ರಾಯರ ಆರಾಧನಾ ಮಹೋತ್ಸವ; ವಿಶೇಷಪೂಜೆ
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.20; ನಗರದ ಕೆಬಿ ಬಡಾವಣೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ  ಶ್ರೀಮದ್ರಾಘವೇಂದ್ರ ಗುರುಸಾರ್ವಭೌಮರ ೩೫೩ ನೇ ಆರಾಧನಾ ಮಹೋತ್ಸವ ಪ್ರಯುಕ್ತ ಶ್ರೀ ಗುರುರಾಯರಿಗೆ ವಿಶೇಷ ಪೂಜಾದಿ ಕಾರ್ಯಕ್ರಮಗಳು ಜರುಗಿತು.ನಿನ್ನೆ ಸಂಜೆ ಶ್ರೀಗುರು ರಾಘವೇಂದ್ರ ಸ್ವಾಮಿಗಳವರ ಮಠದ ಆವರಣದಲ್ಲಿ ಗೋಪೂಜೆ, ಧ್ವಜಾರೋಹಣ, ಲಕ್ಷ್ಮೀಪೂಜೆ,ಧಾನ್ಯಪೂಜೆ ಬಳಿಕ ಮಹಾಮಂಗಳಾರತಿ ಸಾಂಗವಾಗಿ ಜರುಗಿತು.ಇಂದು ಪೂರ್ವಾರಾಧನೆ ಹಿನ್ನೆಲೆಯಲ್ಲಿ ಸಂಜೆ ೭ ರಿಂದ ನಮನ ಅಕಾಡೆಮಿಯ ಶ್ರೀಮತಿ ಮಾಧವಿ ಗೋಪಾಲಕೃಷ್ಣ ಮತ್ತು ಶಿಷ್ಯವೃಂದದಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ ಎಂದು ಮಠದ ಆಡಳಿತಮಂಡಳಿ ತಿಳಿಸಿದೆ