ವಿಶ್ವ ಭ್ರಾತೃತ್ವವು ನಮ್ಮ ಭಾರತದ ಶ್ರೇಷ್ಠ ಸಂಸ್ಕೃತಿಯಾಗಿದೆ: ದಾನೇಶ್ವರೀಜೀ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.21-ವಿಶ್ವ ಭ್ರಾತೃತ್ವವು ನಮ್ಮ ಭಾರತದ ಶ್ರೇಷ್ಠ ಸಂಸ್ಕೃತಿಯಾಗಿದೆ ಸ್ವಾಮಿ ವಿವೇಕಾನಂದ ಸದ್ಭಾವನಾ ರಾಜ್ಯ ಪ್ರಶಸ್ತಿ ಪುರಸ್ಕøತೆ ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜೀ ಬಣ್ಣಿಸಿದರು.
ಅವರು ಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಪ್ರಕಾಶ ಭವನದಲ್ಲಿಂದು ಹಮ್ಮಿಕೊಂಡಿದ್ದ ವಿಶ್ವ ಭ್ರಾತೃತ್ವ ಸ್ನೇಹ ಸೂಚಕ ರಕ್ಷಾಬಂಧನ ಆಚರಣೆ ಕಾರ್ಯರ್ಕಮದಲ್ಲಿ ಭಾಗವಹಿಸಿ ಮಾತನಾಡಿ, ವಿಶ್ವ ಭ್ರಾತೃತ್ವದ ಸಂದೇಶ ನೀಡುತ್ತಾ, ವಿಶ್ವ ಭ್ರಾತೃತ್ವವು ನಮ್ಮ ಭಾರತದ ಶ್ರೇಷ್ಠ ಸಂಸ್ಕೃತಿಯಾಗಿದೆ. ಬಂಧನವನ್ನು ಯಾರೂ ಸಹ ಇಷ್ಟಪಡುವುದಿಲ್ಲ ಆದರೆ ಇದು ರಕ್ಷಾಬಂಧನ ಸ್ನೇಹ ಸೂಚಕವಾಗಿದೆ ಶಾಂತಿ, ಪ್ರೀತಿ ಸ್ನೇಹ ರಕ್ಷಾಬಂಧನದ ಪ್ರತೀಕವಾಗಿದೆ ಎಂದರು.
ಮೈಸೂರು ಗಾಯತ್ರಿ ಪುರಂ ಸೇವಾ ಕೇಂದ್ರದ ಸಂಚಾಲಕಿ ಸೀತಾಲಕ್ಷ್ಮಿ ಮಾತಾನಾಡಿ ಎಲ್ಲರನ್ನು ಏಕತೆಯ ಸೂತ್ರದಲ್ಲಿ ಬಂಧಿಸುವುದೆ ರಕ್ಷಾಬಂಧನದ ಸಂಕೇತವಾಗಿದೆ ಎಂದರು.ಕೆಆರ್‍ಎಸ್ ಸೇವಾ ಕೇಂದ್ರದ ರಾಜಯೋಗಿನಿ ಬ್ರಹ್ಮಾಕುಮಾರಿ ರೇಖಾಜಿ ಮಾತನಾಡಿ ಹಬ್ಬ ಎಂದರೆ ಹಬ್ಬುವುದು ಬೆಳವಣಿಗೆ ಹೊಂದುವುದು ಪ್ರಗತಿಯ ಸಂಕೇತವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಆಗಮಿಸಿದ್ದ ಎಲ್ಲರಿಗೂ ಶ್ರೀರಕ್ಷೆಯನ್ನು ಕಟ್ಟಿ ಸಿಹಿಯನ್ನು ತಿನ್ನಿಸಲಾಯಿತು. ಓಂ ಶಾಂತಿ ಆರಾಧ್ಯ ತಹಶೀಲಾರ್ ಗಿರಿಜ, ಶಿರೇಸ್ತೇದಾರ್ ವೇಣು, ಶ್ರೀನಿವಾಸ್ ಶೆಟ್ಟಿ, ಗೀತಾ ಕುಮಾರ್, ನಿರ್ಮಲ, ಲಕ್ಷ್ಮಿ, ಸಿದ್ದಯ್ಯ, ಸುಬ್ರಹ್ಮಣ್ಯಂ, ಮಹೇಶ್, ನಾಗರಾಜ್, ಜಯರಾಮ್, ಸುಧಾ, ಆಶಾ ಹಾಜರಿದ್ದರು.