ಚಿಟ್ಟಕ್ಕಿ  ಸ್ಕೂಲ್  ಬಾಲಕರು ಕಬಡ್ಡಿ ಸ್ಪರ್ಧೆಯಲ್ಲಿ ತಾಲ್ಲೂಕು ಮಟ್ಟಕ್ಕೆ ಆಯ್ಕೆ
ಸಂಜೆವಾಣಿ ವಾರ್ತೆ
ಹರಿಹರ.ಆ.೨೧; ತಾಲ್ಲೂಕಿನ ಕುಂಬಳೂರು ಗ್ರಾಮದ ಗುರುಕುಲ ಶಾಲಾ ಮೈದಾನದಲ್ಲಿ ನಡೆದ 2024 – 25 ನೇ ಸಾಲಿನ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಕುಂಬಳೂರು ಗ್ರಾಮದ ಚಿಟ್ಟಕ್ಕಿ ಇಂಟರ್ ನ್ಯಾಷನಲ್ ಸ್ಕೂಲ್ ನ ಬಾಲಕರು ಕಬಡ್ಡಿ ಗುಂಪು ಆಟ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಅಂತೆಯೇ ದೇವರಬೆಳಕೆರೆ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲಾ ಮೈದಾನದಲ್ಲಿ ನಡೆದ ವೈಯುಕ್ತಿಕ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಸದರಿ ಶಾಲೆಯ ವಿದ್ಯಾರ್ಥಿ ಶ್ರೇಯಸ್ ಗುಂಡು ಎಸೆತದಲ್ಲಿ ಪ್ರಥಮ, ಬಾಲಕಿಯರ ವಿಭಾಗದಲ್ಲಿ ಜಯ ಕೀರ್ತನ ದ್ವಿತೀಯ, ತಟ್ಟೆ ಎಸೆತದಲ್ಲಿ ಶ್ರೇಯಸ್ ದ್ವಿತೀಯ ಹಾಗೂ ದಿಗಂತ್ ತೃತೀಯ ಸ್ಥಾನ ಪಡೆದಿದ್ದಾರೆ . ಸಂಸ್ಥೆಯ ಆಡಳಿತಾಧಿಕಾರಿಗಳಾದ ಕುಮಾರ್ ಎಸ್, ಪ್ರಾಂಶುಪಾಲರಾದ ಚೇತನ್ ಕುಮಾರ್ ಹಂಪಕ್ಕನವರ್ , ಉಪ ಪ್ರಾಂಶುಪಾಲರಾದ ಕು. ಅಖಿಲೇಶ್ವರಿ, ಕ್ರೀಡಾ ವ್ಯವಸ್ಥಾಪಕರಾದ ವೀರಭದ್ರಾಚಾರ್, ದೈಹಿಕ ಶಿಕ್ಷಕರಾದ ಮುತ್ತುರಾಜ್, ತರಬೇತುದಾರರಾದ ವಿಕಾಸ್, ಸಂಸ್ಥೆಯ ಆಡಳಿತ ಮಂಡಳಿ,  ಎಲ್ಲಾ ಶಿಕ್ಷಕ – ಶಿಕ್ಷಕಿಯರು ಹಾಗೂ ಸಿಬ್ಬಂದಿ ವರ್ಗದವರು ವಿಜೇತ ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ.