ಸದ್ಭಾವನಾ ದಿವಸ್ ಆಚರಣೆ
ಬಾಗಲಕೋಟೆ,ಆ21: ರಾಷ್ಟ್ರೀಯ ಏಕಿಕರಣ, ಶಾಂತಿ, ವಾತ್ಸಲ್ಯ ಮತ್ತು ಕೋಮು ಸೌಹಾರ್ದತೆಯನ್ನು ಉತ್ತೆಜಿಸುವ ಉದ್ದೇಶದಿಂದ ಸದ್ಭಾವನಾ ದಿವಸ್ ಆಚರಿಸಲಾಗುವುದು ಎಂದು ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಜಗನ್ನಾಥ ಚವ್ಹಾಣ ಹೇಳಿದರು.
ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯ ಬಾಗಲಕೋಟೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಘಟಕ ಅಡಿಯಲ್ಲಿ ನಡೆದ ಸದ್ಭಾವನೆ ದಿನಾಚರಣೆಯಲ್ಲಿ ಮಾತನಾಡಿದರು.
ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ 79 ನೇ ಜನ್ಮ ದಿನವನ್ನು ಸದ್ಭಾವನ ದಿವಸ್‍ವನ್ನಾಗಿ ಆಚರಿಸುತ್ತಿದ್ದು, ಎಲ್ಲಾ ಧರ್ಮಗಳ ಭಾರತೀಯ ಜನರಲ್ಲಿ ರಾಷ್ಟ್ರೀಯ ಏಕೀಕರಣ, ಶಾಂತಿ, ವಾತ್ಸಲ್ಯ ಮತ್ತು ಕೋಮು ಸೌಹಾರ್ದತೆಯನ್ನು ಉತ್ತೇಜಿಸುವ ಉದ್ದೇಶದಿಂದ ಈ ದಿನವನ್ನು ‘ಸದ್ಭಾವನಾ ದಿವಸ್’ ಅಥವಾ ಸಾಮರಸ್ಯ ದಿನ ಎಂದು ಆಚರಿಸಲಾಗುತ್ತದೆ ಎಂದರು.
ಐ.ಕ್ಯೂ.ಎ.ಸಿ ಘಟಕದ ಸಂಯೋಜಕರಾದ ಗಿರಿಜಾ ನಾವದಗಿ, ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪಿ. ಎನ್. ರಾಥೋಡ, ಎನ್.ಎಸ್.ಎಸ್ ಅಧಿಕಾರಿಗಳಾದ ಡಾ ಎಂ ಎಂ ಹುದ್ದಾರ ಅವರು ವೇದಿಕೆ ಮೇಲೆ ಉಪಸ್ಥಿರಿದ್ದು ಸ್ವಾಗತಿಸಿದರು. ಪ್ರತಿಜ್ಞಾವಿಧಿಯನ್ನು ಡಾ. ರವಿ ಬಳಿಗೆರೆ ಅವರು ಬೋಧಿಸಿದರು, ಕುಮಾರಿ ದೇವಮ್ಮ ಪ್ರಾರ್ಥಿಸಿದರು, ಕುಮಾರಿ ನಯನ ಕುದರಿ ವಂದಿಸಿದರು. ಕುಮಾರ ಸುಹಾಸ ಬಡಿಗೇರ ಕಾರ್ಯಕ್ರಮ ನಿರೂಪಿಸಿದರು.
ಈ ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಎಸ್ ಎಸ್ ಕೋಟ್ಯಾಳ, ಡಾ. ಬಸವರಾಜ ವೀ.ಖೋತ, ಶ್ರೀಮತಿ ನಂದಿನಿ ದುಡುಮಣಿ ವೈ?À್ಣವಿ ಹಂದ್ರಾಳ, ಜಿ.ಜಿ. ಬಳೆಗಾರ ಹಾಗೂ ಎನ್.ಎಸ್.ಎಸ್ ವಿದ್ಯಾರ್ಥಿಗಳು ವಿದ್ಯಾರ್ಥಿನಿಯರುಪಾಲ್ಗೊಂಡಿದ್ದರು.