ಸೊಳ್ಳೆ ತಾಣ ನಾಶ ಮುಖ್ಯ ಗುರಿಯಾಗಲಿ
ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಆ.೨೧; ವಿದ್ಯಾರ್ಥಿಗಳು ಸೊಳ್ಳೆ ತಾಣಗಳ ನಾಶ ಮಾಡಲು ಮುಖ್ಯ ಗುರಿಯಾಗಿಸಿಕೊಳ್ಳಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು.
 ನಗರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ವಿಶ್ವ ಸೊಳ್ಳೆ ದಿನದಲ್ಲಿ ಅವರು ಮಾತನಾಡಿದರು.ವಿಶ್ವ ಸೊಳ್ಳೆ ದಿನವೆಂದರೆ ಆಚರಿಸುವ ಹಬ್ಬವಲ್ಲ. ಇದು ಮಾಹಿತಿ ಶಿಕ್ಷಣ ನೀಡುವ ಮೂಲಕ ಕೀಟಜನ್ಯ ರೋಗಗಳ ಜಾಗೃತಿ ಮೂಡಿಸುವ ಕಾರ್ಯಕ್ರಮವಾಗಿದೆ. ಆಗಸ್ಟ್ 20 1897 ರಂದು ರೋನಾಲ್ಡ್ ರಾಸ ಅವರು ಮಲೇರಿಯಾ ರೋಗ ಹೆಣ್ಣು ಅನಾಫೀಲಿಸ್ ಸೊಳ್ಳೆಗಳಿಂದ ಹರಡುತ್ತದೆ ಎಂದು ಪತ್ತೆ ಹಚ್ಚಿದ ದಿನವಾದ್ದರಿಂದ ಆ ದಿನವನ್ನು ಪ್ರತಿ ವರ್ಷ ಆಗಸ್ಟ್ 20ನೇ ತಾರೀಕಿನಂದು ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಸೊಳ್ಳೆ ದಿನವೆಂದು ಮಾಹಿತಿ ಶಿಕ್ಷಣ ಕಾರ್ಯಕ್ರಮ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ನಡೆಸಲಾಗುತ್ತಿದೆ ಎಂದರು.