ಚಳ್ಳಕೆರೆ ನಗರಕ್ಕೆ ಜಲ ದಿಗ್ಬಂಧನ ; ಬಯಲು ಸೀಮೆ ಜನ ಜೀವನ ಅಸ್ತವ್ಯಸ್ತ
ಸಂಜೆವಾಣಿ ವಾರ್ತೆ
ಚಳ್ಳಕೆರೆ.ಆ.೨೧; ಬಯಲು ಸೀಮೆಯಲ್ಲಿ ತಡ ರಾತ್ರಿ ಸುರಿದ ಬಾರೀ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ.ನಗರದ ತಗ್ಗು ಪ್ರದೇಶದ ನಿವಾಸಿಗಳ ಗೋಳು ಕೇಳುವವರು ಇಲ್ಲವಾಗಿದೆ‌, ರಾಜ‌ಕಾಲುವೆ ಅಕ್ಕ ಪಕ್ಕದ ನಿವಾಸಿಗಳು  ಅಂಗೈಯಲ್ಲಿ ಜೀವ  ಹಿಡಿದುಕೊಂಡು ಈಡೀ ರಾತ್ರಿ ಯಿಡಿ ನಿದ್ದೆಯಿಲ್ಲದೆ ಮಳೆಯಲ್ಲಿ ತೊಯ್ದ ಮನೆಗಳಲ್ಲಿ ಮಕ್ಕಳು, ವಯೋವೃದ್ದರು ಬೆಳಗಾಗುವ ತನಕ ಜಪ ಮಾಡಿದ್ದಾರೆ.ಪ್ರಸ್ತುತ ವರ್ಷದಲ್ಲಿ ದಾಖಲೆ‌ ಮಳೆ ಸುರಿದ ವರುಣನಿಗೆ ಈಡೀ ನಗರ ತಲ್ಲಣಗೊಂಡಿದೆ, ರಾಜಕಾಲುವೆ ಅಕ್ಕಪಕ್ಕದ ಜನ ಜೀವನ ತುಂಬಾ ನೋವು ಅನುಭವಿಸುವಂತಾಗಿದೆ.ನಗರದಲ್ಲಿ ಸರಿಯಾದ ಸೂರು ಇಲ್ಲದೆ ಇದ್ದ ಜಾಗದಲ್ಲಿಯೇ ‌ಸೂರು‌ ನಿರ್ಮಿಸಿಕೊಂಡ ನಗರವಾಸಿಗಳ ಜೀವಕ್ಕೆ ಕುತ್ತು ತಂದ ವರುಣನಿಗೆ ಬಯಲು ಸೀಮೆಯ ಜನ ವಯೋನಾಡಿನ ದರ್ಶನ ಒಮ್ಮೆ ನೆನಪು ಮಾಡಿಕೊಳ್ಳುವ ಅನಿವಾರ್ಯ ಉಂಟಾಗಿದೆ.ಇನ್ನೂ ಮುಂಗಾರು ಮುನ್ನವೇ ರಾಜಕಾಲುವೆಗಳು, ಚರಂಡಿಗಳು, ಹಳ್ಳಕೊಳ್ಳಗಳನ್ನು ದುರಸ್ತಿ‌ ಮೂಲಕ ಸ್ವಚ್ಚತೆ ಮಾಡಬೇಕಾದ ನಗರಸಭೆ ಮಾತ್ರ ನೆಪ ಮಾತ್ರಕ್ಕೆ  ರಾಜಕಾಲುವೆಯಲ್ಲಿ ಒಮ್ಮೆ ಜೆಸಿಬಿ ಸದ್ದು ಮಾಡಿಸಿ ನಮ್ಮ ಕಾರ್ಯ ಮುಗಿತು ಎಂದು ಕೈ ತೊಳೆದುಕೊಂಡಿದ್ದಾರೆ, ಇನ್ನೂ ಇತ್ತ ರಾಜಕಾಲುವೆಗಳ ದುರಸ್ತಿ‌ ಮೂಲಕ ಅಭಿವೃದ್ಧಿಪಡಿಸಬೇಕಾದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವೈಪಲ್ಯ ಎದ್ದು ಕಾಣುತ್ತಿವೆ ಪ್ರತಿ ವರ್ಷವೂ ಕೂಡ ಮಳೆಗಾಲದ ಸಮಯದಲ್ಲಿ ಈ ಬಾಗದ ಜನರಿಗೆ ಮನೆಯೊಳಗೆ‌ ನೀರು‌ ನುಗ್ಗುವುದು ಮಾಮೂಲಿಯಾಗಿದೆ ಇತ್ತ ಆಡಳಿತ ಚುಕ್ಕಾಣಿ ಹಿಡಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇಂತ ಕೊಳಚೆಗೇರಿ‌ ನಿವಾಸಿಗಳಿಗೆ ಶಾಶ್ವತವಾಗಿ ಪರಿಹಾರ ಹೊದಗಿಸುವಲ್ಲಿ ವಿಫಲರಾಗಿದ್ದಾರೆ ಎಂದು ಹೆಸರು ಹೇಳಲು ಇಚ್ಚಿಸಿದ ಅಧಿಕಾರಿಯ ಮಾತಾಗಿದೆ.