ರಾರಾಳು   ತಾಂಡದಲ್ಲಿ ತಿಪ್ಪೆ ಅಣಬೆ ತಿಂದು 9 ಜನ ಅಸ್ವಸ್ಥ
ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಆ.21 ತಾಲೂಕಿನ ರಾರಾಳು ತಾಂಡದಲ್ಲಿ ತಿಪ್ಪೆಯಲ್ಲಿ ಬೆಳೆದಿರುವ  ಅಣಬೆಯನ್ನು ತಿಂದು 9 ಜನ ಅಸ್ವಸ್ಥರಾದ  ಘಟನೆ ಮಂಗಳವಾರ ಸಂಜೆ ನಡೆದಿದೆ.
ಗ್ರಾಮದ ಹೊರವಲಯದಲ್ಲಿ ಬೆಳೆದಂತ ಆಹಾರದ ಜೊತೆ ಅಣಬೆ ಫ್ರೈ ಮಾಡಿ  ಸೇವಿಸಿರುವರಿಂದ 7 ಜನ ವಯಸ್ಕರ ಇಬ್ಬರು ಮಕ್ಕಳು ಕೂಡಲೇ ವಾಂತಿ ಆಗಿ ಅಸ್ವಸ್ಥಗೊಂಡವರನ್ನು ತಾಲೂಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು.
ಈಗಾಗಲೇ ಚಿಕಿತ್ಸೆ ನೀಡಿ ಎಲ್ಲರೂ ಆರೋಗ್ಯವಾಗಿದ್ದಾರೆಂದು ತಾಲೂಕ ವೈದ್ಯಧಿಕಾರಿ ತಿಳಿಸಿರುತ್ತಾರೆ