ರಾಜ್ಯಕ್ಕೆ ದ್ವಿತೀಯ ಸ್ಥಾನ

ನವಲಗುಂದ,ಆ21 : ಸಿವಿಲ್ ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಲಯದ ಸಿಬ್ಬಂದಿ ಚಿದಾನಂದ ಸಂಕನಗೌಡ್ರ ಇವರು ವೇಟ್ ಲಿಪ್ಪಿಂಗ್ ವಿಭಾಗದಲ್ಲಿ, 106 ಕೆ.ಜಿ. ಭಾರವನ್ನು ಎತ್ತುವದರ ಮೂಲಕ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದು ನ್ಯಾಯಾಲಯಗಳ ಕೀರ್ತಿ ತಂದಿದ್ದಾರೆ ಎಂದು ದಿವಾಣಿ ನ್ಯಾಯಾಲಯದ ನ್ಯಾಯಾಧೀಶರುಗಳಾದ ಮಂಜುನಾಥ್ ಪಾನಗಂಟಿ ಹಾಗೂ ನವೀನ ಡಿಸೋಜಾ ಹೇಳಿದರು.
ಮಂಗಳವಾರ ಸಂಕನಗೌಡ್ರ ರವರನ್ನು ಸನ್ಮಾನಿಸಿ ಮಾತನಾಡಿದ ಅವರು ಕರ್ನಾಟಕ ರಾಜ್ಯ ಸರಕಾರಿ ನೌಕರರು ಹಮ್ಮಿಕೊಂಡಿದ್ದ 2024ನೆ ಸಾಲಿನ ಕ್ರೀಡಾಕೂಟದಲ್ಲಿ ಚಿದಾನಂದ ಇನ್ನೂ ಅತ್ಯುನ್ನತ ಸ್ಥಾನಕ್ಕೇರಲಿ ಎಂದು ಪ್ರೊತ್ಸಾಹಿಸಿದರು.
ಕಾರ್ಯಕ್ರಮದಲ್ಲಿ ನ್ಯಾಯಾಲಯದ ಎಲ್ಲ ಸಿಬ್ಬಂದಿಗಳು, ನ್ಯಾಯವಾದಿಗಳು ಹಾಗೂ ತಾಲೂಕ ಕಾನೂನು ಸೇವಾ ಸಮಿತಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.