ಕಾಂಕ್ರೀಟ್ ರಸ್ತೆಗೆ ಗುದ್ದಲಿ ಪೂಜೆ
ಚನ್ನಮ್ಮನ ಕಿತ್ತೂರು,ಆ21: ರೈತರು ಬೆಳೆದ ಬೆಳೆಗೆ ಮಾರಾಟ ಮಾಡಲಿಕ್ಕೆ ಅನುಕೂಲವಾಗಲೆಂದೇ ಸರ್ಕಾರ ಸಾಕಷ್ಟು ಅನುದಾನ ನೀಡಿ ಕೃಷಿ ಉತ್ಪನ್ನ ಮಾರುಕಟ್ಟೆಗಳನ್ನು ನಿರ್ಮಾಣ ಮಾಡುತ್ತಿದ್ದು ಅದರ ಸದುಪಯೋಗ ಎಲ್ಲ ರೈತರು ಪಡೆದುಕೊಳ್ಳಬೇಕೆಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ 2023-24ನೇ ಸಾಲಿನ ನಬಾರ್ಡ-ಆರ್‍ಆಯ್‍ಡಿಎಫ್-29 ಯೋಜನೆಯಡಿಯಲ್ಲಿ ಮಂಜೂರಾದ ಡಾಂಬರಿಕರಣ ಹಾಗೂ ಕಾಂಕ್ರೀಟ್ ರಸ್ತೆ ಗಟಾರ, ಸಿಡಿಗಳ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೇರವೇರಿಸಿ ಅವರು ಮಾತನಾಡಿದರು. ಗುತ್ತಿಗೆ ದಾರರು ಈ ಕಾಮಗಾರಿಯನ್ನು ಕಳಪೆಯಾಗದಂತೆ ನೋಡಿಕೊಳ್ಳಬೇಕು. ಅಷ್ಟೇ ಜವಾಬ್ದಾರಿಯಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳು ಮಾರುಕಟ್ಟೆಗೆ ಆಗಮಿಸಿದ ರೈತರ ಜೊತೆಗೆ ಸೌಜನ್ಯದಿಂದ ವರ್ತಿಸಿ ಮಾರುಟ್ಟೆಯಿಂದಾಗುವ ಲಾಭಾಂಶದ ಕುರಿತು ತಿಳಿಹೇಳಬೇಕೆಂದರು.
ಈ ವೇಳೆ ತಹಶೀಲ್ದಾರ ರವೀಂದ್ರ ಹಾದಿಮನಿ, ಬೈಲಹೊಂಗಲ-ಕಿತ್ತೂರು ಎಪಿಎಂಸಿ ಜಂಟಿ ಕಾರ್ಯದರ್ಶಿ ಎಸ್.ಎಸ್, ಅರಳಿಕಟ್ಟಿ, ಬೆಳಗಾವಿ ಉಪವಿಭಾಗ ಅಭಿಂಯತರರು ರಾಘವೇಂದ್ರ ಕೊರ್ತಿ, ಬೆಳಗಾವಿ ಕೃಷಿ ಉಪನಿರ್ದೇಶಕರು ಎಂ.ಡಿ. ಚಬನೂರ, ಬೈಲಹೊಂಗಲ-ಕಿತ್ತೂರು ಕೃಷಿ ಅಧಿಕಾರಿ ಬಸವರಾಜ ದಳವಾಯಿ, ಮಂಜುನಾಥ ಕೆಂಚರಾವುತ, ಕೃಷಿ ಇಲಾಖೆ ಸುನೀಲ್ ಗೋಡಬೋಳೆ, ಶಿವಪುತ್ರಪ್ಪ ಅಂಟಿನ, ಸರ್ವ ಸಿಬ್ಬಂದಿ, ಮುಖಂಡರುಗಳಾದ ಅಸ್ಪಾಕ ಹವಾಲ್ದಾರ, ಸುನೀಲ್ ಘೀವಾರಿ, ಬೀರಪ್ಪ ದೇಶನೂರ, ಸಂಕಪ್ಪ ಶೇಬಣ್ಣವರ, ಅನಿಲ್ ಎಮ್ಮಿ, ಮಂಜು ದೊಡ್ಡಣ್ಣವರ, ಮಲ್ಲಿಕಬಾಯಿ, ಸೇರಿದಂತೆ ಬೈಲಹೊಂಗಲ-ಕಿತ್ತೂರು ಕೃಷಿ ಮಾರುಕಟ್ಟೆ ಸಿಬ್ಬಂದಿ, ಮುಖಂಡರುಗಳು ಸಾರ್ವಜನಿಕರಿದ್ದರು.