ರಕ್ಷಾ ಬಂಧನ : ಮಾಜಿ ಸೈನಿಕರಿಗೆ ರಾಖಿ ಕಟ್ಟಿದ ಜಿಲ್ಲಾ ಬಿಜೆಪಿ ಮಹಿಳಾ ಪದಾಧಿಕಾರಿಗಳು.
ಸಂಜೆವಾಣಿ ವಾರ್ತೆ
ಹರಪನಹಳ್ಳಿ.ಆ.೨೧ : ಪಟ್ಟಣದ  ಹಳೇ ಬಸ್‌ ನಿಲ್ದಾಣದಲ್ಲಿರುವ  ವೀರಭದ್ರೇಶ್ವರ ದೇವಸ್ಥಾನದಲ್ಲಿ ಭಾರತೀಯ ಜನತಾ ಪಕ್ಷದ ಮಂಡಲ ಮತ್ತು ಜಿಲ್ಲಾ ಮಹಿಳಾ ಪದಾಧಿಕಾರಿಗಳು ದೇಶ ಸೇವೆ ಮಾಡಿದ ಮಾಜಿ ಸೈನಿಕರಿಗೆ ರಕ್ಷಾ ಬಂಧನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಮಾಜಿ ಸೈನಿಕರಿಗೆ ರಾಖಿ  ಕಟ್ಟುವ ಮೂಲಕ  ಸಹೋದರ ಸಹೋದರಿಯ ಬಾಂಧವ್ಯದಂತೆ ಸಹಿ ಹಂಚಿ ಸಂಭ್ರಮಿಸಿದರು.ಈ ಸಂದರ್ಭದಲ್ಲಿ ಮಾಜಿ ಸೈನಿಕರಾದ ಜಿ ದೇವೇಂದ್ರಪ್ಪ, ಮಂಜುನಾಥ, ಅನಿಲ್ ಕುಮಾರ್ ಬಸವರಾಜ್, ಜೀವನ್ ಕುಮಾರ್, ಬಿಜೆಪಿ ಜಿಲ್ಲಾ  ಮಹಿಳಾ  ಕಾರ್ಯದರ್ಶಿ  ಕುಸುಮ ಜಗದೀಶ್,ಪದಾಧಿಕಾರಿಗಳಾದ  ರೇಖಮ್ಮ, ಜಯಲಕ್ಷ್ಮಿ ವೀರನಗೌಡ, ಮಮತಾ, ವೀಣಾ, ರೋಜಾ ,ಪದ್ಮ, ಇದ್ದರು.