ರಕ್ಷಾ ಬಂಧನ ಕಾರ್ಯಕ್ರಮ
ಬಾಗಲಕೋಟೆ,ಆ21: ಅಣ್ಣ ತಂಗಿಯರ ಬಾಂಧವ್ಯವನ್ನು ಗಟ್ಟಿಗೊಳಿಸಿ, ಸಹೋದರಿ ಸಹೋಧರತ್ವ ಭಾವನೆಯನ್ನು ಅರಳಿಸಿ ದೇಶದ ಏಕತೆಯನ್ನು ಸಾರುವುದೇ ರಕ್ಷಾ ಬಂಧನವಾಗಿದೆ ಎಂದು ಬಸವೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಕೆ ಎಚ್ ಹೊಸೂರ ಹೇಳಿದರು.
ಅವರು ನಗರದ ಬಿ.ವಿ.ವಿ.ಸಂಘದ ಬಸವೇಶ್ವರ ಸಂಯೂಕ್ತ ಪ.ಪೂ ಕಾಲೇಜಿನ ಆವರಣದಲ್ಲಿ ನಡೆದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮನುಷ್ಯ ಮನುಷ್ಯರ ನಡುವೆ ಬಾಂಧವ್ಯ ಬೇಸೆದು ಕೂಡಿ ಬಾಳುವಂತೆ ಪ್ರೇರೇಪಿಸುವ ಅನೇಕ ಹಬ್ಬ ಹರಿದಿನಗಳಲ್ಲಿ ಈ ರಕ್ಷಾ ಬಂಧನವೂ ಒಂದು, ಇದು ಅಣ್ಣ ತಂಗಿಯರ ಬಾಂಧವ್ಯವನ್ನು ಗಟ್ಟಿಗೊಳಿಸುವುದೇ ರಕ್ಷಾ ಬಂಧನವಾಗಿದೆ, ಭಾರತಾಂಭೆಯ ಮಕ್ಕಳಾಗಿ ದೇಶದ ಏಕತೆಗೆ ಈ ರಕ್ಷಾ ಬಂಧನವೂ ಕಾರಣವಾಗಿದೆ, ಅಣ್ಣ ತಂಗಿಯ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ತಂಗಿಯ ಕಷ್ಟಕ್ಕೆ ನೆರವಾಗುವ ತಂದೆಯ ಎರಡನೆಯ ಸ್ಥಾನವನ್ನು ನೀಡುವಲ್ಲಿ ಅಣ್ಣ ಸ್ಥಾನ ಮಹತ್ವವಾದದ್ದು ಎಂದರು.
ಬಸವೇಶ್ವರ ಸಂಯುಕ್ತ ಪ.ಪೂ ಕಾಲೇಜಿನ ಆವರಣದಲ್ಲಿ ಸಂತೋಷ ಸಂಭ್ರಮದ ವಾತಾವರಣ ಮನೆ ಮಾಡಿತ್ತು, ಎಲ್ಲ ವಿದ್ಯಾರ್ಥಿನಿಯರು ವಿದ್ಯಾರ್ಥಿಗಳಿಗೆ ರಕ್ಷೆಯನ್ನು ಕಟ್ಟಿ ಆರತಿ ಬೆಳಗಿ ಸಿಹಿ ತಿನಿಸುವುದರ ಮೂಲಕ ರಕ್ಷಾ ಬಂಧನಕ್ಕೆ ಮೆರುಗು ತಂದರು. ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರು ಉಪಸ್ಥಿತರಿದ್ದರು.