ಹಬೋಹಳ್ಳಿ :ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ್ ಅರಸು ಜಯಂತಿ
ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಆ.21 ಸಮಾಜ ಸುಧಾರಣೆ ಮಾಡುವ ಮೂಲಕ  ಮಾಜಿ ಮುಖ್ಯಮಂತ್ರಿ ದಿ.ದೇವರಾಜ್ ಅರಸು ಹಿಂದುಳಿದ ಶೋಷಿತ ವರ್ಗದವರಿಗೆ ನ್ಯಾಯ ಒದಗಿಸಿದ್ದಾರೆ ಎಂದು  ತಹಸೀಲ್ದಾರ್ ಆರ್. ಕವಿತ ಹೇಳಿದರು.
ಪಟ್ಟಣದ  ತಾ ಪಂ ಸಭಾಂಗಣದಲ್ಲಿ ತಾಲೂಕ ಆಡಳಿತ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಮಂಗಳವಾರ  ಡಿ ದೇವರಾಜ ಅರಸು ಅವರ 109ನೇ ದಿನಾಚರಣೆ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು ಬಡವರ, ಶೋಷಿತರ ಹಿಂದುಳಿದವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಅವರ ಆದರ್ಶಗಳು ನಮಗೆಲ್ಲ ದಾರಿದೀಪವಾಗಬೇಕು ಎಂದರು.
ತಾ ಪಂ ಇ ಒ ಜಿ ಪರಮೇಶ್ವರಪ್ಪ ಮಾತನಾಡಿ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಗ್ರಾಮೀಣ ಪ್ರದೇಶದಲ್ಲಿ ಮೊಟಕುಗೊಳಬಾರದೆಂದು ಎಂದು ವಿದ್ಯಾರ್ಥಿಗಳ ಅನುಕೂಲಕ್ಕೆ ಹಾಸ್ಟೆಲ್ ಗಳನ್ನು ತೆರೆಯುವ  ಮೂಲಕ ಹಲವಾರು ವಿದ್ಯಾರ್ಥಿಗಳ ಭವಿಷ್ಯ ನಿರ್ಮಿಸಿದರು. ಕೃಷಿ ಕುಟುಂಬದಿಂದ ಬಂದವರಾಗಿದ್ದು. ಅವರಿಗೆ ಮಧ್ಯಮ ವರ್ಗ ಮತ್ತು ಬಡ ಕುಟುಂಬದ ಬಗ್ಗೆ ಅನುಭವ ವಿತ್ತು. ಮೈಸೂರು ರಾಜ್ಯವನ್ನು  ಕರ್ನಾಟಕ ನಾಮಕರಣ ಮಾಡಿರುವ ಕೀರ್ತಿ ಅರಸು ಅವರಿಗೆ ಸಲ್ಲುತ್ತದೆ ಎಂದರು.
ಕಾರ್ಯಕ್ರಮದ ಪ್ರಾಸ್ತವಿಕ ಹಿಂದುಳಿದ ವರ್ಗದ  ಕಲ್ಯಾಣಾಧಿಕಾರಿ ವಿ ರಮೇಶ್ ಮಾತನಾಡಿದರು.
ಡಾ. ಬಿ ಆರ್ ಅಂಬೇಡ್ಕರ್ ಸಂಘದ ತಾಲೂಕ ಅಧ್ಯಕ್ಷ ದೊಡ್ಡಬಸಪ್ಪ ಮಾತನಾಡಿದರು.
ಕಾರ್ಯಕ್ರಮದಲ್ಲಿ ದೇವರಾಜ್ ಅರಸ್ ಕುರಿತು ಪ್ರಾಂಶುಪಾಲರಾದ  ಡಾ. ದುರುಗಪ್ಪ ಉಪನ್ಯಾಸ ನೀಡಿದರು.
 ಈ ಸಂದರ್ಭದಲ್ಲಿ ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ರಮೇಶ್ ಮಹಾಲಿಂಗಪುರ, ಚಲವಾದಿ ಮಹಾಸಭಾ ತಾಲೂಕ ಅಧ್ಯಕ್ಷ  ಕಹಳೆ ಬಸವರಾಜ್, ಬಿಸಿಎಂ ಅಧಿಕಾರಿಗಳಾದ ವೀಣಾ ಮಹಾಂತೇಶ್ ಬಸವರಾಜ್ ಇತರರಿದ್ದರು