ಶ್ರೀ ಕೃಷ್ಣಜನ್ಮಾಷ್ಟಮಿ ಕಾರ್ಯಕ್ರಮ
ಹುಬ್ಬಳ್ಳಿ,ಆ21: ಭಾರತದಾದ್ಯಂತ ಅದ್ದೂರಿಯಾಗಿ ಆಚರಿಸುವ ಹಬ್ಬವಾದ ಶ್ರೀ ಕೃಷ್ಣಜನ್ಮಾಷ್ಟಮಿ ಅಂಗವಾಗಿ ಅಗಷ್ಟ್ 25, 26 ಹಾಗೂ 27 ರಂದು ಹು-ಧಾ ಮಧ್ಯೆದಲ್ಲಿರುವ ರಾಯಾಪುರ ಬಳಿಯ ಇಸ್ಕಾನ್‍ದಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹು-ಧಾ ಇಸ್ಕಾನ್ ಅಧ್ಯಕ್ಷರಾದ ರಾಜೀವ್ ಲೋಚನ ದಾಸ್ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದ ಅವರು, ಅ, 25 ರಂದು ಮುಂಜಾನೆ 8 ಗಂಟೆಯಿಂದ ರಾತ್ರಿ9 ಗಂಟೆಯವರೆಗೆ ಅರ್ಚನೆ ಮತ್ತು ಆರತಿಗಳು ದೇವಸ್ಥಾನದ ಮುಖ್ಯ ಸಭಾಂಗಣದಲ್ಲಿ ನಡೆಯಲಿದ್ದು, 10,30 ಕ್ಕೆ ಲಡ್ಡುಗೋಪಾಲ ಮೂರ್ತಿಯನ್ನು ಉಯ್ಯಾಲೆ ಮೇಲೆ ತೂಗಲು ಭಕ್ತರಿಗೆ ಅವಕಾಶ, ಸಂಜೆ ಹು-ಧಾ ದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಇರಲಿದ್ದು, ರಾತ್ರಿ 8.30 ರಿಂದ 9.30 ರ ವರೆಗೆ ಅಭಿಷೇಕವು ನೆರವೇರಲಿದೆಂದರು.
ಬಸ್ ಸೌಲಭ್ಯ: ಇಡೀ ದಿನ ಹಾಗೂ ಮಧ್ಯರಾತ್ರಿಯವರೆಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ ನಡೆಯುವ ಹಿನ್ನಲೆಯಲ್ಲಿ ಭಕ್ತರ ಅನುಕೂಲಕ್ಕಾಗಿ ಸಾರಿಗೆ ಸಂಸ್ಥೆ ಹಾಗೂ ಖಾಸಗಿ ಬಸ್ ಸೌಲಭ್ಯಗಳನ್ನು ನೀಡುವಂತೆ ಆಯಾ ಸಂಸ್ಥೆಯವರೆಗೆ ಕೋರಲಾಗಿದೆ. ಭಕ್ತಾದಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಹಾಗೂ ದೇವಸ್ಥಾನದ ಬಳಿ ಮೂರು ಕಡೆ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.