ಆ.೨೪ ಕ್ಕೆ ದೇವನಗರಿ ಪ್ರೋ ಇಮೇಜ್ – ೨೦೨೪
ಸಂಜೆವಾಣಿ ವಾರ್ತೆದಾವಣಗೆರೆ. ಆ.೨೧; ಜಿಲ್ಲಾ ಫೋಟೊಗ್ರಾಫರ್ಸ್ ಮತ್ತು ವಿಡಿಯೋಗ್ರಾಫರ್ಸ್ ಸಂಘದ ವತಿಯಿಂದ ಆ.೨೪ ಹಾಗೂ ೨೫ ರಂದು  ಬೆಳಗ್ಗೆ ೧೦.೩೦ ಕ್ಕೆ  ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ೧೮೫ ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಹಿನ್ನೆಯಲ್ಲಿ ದೇವನಗರಿ ಪ್ರೋ ಇಮೇಜ್ ೨೦೨೪  ಹಮ್ಮಿಕೊಳ್ಳಲಾಗಿದೆ ಎಂದು‌ ಅಸೋಸಿಯೇಷನ್ ಅಧ್ಯಕ್ಷರಾದ ಶ್ರೀನಾಥ್ ಪಿ ಅಗಡಿ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರತಿ ವರ್ಷ ಜಿಲ್ಲಾ ಮಟ್ಟದಲ್ಲಿ‌  ಸಮಾರಂಭ ಮಾಡಲಾಗುತ್ತಿತ್ತು‌ ಈ‌  ಬಾರಿ ಅಂತರಾಷ್ಟ್ರೀಯ ‌ಮಟ್ಟದಲ್ಲಿ ಸಮಾರಂಭ ಆಯೋಜನೆ ಮಾಡುವ ಉದ್ದೇಶದಿಂದ ಏಳು‌ ಜಿಲ್ಲೆಗಳ ಸಹಯೋಗದೊಂದಿಗೆ ಪ್ರದರ್ಶನ ಆಯೋಜಿಸಿದ್ದೇವೆ ಸುಮಾರು‌೪೫ ಅಂತರಾಷ್ಟ್ರೀಯ ಕಂಪನಿಗಳು ಪ್ರದರ್ಶನದಲ್ಲಿ ಭಾಗವಹಿಸಲಿವೆ ಎಂದರು.ಅ.೨೪ ರಂದು ಬೆಳಗ್ಗೆ ೧೧.೩೦ ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಹಾಗೂ ಶಾಸಕರಾದ ಶಾಮನೂರು ಶಿವಶಂಕರಪ್ಪ ಸಮಾರಂಭದ ಉದ್ಘಾಟನೆ ಮಾಡಲಿದ್ದಾರೆ.ಮುಖ್ಯ ಅತಿಥಿಗಳಾಗಿ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್,ಶಾಸಕರಾದ ಶಿವಗಂಗಾ ಬಸವರಾಜ್,ಸಂಘದ ದಾವಣಗೆರೆ ಜಿಲ್ಲಾಧ್ಯಕ್ಷ ವಿಜಯ್ ಕುಮಾರ್ ಜಾಧವ್,ಶಿವಮೊಗ್ಗದ ಶ್ರೀನಿವಾಸ್ ಕೆ.ಡಿ,ಹಾವೇರಿಯ ರಾಜೇಂದ್ರ ರಿತ್ತಿ,ಗದಗದ ಪವನ್, ಚಿತ್ರದುರ್ಗದ ಸಯ್ಯದ್ ಮತ್ತಿತರರು ಆಗಮಿಸಲಿದ್ದಾರೆಂದರು.ಆ.೨೪ ರ ಸಂಜೆ ೫.೩೦ ಕ್ಕೆ ಛಾಯಾ ಸಾಧಕರಿಗೆ ಸನ್ಮಾನ ಮತ್ತು ಛಾಯಾಗ್ರಾಹಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ.ಈ ಕಾರ್ಯಕ್ರಮಕ್ಕೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್,ಎಸ್ಪಿ ಉಮಾ ಪ್ರಶಾಂತ್,ದೂಡಾ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ,ಪಾಲಿಕೆ ವಿಪಕ್ಷ‌ನಾಯಕ ಕೆ.ಪ್ರಸನ್ನಕುಮಾರ್  ಆಗಮಿಸಲಿದ್ದಾರೆ.ಇದೇ ವೇಳೆ ಪಾಲಿಕೆ ನಾಮ ನಿರ್ದೇಶಕ ಸದಸ್ಯರಾದ ಶಿವಮೂರ್ತಿ ಹಾಗೂ ಕೇಂದ್ರ ಸಹಕಾರ ಬ್ಯಾಂಕ್ ನ ಉಪಾಧ್ಯಕ್ಷ ಡಿ.ಕುಮಾರ್ ಅವರಿಗೆ ವಿಶೇಷ ಗವಬರವ ಮಾಡಲಾಗುವುದು ಹಾಗೂ‌ ಹಿರಿಯ ಛಾಯಾಗ್ರಾಹಕರಾದ ಬಸವರಾಜ್ ಬೆಳ್ಳೂಡಿ,ಬೂಸ್ನೂರು ಜೆ ನಾಗರಾಜ್,ವಿನಾಯಕ.ಬಿ,ಮನೋಜ್ ಕುಮಾರ್ ಅವರುಗಳಿಗೆ ಸನ್ಮಾನ ನಡೆಯಲಿದೆ.ಈ‌ ಪ್ರದರ್ಶನದಲ್ಲಿ ನವೀನ ತಂತ್ರಜ್ಞಾನ ಪರಿಚಯ,ಉಚಿತ ಕಾರ್ಯಾಗಾರ, ಉಚಿತ ಕ್ಯಾಮರ ತಪಾಸಣೆ,ಆರೋಗ್ಯ ತಪಾಸಣೆ,ಅಂಚೆ ಇಲಾಖೆಯ ಸೌಲಭ್ಯ, ಇ- ಶ್ರಮ ಕಾರ್ಡ್ ನೊಂದಣಿ ಮಾಡಲಾಗುವುದು.ಈ‌ ಕಾರ್ಯಕ್ರಮಕ್ಕೆ ಸುಮಾರು ಐದು ಸಾವಿರ ಛಾಯಾಗ್ರಾಹಕರು‌ ಆಗಮಿಸಲಿದ್ದಾರೆಂದರು.
ಸುದ್ದಿಗೋಷ್ಠಿಯಲ್ಲಿ ವಿಜಯ್ ಕುಮಾರ್ ಜಾಧವ್,ದುಗ್ಗಪ್ಪ ಪಿ,ಎನ್ .ಮಲ್ಲಿಕಾರ್ಜುನ್,ತಿಪ್ಪೇಸ್ವಾಮಿ, ಎನ್.ಕೆ ಕೊಟ್ರೇಶ್,ತಿಲಕ್,ಶಂಭು,ನಾಗರಾಜ್,ಕೆ.ಪಿ,ಅರುಣ್ ಕುಮಾರ್,ಮಿಥುನ್ , ರಘು ಕಿರಣ್ಮತ್ತಿತರರಿದ್ದರು.