ವಲಯ ಮಟ್ಟದ ಕ್ರೀಡಾಕೂಟಕ್ಕೆ ಶಾಸಕರಿಂದ ಚಾಲನೆ
ಸಿರವಾರ.ಅ೨೧: ಕ್ರೀಡೆಯಲ್ಲಿ ಸೋಲು ಗೆಲುವು ಸರ್ವೆ ಸಾಮಾನ್ಯ, ಕ್ರೀಡಾಪಟುಗಳು ಸೋಲಿನಿಂದ ಎದೆಗುಂದದೆ ನಿರಂತರ ಪರಿಶ್ರಮಪಟ್ಟರೆ ಗೆಲುವು ಸಾಧ್ಯವಾಗುತ್ತದೆ. ಕ್ರೀಡೆಯಲ್ಲಿ ಮೊದಲಿಗೆ ಸ್ಪರ್ಧಿಸುವ ಮನೋಭಾವನೆಯನ್ನು ಕ್ರೀಡಾಪಟುಗಳು ಬೆಳೆಸಿಕೊಳ್ಳಬೇಕು ಎಂದು ಮಾನ್ವಿ ಶಾಸಕರಾದ ಜಿ.ಹಂಪಯ್ಯನಾಯಕ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ತಾಲೂಕಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ ವಲಯ ಮಟ್ಟದ ಕ್ರೀಡಾಕೂಟಕ್ಕೆ ಚಾಲನ ನಿಡಿ ಮಾತನಾಡಿದ ಅವರು ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಮತ್ತು ಕ್ರೀಡಾ ಮನೋಭಾವ ಬೆಳೆಸಲು ಉಪಯುಕ್ತವಾಗಿವೆ ಎಂದರು.
ಕ್ರೀಡಾಪಟುಗಳಿಗೆ ಸರ್ಕಾರ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡಿದೆ. ಹಾಗಾಗಿ, ಪ್ರತಿಭಾವಂತರು ಕ್ರೀಡಾಪಟುಗಳನ್ನು ಗುರುತಿಸಿ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ತಾಲ್ಲೂಕು ಮಟ್ಟದ ಕ್ರೀಡಾಕೂಟಗಳು ಉತ್ತಮ ವೇದಿಕೆಯಾಗಿವೆ. ಇಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಹೆಚ್ಚಿನ ತರಬೇತಿ, ಮಾರ್ಗದರ್ಶನ ನೀಡಿ ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲೂ ವಿಜೇತರಾಗಲು ಅನುಕೂಲ ಮಾಡಿಕೊಡಬೇಕು ಎಂದು ತಿಳಿಸಿದರು. ಪ್ರಾಸ್ತಾವಿಕವಾಗಿ ಬಿಇಓ ಚಂದ್ರಶೇಖರ ದೊಡ್ಮನೆ ಮಾತನಾಡಿ ಕ್ರೀಡೆ ಮಗುವಿನ ಮಾನಸಿಕ, ದೈಹಿಕ ಪ್ರಗತಿಗೆ ಸಹಕಾರಿಯಾಗುತ್ತದೆ. ಕ್ರೀಡೆಯಿಂದ ಆರೋಗ್ಯ. ೧೦೦೦ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ, ತಾ,ಜಿ, ರಾಜ್ಯ ಮಟ್ಟಕೆ ಹೋಗಿ ಸಾಧನೆ ಮಾಡಿದ್ದಾರೆ. ಕ್ರೀಡಾ ಮನೋಭಾವನೆಯಿಂದ ಆಟವಾಡಬೇಕು ಎಂದರು.
ಪ್ರೌಢಶಾಲೆ ವಲಯ ಮಟ್ಟದ ಮಾರುತಿ ಬಳಬಟಿ, ಪ್ರಾಥಮಿಕ ಸಂತ ಶಿಕ್ಷಕರ ಸಂಘದ ಅದ್ಯಕ್ಷ ಮಲ್ಲೇಶಪ್ಪ, ಮೌನೇಶ, ವೆಂಕಟರೆಡ್ಡಿ ಬಲ್ಕಲ್, .ಬಸವರಾಜ, ರಾಜಶೇಖರ ದಿನ್ನಿ, ಬಸವರಾಜ ನಾಯಕ, ಪ್ರಕಾಶ ಪಾಟೀಲ್, ಪಕೃದ್ದಿನ್, ಅರ್.ಚಂದ್ರಶೇಖರ ರೆಡ್ಡಿ, ತಿಮ್ಮಣ್ಣ ಬಲ್ಲಟಗಿ, ಕೇಮಣ್ಣ,