ಕಾಯಕಯೋಗಿ ಸೊನ್ನಲಿಗೆ ಶ್ರೀ ಸಿದ್ದರಾಮೇಶ್ವರ’ ಪ್ರಶಸ್ತಿ ಪ್ರಧಾನ
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.೨೦; ಕರ್ನಾಟಕ ರಾಜ್ಯ ಸಂಸ್ಥೆಯಾದ  ‘ವಿಶ್ವ ಕನ್ನಡ ಕಲಾ ಸಂಸ್ಥೆ’ಯಿಂದ ಐದನೇ ರಾಜ್ಯಮಟ್ಟದ  ‘ವಿಶ್ವ ಕನ್ನಡ ಸಾಹಿತ್ಯ’ ಮತ್ತು ‘’ಪರಿಸರ ಜಾಗೃತಿ ಸಮ್ಮೇಳನ’ ಕಾರ್ಯಕ್ರಮವನ್ನು ಏರ್ಪಡಿಸಿದ್ದು ಈ ಕಾರ್ಯಕ್ರಮದಲ್ಲಿ ಪರಿಸರ ಜಾಗೃತಿ ಸಾಹಿತ್ಯ ಸಾಂಸ್ಕೃತಿಕ ಮತ್ತು ಕವಿಗೋಷ್ಠಿಯ ಮೂಲಕ ವಿವಿದ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ‘ಕಾಯಕಯೋಗಿ ಸೊನ್ನಲಿಗೆ ಶ್ರೀ ಸಿದ್ದರಾಮೇಶ್ವರ’ ಪ್ರಶಸ್ತಿ ಮತ್ತು ‘ಜ್ಞಾನ ಯೋಗಿ ಶಿವಶರಣೆ ಅಕ್ಕಮಹಾದೇವಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿಜಯನಗರ ಜಿಲ್ಲೆ  ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ ಹೋಬಳಿಯ ‘ಹುಲಿಕೆರೆ’ ಸಮೀಪದ ರಾಷ್ಟ್ರೀಯ ಹೆದ್ದಾರಿ 50ರ ಪಕ್ಕದ ‘ಆನಂದ್ ನರ್ಸರಿ’ ಯಲ್ಲಿ ಈ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮಕ್ಕೆ ನಾಡಿನಾದ್ಯಂತ ಅನೇಕ ಕವಿಗಳು ಸಾಹಿತಿಗಳು ಪರಿಸರ ಪ್ರೇಮಿಗಳು ವಾಗ್ಮಿಗಳು ರಂಗ ಕಲಾವಿದರು ಕ್ರೀಡಾಪಟುಗಳು ಜಾನಪದ ಪ್ರೇಮಿಗಳು ಕನ್ನಡಪರ ಸಂಘಟನೆಗಳು ಪರಿಸರ ಜಾಗೃತಿ ಸಂಘಟನೆಗಳು ಜಾನಪದ ಕಲಾವಿದರು  ಗಾನಯಕ್ಷಗಾನ ಕಲಾವಿದರು, ಹರಿಕಥೆ ಪುರಾಣ ಶ್ರವಣ ಕೀರ್ತನಕಾರರು ನಾಡಿನ ಪ್ರತಿಭಾವಂತ ಪತ್ರಕರ್ತರು ಆಗಮಿಸಿದ್ದರು.