ಮುರಳಿಗೌಡರಿಗೆ ಭಾರತ ಸೇವಾ ರತ್ನ ಪ್ರಶಸ್ತಿ
ಕೋಲಾರ,ಆ.೨೧- ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ ಕುವೆಂಪು ಸಭಾಂಗಣದಲ್ಲಿ ಆಗಸ್ಟ್ ೧೮ರಂದು ನಡೆದ ವಂದೇ ಮಾತರಂ ಕಾರ್ಯಕ್ರಮದಲ್ಲಿ ಕೋಲಾರ ಜಿಲ್ಲೆ ಕೋಲಾರ ತಾಲೂಕು ವೇಮಗಲ್ ಹೋಬಳಿ ಸೀತಿ ಹೊಸೂರು ಮುರುಳಿಗೌಡರ ಸಮಾಜ ಸೇವೆಯನ್ನ ಗುರುತಿಸಿ ಸಂಪದ ಸಾಲು ಪತ್ರಿಕೆ ವತಿಯಿಂದ ಭಾರತ್ ಸೇವಾ ರತ್ನ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಅವರು, ಪ್ರಶಸ್ತಿ ನೀಡಿದ ಮೇಲೆ ನನಗೆ ಹೆಚ್ಚಿನ ಜವಾಬ್ದಾರಿಗಳು ಬಂದಂತಾಗಿದೆ. ಶಾಲೆಗಳಲ್ಲಿ ಓದುವ ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತನ್ನಿಂದಾಗುವ ಸಹಾಯವನ್ನು ಮಾಡುತ್ತೇನೆ. ಭಾರತ ಸೇವಾ ರತ್ನ ಪ್ರಶಸ್ತಿ ನೀಡಿದ್ದಕ್ಕಾಗಿ ನಮ್ಮ ಭಾರತಕ್ಕಾಗಿ ಸದಾ ಚಿರಋಣಿಯಾಗಿರುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಪದ ಸಾಲು ಪತ್ರಿಕೆ ಸಂಪಾದಕ ವೆಂಕಟೇಶ್, ಚಿತ್ರ ನಿರ್ಮಾಪಕಿ ಸುಪ್ರಿಯ ನಿಪ್ಪಾಣಿ, ಖ್ಯಾತ ಗಾಯಕಿ ಪ್ರಿಯದರ್ಶಿನಿ, ಸಂಗೀತ ನಿರ್ದೇಶಕ ಮಹೇಶ್ ಮಹದೇವ್, ಖ್ಯಾತ ಚಿತ್ರ ಸಾಹಿತಿ ಹಾಗೂ ನಟ ವಿ.ನಾಗೇಂದ್ರ ಪ್ರಸಾದ್, ಡಾ. ಜಿ.ಶಿವಣ್ಣ ಮತ್ತು ಡಾ, ಚಂದ್ರಶೇಖರ್ ಮಾಡಲಾಗೇರಿ ಉಪಸ್ಥಿತರಿದ್ದರು.