ದೇವರಾಜ ಅರಸು ೧೦೯ನೇ ಜಯಂತಿ
ಕೋಲಾರ,ಆ,೨೧- ನಗರ ಹೊರವಲಯದ ಶ್ರೀ ದೇವರಾಜ್ ಅರಸ್ ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಶ್ರೀ ಆರ್.ಎಲ್. ಜಾಲಪ್ಪ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಅವರಣದಲ್ಲಿ ಶ್ರೀ ದಿ, ಡಿ. ದೇವರಾಜ್ ಅರಸ್ ಅವರ ೧೦೯ನೇ ಜನ್ಮ ದಿನಾಚರಣೆಯನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಹನುಮಂತರಾಜು, ವಿಶ್ವವಿದ್ಯಾಲಯದ ಉಪಕುಲಪತಿ ಡಾ. ವೆಂಗಮ್ಮ.ಬಿ. ಕುಲ ಸಚಿವ ಡಾ. ಮುನಿನಾರಾಯಣ ಸಿ. ಕಾಲೇಜಿನ ಪ್ರಾಂಶುಪಾಲ ಡಾ.ಪ್ರಭಾಕರ್, ಆಸ್ಪತ್ರೆಯ ಅಧೀಕ್ಷಕ .ಡಾ.ಕೃಷ್ಣಪ್ಪ ಮುಂತಾದವರು ಮಾತನಾಡಿದರು.
ರಾಜ್ಯದ ಮುಖಮಂತ್ರಿ ಶ್ರೀ ದೇವರಾಜ್ ಅರಸ್ ಅವರ ಆಡಳಿತದಲ್ಲಿ ಹೊಸ ಕ್ರಾಂತಿಯುಂಟು ಮಾಡಿ ರಾಜ್ಯದಲ್ಲಿ ಸಮಾಜ ಸುಧಾರಣೆಗೆ ಅನೇಕ ಬದಲಾವಣೆಗಳನ್ನು ಅನುಷ್ಟನಕ್ಕೆ ತರುವ ಮೂಲಕ ಇತಿಹಾಸ ಪುರುಷರಾದರು.ರಾಜ್ಯದಲ್ಲಿ ಭೂ ಸುಧಾರಣೆಗೆ ಅನೇಕ ಕಾನೂನುಗಳನ್ನು ಅನುಷ್ಟನಕ್ಕೆ ತಂದರು. ಊಳುವವನಿಗೆ ಭೂಮಿ, ಮೀಸಲಾತಿ, ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮ, ಮಂಡಳಿಗಳ ರಚನೆ, ವಿದ್ಯಾರ್ಥಿ ವೇತನ, ವಸತಿ ವಿದ್ಯಾರ್ಥಿ ನಿಲಯ, ಶೈಕ್ಷಣಿಕ ಸಾಲ ಸೌಲಭ್ಯ ಸೇರಿದಂತೆ ಪ್ರಗತಿ ಪರ ಸಾಧನೆಗಳ ಸರದಾರ, ಸಾಮಾಜಿಕ ಪರಿವರ್ತನೆಯ ಅಭಿವೃದ್ದಿಯ ಹರಿಕಾರ ಎಂಬ ಬಿರುದಿಗೆ ಪಾತ್ರರಾದರು,ರಾಜ್ಯದಲ್ಲಿ ಅತ್ಯುತ್ತಮ ಆಡಳಿತ ನೀಡಿದವರಲ್ಲಿ ಪ್ರಥಮ ಸ್ಥಾನದಲ್ಲಿದ್ದಾರೆ ಎಂದು ಗುಣಗಾನ ಮಾಡಿದರು,
ಇದೇ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕರಾದ ಆರ್.ಎಲ್. ಜಾಲಪ್ಪ ಅವರು ಶ್ರೀದೇವರಾಜ್ ಅರಸ್ ಸಮಕಾಲಿನರಾಗಿದ್ದರು. ಹಿಂದುಳಿದ ವರ್ಗಗಳ ನಾಯಕರಾಗಿದ್ದ ಆರ್.ಎಲ್.ಜಾಲಪ್ಪನವರನ್ನು ರಾಜಕೀಯ ಕ್ಕೆ ತಂದು ವಿಧಾನ ಪರಿಷತ್ ಸದಸ್ಯರಾಗಿ ನಂತರ ಸಚಿವ ಸಂಪುಟದಲ್ಲಿ ಸ್ಥಾನಮಾನವನ್ನು ನೀಡಿದರು, ರಾಮಕೃಷ್ಣ ಹೆಗಡೆ ಕಾಲದಲ್ಲಿ ಆರ್.ಎಲ್.ಜಾಲಪ್ಪನವರು ಸಚಿವರಾಗಿದ್ದು ಆಡಳಿತದಲ್ಲಿ ಪ್ರಥಮ ಪ್ರಶಸ್ತಿಗೆ ಭಜನರಾಗಿದ್ದರು, ನಂತರದಲ್ಲಿ ಸಂಸದರಾಗಿ ಕೇಂದ್ರದ ಸಚಿವ ಸ್ಥಾನ ಪಡೆದಿದ್ದರು ಎಂದು ನೆನಪಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮಾಗದರ್ಶಕರಾದ ಹನುಮಂತರಾವ್, ಉಪಪ್ರಾಂಶುಪಾಲರಾದ ಡಾ, ವಿನುತಾ ಶಂಕರ್, ಡಾ,ದಿನೇಶ್, ಡಾ. ಸರಳ, ಡಾ. ಕಲ್ಯಾಣಿ, ಡಾ. ಅರವಿಂದ ನಟರಾಜನ್, ಡಾ,ರಾಜಕುಮಾರ್ ಹಾಗೂ ವೈದ್ಯಕೀಯ ಸಿಬ್ಬಂದಿ ಮತ್ತು ಆಡಳಿತವರ್ಗದ ಸಿಬ್ಬಂದಿಗಳು ಭಾಗವಹಿಸಿದ್ದರು,