ಶಿವಾನುಭವಗೋಷ್ಠಿ
ಲಕ್ಷ್ಮೇಶ್ವರ,ಆ.21: ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ನೂಲು ಹುಣ್ಣಿಮೆ ದಿನ ಸೇವಾ ಮಂದಿರದಲ್ಲಿ 340ನೇ ಶಿವಾನುಭವ ಗೋಷ್ಠಿ ಮತ್ತು ಬಸವ ಕುಮಾರ್ ಅಜ್ಜನವರ 28ನೆಯ ಪುಣ್ಯಾರಾಧನೆ ಜರುಗಿತು.
ಕಾರ್ಯಕ್ರಮದಲ್ಲಿ ಮೈಸೂರಿನ ಮಾನಸ ಗಂಗೋತ್ರಿ, ಶಾಸ್ತ್ರೀಯ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ. ನೀಲಗಿರಿ ತಳವಾರ ಅವರು ಮಾತನಾಡಿ ಈ ಗ್ರಾಮವು ಸ್ವಾತಂತ್ರ ಹೋರಾಟಗಾರರ ದಾನಿಗಳ ಮತ್ತು ಪುಣ್ಯಪುರುಷರ ನಾಡಾಗಿದೆ ಈ ಮಣ್ಣಿನ ಗುಣವೇ ಇದಕ್ಕೆ ಕಾರಣ ಎಂದು ಹೇಳಿದ ಅವರು ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮಿಗಳ ಉದ್ಘಾಟನೆಗೊಳಿಸಿದ ಈ ಮಂದಿರದಲ್ಲಿ ಕಳೆದ 29 ವರ್ಷಗಳಿಂದ ಶಿವಾನುಭವ ಗೋಷ್ಠಿ ಜರುಗುತ್ತಿದ್ದು ಪ್ರತಿ ಹುಣ್ಣಿಮೆಯ ದಿನ ಇಂತಹ ಗೋಷ್ಠಿಗಳು ಜರುಗಿ ಜನರಲ್ಲಿ ಧಾರ್ಮಿಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಮನೋಭಾವವನ್ನು ಸಾಕಾರಗೊಳಿಸುತ್ತವೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸೋಮಣ್ಣ ಡಾನ್ಗಲ್ ಅವರು ಶಿಗ್ಲಿಯ ಸೇವಾ ಮಂದಿರ ಧಾರ್ಮಿಕ ಕೇಂದ್ರವಾಗಿ ಸದಾ ಜನ ಮಾನಸದಲ್ಲಿ ಧರ್ಮ ಸಂಸ್ಕೃತಿ ಪರಂಪರೆ ಮತ್ತು ಸಾಮಾಜಿಕ ಚಿಂತನೆಯನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ವಿಜಯಪುರದ ಜ್ಞಾನ ಯೋಗ ಆಶ್ರಮದ ಪೂಜ್ಯ ಸಿದ್ದೇಶ್ವರ ಸ್ವಾಮೀಜಿಯವರ ಆಶೀರ್ವಾದದಿಂದ ಆರಂಭವಾದ ಈ ಕೇಂದ್ರ ಇದುವರೆಗೆ 340 ಗೋಷ್ಠಿಗಳನ್ನು ನಡೆಸುವ ಮೂಲಕ ಕ್ರಾಂತಿಕಾರಕ ಹೆಜ್ಜೆಯನ್ನು ಹಾಕಿದೆ ಎಂದರು.
ಕಾರ್ಯಕ್ರಮದಲ್ಲಿ ಎಸ್ ಪಿ ಬಳಿಗಾರ ಎನ್ ಎ ಮುಳುಗುಂದ ಮಠ ಕಸ್ತೂರವ್ವ ಹಿರೇಮಠ ರತ್ನಮ್ಮ ಹಿರೇಮಠ ಶಿವಯೋಗಿ ಬಸವ ಕುಮಾರ್ ಮುಳಗುಂದ ಮಠ ಈರಣ್ಣ ಮುಳುಗುಂದ ಮಠ ಕಲ್ಲೇಶಪ್ಪ ಮನಗೋಳಿ ಶಂಕ್ರಪ್ಪ ರಜಪೂತ ವಾಸಣ್ಣ ಹೆಬ್ಬಳ್ಳಿ ಭೈರಪ್ಪ ಕೋಪರ?ಡೆ ಸೋಮಣ್ಣ ಹರತಿ ಈರಣ್ಣ ಗಂಜಿ ಪದ್ಮರಾಜ್ ಪಾಟೀಲ್ ರಾಮನ್ಗೌಡ ಪಾಟೀಲ್ ಲಕ್ಷ್ಮಣ್ ಮೆಳ್ಳಿಗಟ್ಟಿ ಗುಕ್ಕ ಹೊನ್ನಪ್ಪ ಪಶುಪತಿಹಾಳ ಸತ್ಯಪ್ಪ ಡಂಬಳ ಸಾಹಿತಿ ಆರ್ ಎಂ ಹೊನಕೇರಿ ಬಸಣ್ಣ ಹಂಜಿ ಸೇರಿದಂತೆ ಅನೇಕರಿದ್ದರು ಸಾನಿಧ್ಯವನ್ನು ಸೇವಾ ಮಂದಿರದ ಇಷ್ಟ ಲಿಂಗ ಶ್ರೀಗಳು ವಹಿಸಿದ್ದರು.