಿದೆ ಇಂತಹ ಭಾಷೆಯ ಅಭಿಮಾನವನ್ನು ಎಲ್ಲರೂ ಮೈಗೂಡಿಸಿಕೊಂಡು ಮುನ್ನಡೆಯಬೇಕೆಂದರು.
ಇನ್ನೋರ್ವ ಅತಿಥಿ ಬಿದರಕುಂದಿಯ ಶ್ರೀಮತಿ ಸುಮಲತಾ ಗಡಿಯಪ್ಪನವರ ಅವರು ಮಾತನಾಡಿ ಕನ್ನಡ ಸಾಹಿತ್ಯಕ್ಕೆ ಜಾನಪದ ಸಾಹಿತ್ಯ ಮತ್ತು ಕವನಗಳು, ಕೊಡುಗೆಯನ್ನು ನೀಡಿದ್ದು ಸ್ಮರಿಸಿದ ಅವರು ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾಳಜಿ ಕುರಿತು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಎಸ್.ಕೆ.ಪಿ.ಯು.ಕಾಲೇಜ್ ಪ್ರಾಚಾರ್ಯ ಕೆ.ಕಿಶೋರಕುಮಾರ ಅವರು ಮಾತನಾಡಿ ಕನ್ನಡ ನಾಡು ಸಂಪತ್ತು ಬರೀತವಾದ ನಾಡು ಆಗಿದೆ ಇಲ್ಲಿ ಅನೇಕ ಕವಿಗಳು, ಸಾಹಿತಿಗಳು ಹುಟ್ಟಿ ಕನ್ನಡ ನಾಡಿಗೆ ಕೊಡುಗೆಯನ್ನು ನೀಡಿದ್ದಾರೆ ನಮ್ಮ ಮಕ್ಕಳಿಗೆ ನಮ್ಮ ನಾಡಿನ ಸಂಸ್ಕಾರ, ಆಚಾರ, ವಿಚಾರ ಒಳಗೊಂಡು ತಿಳುವಳಿಕೆ ನೀಡಬೇಕಿದೆ ತಾಳಿಕೋಟೆ ತಾಲೂಕಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಸ್ವರ್ಗಕ್ಕೆ ಸಮಾನವಾಗಿ ಜರುಗಿದೆ ಎಂದರು.
ಇದೇ ಸಮಯದಲ್ಲಿ ಅನೇಕ ಕವಿಯೇತ್ರಿಯರು ಕವನ ಶಿರ್ಷಿಕೆಯೊಂದಿಗೆ ಅನೇಕ ಕವನಗಳನ್ನು ವಾಚಿಸಿದರು. ಕವಿಯೇತ್ರಿಯರಿಗೆ ಸನ್ಮಾನಿಸಿ ಸತ್ಕರಿಸಲಾಯಿತು.
ಕಾರ್ಯಕ್ರಮವನ್ನು ಬಿಇಓ ಬಿ.ಎಸ್.ಸಾವಳಗಿ ಅವರು ಉದ್ಘಾಟಿಸಿದರು.
ಇದೇ ಸಮಯದಲ್ಲಿ ಪುರಸಭಾ ಸದಸ್ಯರುಗಳಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯ ಮೇಲೆ ಶಿಕ್ಷಕ ಆರ್.ಬಿ.ದಮ್ಮೂರಮಠ, ಪ್ರಭುಗೌಡ ಚೌದ್ರಿ, ಬಿ.ಆರ್.ಪೊಲೀಸ್‌ಪಾಟೀಲ, ಪಿ.ಬಿ.ಭಂಟನೂರ, ಎಂ.ಎ.ಬಾಗೇವಾಡಿ, ಬಾಪುಗೌಡ ಬಿರಾದಾರ, ಸಂಗಮೇಶ ದೇಸಾಯಿ, ಶ್ರೀಮತಿ ಸಜ್ಜನ, ಶಶಿಧರ ಡಿಸಲೆ, ನಿಸಾರ ಬೇಪಾರಿ, ಘನಶಾಮ ಚವ್ಹಾಣ, ಎಂ.ಸಿ.ಯಾಳವಾರ, ಆರ್.ಜೆ.ರಾಠೋಡ, ಅವರು ಉಪಸ್ಥಿತರಿದ್ದರು.