ರಾಜ್ಯಪಾಲರ ನಡೆ ಖಂಡನೀಯ: ಕೌಜಲಗಿ
ಬೈಲಹೊಂಗಲ,ಅ.21: ಪಾರದರ್ಶಕ ಆಡಳಿತದ ಮೂಲಕ ಎರಡನೇ ಬಾರಿ ರಾಜ್ಯದ ಚುಕ್ಕಾಣಿ ಹಿಡಿದಿರುವ ಸಿಎಂ ಸಿದ್ದರಾಮಯ್ಯ ನವರ ವಿರುದ್ಧ ತರಾತುರಿಯಲ್ಲಿ ಪ್ರಾಸಿಕ್ಯೂಶನ್ ಗೆ ರಾಜ್ಯಪಾಲರು ಅನುಮತಿ ನೀಡಿರುವುದು ಖಂಡನೀಯವೆಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.
ಪಟ್ಟಣದಲ್ಲಿ ತಮ್ಮ ಕಾರ್ಯಕರ್ತರೊಂದಿಗೆ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗಳ ಮೂಲಕ ರಾಷ್ಟಪತಿ ಗಳಿಗೆ ಮನವಿ ಸಲ್ಲಿಸಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.
ಈ ಸಂದರ್ಬದಲ್ಲಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ,ಶಿವರುದ್ರಪ್ಪ ಹಟ್ಟಿಹೊಳಿ, ಶಂಕರಗೌಡ ಪಾಟೀಲ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ, ಕಾರ್ತಿಕ ಪಾಟೀಲ,ಜಿಲ್ಲಾ ಗ್ರಾಮೀಣ ಕಾರ್ಯದರ್ಶಿ ಉಮೇಶ ಬೊಳೆತ್ತಿನ, ತಾಲೂಕಾ ಗ್ಯಾರಂಟಿ ಸಮೀತಿ ಅದ್ಯಕ್ಷ, ಮಹಾಂತೇಶ ಕಳ್ಳಿಬಡ್ಡಿ, ತಾಲೂಕು ಕುರುಬರ ಸಂಘದ ಅಧ್ಯಕ್ಷ,ವಿಜಯಕುಮಾರ ದಳವಾಯಿ,ದಾದಾಪಿರ್ ಜಮಾದಾರ,ಜುನೆದ ಕಡಬಿ,ಪ್ರೀತಮ ಬೆಳಗಾವಿ,ಸಮಿ ಮಕಾನದಾರ, ಶ್ರೀಕಾಂತ ಸುಂಕದ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತಿದ್ದರು.