ಶ್ರೀ ರೇಣುಕಾಯಲ್ಲಮ್ಮ ದೇವಿ ದೇವಾಲಯದ ೪ ನೇ ವಾರ್ಷಿಕೋತ್ಸವ
ಕೋಲಾರ,ಆ.೨೧- ನಗರದ ಕಾರಂಜಿ ಕಟ್ಟೆಯ ೩ ನೇ ಕ್ರಾಸ್‌ನ ಶಾಂತಿ ನಗರದಲ್ಲಿರುವ ಶ್ರೀ ರೇಣುಕಾಯಲ್ಲಮ್ಮ ದೇವಿ ದೇವಾಲಯದ ೪ ನೇ ವಾರ್ಷಿಕೋತ್ಸವ ಅದ್ದೂರಿಯಾಗಿ ನಡೆಯಿತು.
ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಎಂ.ಎಲ್.ಸಿ.ಅನಿಲ್ ಕುಮಾರ್, ಕಾಂಗ್ರೆಸ್ ಮುಖಂಡರುಗಳಾದ ಗೋಪಾಲಗೌಡ, ಮುರಳಿ ಗೌಡ, ಜೆ.ಕೆ.ಜಯರಾಂ, ಡೆಕೊರೇಷನ್ ಕೃಷ್ಣ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ನಿರ್ದೇಶಕ ಅಬ್ದುಲ್ ಖಯೂಮ್, ಕೋಚಿಮುಲ್ ನಿರ್ದೇಶಕ ಷಂಶೀರ್, ಮಹಮ್ಮದ್ ಜಾಫರ್ ಸಾಬ್, ಅಫ್ ರೋಜ್ ಪಾಷ, ಸೀಪೂರ್ ಅಕ್ರಂ ಹಾಗೂ ಅನೇಕ ಮುಖಂಡರುಗಳು ಮತ್ತು ನೂರಾರು ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾದರು.
ಈ ಸಂಧರ್ಭದಲ್ಲಿ ಮಾತನಾಡಿದ ದೇವಾಲಯ ಕಮಿಟಿಯ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಚಂದ್ರಮೌಳಿ ದೇವಾಲಯ ಶತಮಾನಗಳಷ್ಟು ಹಳೆಯದಾಗಿದ್ದು, ಸ್ವಯಂ ಉದ್ಭವಿವಾಗಿರುವ ದೇವರ ಶಿಲೆಯನ್ನು ನಮ್ಮ ವಂಶಸ್ಥರು ಪೂಜಿಸಿಕೊಂಡು ಬರುತ್ತಿದ್ದು, ಪ್ರಸ್ತುತ ದೇವಾಲಯ ಕಮಿಟಿ ಹಾಗೂ ಯುವಕರ ತಂಡ ಸತತವಾಗಿ ದೇವಾಲಯದ ಅಭಿವೃದ್ಧಿ ಮಾಡುವುದರೊಂದಿಗೆ ಕಳೆದ ನಾಲ್ಕು ವರ್ಷದಿಂದ ಅದ್ದೂರಿಯಾಗಿ ವಾರ್ಷಿಕೋತ್ಸವವನ್ನು ನಡೆಸಿಕೊಂಡು ಬರುತ್ತಿದೆಯೆಂದು ತಿಳಿಸಿದರು.
ಈ ಸಂದರ್ಭದಲ್ಲಿ ದೇವಾಲಯಕ್ಕೆ ಆಗಮಿಸಿದ್ದ ಗಣ್ಯರನ್ನು, ಕುಲಸ್ಥ ಮುಖಂಡರುಗಳನ್ನು, ವಾರ್ಷಿಕೋತ್ಸವಕ್ಕೆ ಶ್ರಮಿಸಿದ ದೇವಾಲಯ
ಕಮಿಟಿಯವರನ್ನು ಹಾಗೂ ಯುವಕರ ತಂಡವನ್ನು ಸನ್ಮಾನಿಸಿ ಗೌರವಿಸಲಾಯಿತು.