ನಿರ್ದೇಶಕರಾಗಿ ಸತೀಶ್ ತಿಪಟೂರು ಅಧಿಕಾರ ಸ್ವೀಕಾರ
ಸಂಜೆವಾಣಿ ನ್ಯೂಸ್
ಮೈಸೂರು: ಆ.21:- ರಂಗಾಯಣದ ನಿರ್ದೇಶಕರಾಗಿ ಮಂಗಳವಾರ ಹಿರಿಯ ರಂಗಕರ್ಮಿ ಸತೀಶ್ ತಿಪಟೂರು ಅವರು ಅಧಿಕಾರ ಸ್ವೀಕರಿಸಿದರು.
ಮಂಗಳವಾರ ಮಧ್ಯಾಹ್ನ ರಂಗಾಯಣಕ್ಕೆ ಆಗಮಿಸಿದ ಅವರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಕಾಯಕ ನಿರ್ದೇಶಕರಿಂದ ಅಧಿಕಾರ ಸ್ವೀಕರಿಸಿದರು. ಬಳಿಕ ಮಾತನಾಡಿದ ಅವರು, ರಂಗಾಯಣದಲ್ಲಿ 2005ರಲ್ಲಿ ನಾನು ಒಂದು ವರ್ಷ ಮಕ್ಕಳ ರಂಗಭೂಮಿ ಯೋಜನೆಯ ಮುಖ್ಯಸ್ಥನಾಗಿ ಕರ್ತವ್ಯ ನಿರ್ವಹಿಸಿz್ದÉ. ಇಲ್ಲಿನ ಬಹುರೂಪಿ, ಚಿಣ್ಣರ ಮೇಳವನ್ನು ಬಹಳ ವರ್ಷಗಳಿಂದ ಗಮನಿಸಿz್ದÉೀನೆ. ಕಾಲಕ್ಕೆ ಅನುಗುಣವಾಗಿ ರಂಗಾಯಣ ಮುನ್ನಡೆಸಿಕೊಂಡು ಹೋಗಬೇಕಾದ ಹೊಣೆಗಾರಿಕೆ ಇದೆ. ಆ ಮೂಲಕ ಗಟ್ಟಿಯಾಗಿ ರಂಗಾಯಣವನ್ನು ಮರು ನಿರೂಪಿಸಿ ಮುಂದಿನ ಪೀಳಿಗೆಗೆ ನೀಡಬೇಕಿದೆ ಎಂದು ಹೇಳಿದರು.
ಸಧÀ್ಯಕ್ಕೆ ರಂಗಾಯಣದ ಬಹುತೇಕ ಕಲಾವಿದರು ನಿವೃತ್ತರಾಗಿ ಹೋಗುತ್ತಿz್ದÁರೆ. ಕಾಯಂ ಕಲಾವಿದರ ನೇಮಕಕ್ಕೆ ಅವಕಾಶವಿಲ್ಲ. ಹೀಗಾಗಿ ಹೊರಗುತ್ತಿಗೆ ಆಧಾರದಲ್ಲಿ ಕಲಾವಿದರನ್ನು ನೇಮಿಸಿಕೊಳ್ಳಬೇಕಿದೆ. ರಂಗಶಾಲೆಯನ್ನು ಗಟ್ಟಿಯಾಗಿ ನಿರ್ವಹಣೆ ಮಾಡಬೇಕಿದೆ. ರಂಗಭೂಮಿ ಬರುತ್ತಿರುವ ಕಲಾವಿದರಿಗೆ ಆತ್ಮವಿಶ್ವಾಸ ತುಂಬುವ ಅಗತ್ಯವಿದೆ. ಮೈಸೂರಿನಲ್ಲಿ ಹವ್ಯಾಸಿ ರಂಗಭೂಮಿಯೂ ಬಹಳ ದೊಡ್ಡಮಟ್ಟದಲ್ಲಿ ಕೆಲಸ ಮಾಡುತ್ತಿದೆ. ಅದಕ್ಕೆ ಪೆÇ್ರೀತ್ಸಾಹ ನೀಡುವ ಕೆಲಸವನ್ನೂ ಮಾಡುವ ಅಭಿಲಾಶೆ ಇದೆ ಎಂದು ತಿಳಿಸಿದರು.
ರಂಗಾಯಣ ವ್ಯಕ್ತಿ ಕೇಂದ್ರೀತವಲ್ಲ. ಸಮಷ್ಠಿಯಾಗಿ ನಾವೆಲ್ಲರೂ ಅದನ್ನು ಮುನ್ನಡೆಸಬೇಕಿದೆ. ಇಲ್ಲಿ ಕಲಾವಿದರ ಕೊರತೆ ಇದ್ದು, ಹೊಸ ನೇಮಕದ ಬಗ್ಗೆ ಸರ್ಕಾರದ ಗಮನ ಸೆಳೆಯುತ್ತೇನೆ ಎಂದರು.
ಈ ಸಂದರ್ಭ ಸುರೇಶ್ ಬಾಬು, ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ ಇದ್ದರು.