ತಾಲೂಕು ಮಿನಿ ವಿಧಾನ ಸೌಧಕ್ಕೆ ಹೋಗುವ ಮಾರ್ಗದಲ್ಲಿ  ಮಳೆ ನೀರು ನಿಂತು  ಅಸ್ತವ್ಯಸ್ತ
ಸಂಜೆವಾಣಿ ವಾರ್ತೆ
ಹರಪನಹಳ್ಳಿ.ಆ.೨೧: ತಾಲೂಕು ತಹಶೀಲ್ದಾರ್ ಕಚೇರಿಗೆ ಹೋಗುವ    ಮಾರ್ಗ ಮಧ್ಯೆ ಸೋಮವಾರ ಮಳೆ ನೀರು ನಿಂತು  ಸಾರ್ವಜನಿಕರು ಸಂಚಾರ ಅಸ್ತವ್ಯಸ್ತ ಆದ ಘಟನೆ ತಾಲೂಕು ಮಿನಿ ವಿಧಾನ ಸೌಧ ಮಾರ್ಗದಲ್ಲಿ ಕಂಡುಬಂದಿದೆ.ಸಾರ್ವಜನಿಕರು ಹಾಗೂ ಅಧಿಕಾರಿಗಳು ರಸ್ತೆ ದಾಟಲು ಹರ ಸಾಹಸ ಪಡೆಯುತ್ತಿದ್ದರು  ಸಂಬಂದಟ್ಟ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ರಸ್ತೆಗೆ ನೀರು ನಿಲ್ಲದಂತೆ ಪರ್ಯಾಯ ವ್ಯವಸ್ಥೆ ಮಾಡಬೇಕಾಗಿದೆ. ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗುತ್ತಿತ್ತು.ಒಂದು ಗಂಟೆಗೂ ಹೆಚ್ಚು ಸಮಯದವರೆಗೆ ಸುರಿದ ಧಾರಾಕಾರವಾಗಿ ಮಳೆ ಮಧ್ಯಾಹ್ನ ಊಟಕ್ಕೆ ಬೀಡದೆ ರಭಸವಾಗಿ ವರುಣನ ಆರ್ಭಟದಿಂದ ಸಾರ್ವಜನಿಕರು ಅಸ್ತವ್ಯಸ್ತ ಆದ ಘಟನೆ ಕಂಡುಬಂದಿದೆ.ನಾನಾ ಕಾರಣಗಳಿಂದ ಇಲ್ಲಿಯ ಕಾಮಗಾರಿಯ ವಿರುದ್ಧ ಆಗಾಗ ಸಾರ್ವಜನಿಕರಿಂದ ಅಪಸ್ವರ ಮತ್ತು ಅಸಮಾಧಾನ ಕೇಳಿ ಬರುತ್ತಲೇ ಇದೆ.