ಮಹಾಮಾರಿ  ಡೆಂಗ್ಯೂ ಕಟ್ಟಿಹಾಕಲು ಜವಾಬ್ದಾರಿಯಿಂದಿರಿ”
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.೨೦; ಸಮೀಪದ ಚಿಕ್ಕೇನಹಳ್ಳಿಯ ಸ್ಲಂ ನಿವಾಸಿಗಳಿಗೆ ಮಾತೃಶ್ರೀ ನಗರ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ  ಡೆಂಗ್ಯೂ ಜ್ವರದ ಕುರಿತು ನಿಯಂತ್ರಣಕ್ಕೆ ಜಾಗೃತಿ ಮೂಡಿಸಲು ಜಾಥಾ ಕಾರ್ಯಕ್ರಮ ಕೈಗೊಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸ್ಲಂ ಜನಗಳು ಬೇರೆ ಬೇರೆ ಕಡೆಯಿಂದ ಉದ್ಯೋಗವನ್ನು ಅರಸಿ ಬಂದು ನಗರದ  ಹಲವೆಡೆ ಕೂಲಿ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ ಆದರೆ ಈ ಬಡ ಜನರಿಗೆ ಒಂದೊಳ್ಳೆ ಮನೆ ಇಲ್ಲ. ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಹಿಂಭಾಗ ಖಾಲಿ ಜಾಗದಲ್ಲಿ ಸಣ್ಣ ಸಣ್ಣ ಗುಡಿಸಲುಗಳನ್ನು ಕಟ್ಟಿಕೊಂಡು ಜೀವನ ಸಾಗಿಸಲು ಹರಸಾಹಸ ಪಡುತ್ತಿದ್ದಾರೆ.  ಇಂತಹ ಬಡಜನರು ಮೂಲಭೂತ ಸೌಲಭ್ಯ ಗಳಿಂದ ವಂಚಿತರಾಗಿದ್ದಾರೆ ಇವರಿಗೆ ಶಿಕ್ಷಣ, ಆರೋಗ್ಯದ ಕಡೆಗೆ ಗಮನ ಇಲ್ಲದಂತಾಗಿದೆ ಈ ಸಮುದಾಯದ ಜನರು ಹೆಚ್ಚಾಗಿ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ ಅದರಲ್ಲೂ ಈಗ ಕಾಡುತ್ತಿರುವ ಡೆಂಗ್ಯೂ ಜ್ವರಕ್ಕೆ ತುತ್ತಾಗಿದ್ದಾರೆ. ಡೆಂಗ್ಯೂ ಕುರಿತು ಜನರಿಗೆ ಹರಿವಿಲ್ಲದಂತಾಗಿದೆ ಈ ಬಗ್ಗೆ ಮಾತೃ ಶ್ರೀ ಸಂಸ್ಥೆಯು ಇಲ್ಲಿನ  ಜನರಿಗೆ ಪರಿಸರ ಸ್ವಚ್ಛತೆ, ವೈಯಕ್ತಿಕ ಸ್ವಚ್ಛತೆ, ಚರಂಡಿ ಸ್ವಚ್ಛವಾಗಿ ಇಡುವುದು, ಮಳೆ ನೀರು ನಿಲ್ಲದಂತೆ ನೋಡಿಕೊಂಡು ಸೊಳ್ಳೆ ಉತ್ಪತಿಯಾಗದಂತೆ ಎಚ್ಚರವಹಿಸುವುದು, ಶುದ್ಧ ಬಟ್ಟೆ ಮತ್ತು ದೇಹ ಅವರಿಸುವಂತೆ ಬಟ್ಟೆ ಧರಿಸುವುದು. ಶುದ್ಧ ಗಾಳಿ ಬೆಳಕು ನೀರು ಸೇವನೆ ಮಾಡುವುದು, ಮಕ್ಕಳ ಆರೋಗ್ಯ ಹಾಗೂ ಎಲ್ಲರ ಆರೋಗ್ಯ ಚೆನ್ನಾಗಿರುವಂತೆ ಕಾಪಾಡಿಕೊಳ್ಳುವುದು, ಡೆಂಗ್ಯೂ ಜ್ವರ ದ ಬಗ್ಗೆ ನಿರ್ಲಕ್ಷಿಸುವುದು ಬೇಡ. ಜ್ವರ ಹರಡದಂತೆ ನೋಡಿಕೊಳ್ಳಬೇಕೆಂದು ಸಂಸ್ಥೆಯ ವತಿಯಿಂದ ತಿಳಿಸಲಾಯಿತು ಮತ್ತು ಜನರಿಗೆ ಅರಿವು ಮೂಡಿಸಲಾಯಿತು.ನಂತರ  ಜಾಥಾ ನಡೆಸಲಾಯಿತು. ಇನ್ನು ಕಾರ್ಯಕ್ರಮ ದಲ್ಲಿ ಅಂಗನವಾಡಿ ಶಿಕ್ಷಕಿಯಾದ ನೇತ್ರಾವತಿ. ರೇಣುಕಮ್ಮ. ಸಂಸ್ಥೆಯ ಎಲ್ಲ ಸದಸ್ಯರು ಮಕ್ಕಳು, ಮಹಿಳೆಯರು, ಗ್ರಾಮಸ್ಥರು ಭಾಗವಹಿಸಿದ್ದರು.