ಅರಸು ಅವರ ಆದರ್ಶಗಳು ಯುವ ಪೀಳಿಗೆಗೆ ತಲುಪಲಿ :- ಶಾಸಕ. ಬಿ. ದೇವೇಂದ್ರಪ್ಪ ಅಭಿಮತ.
ಸಂಜೆವಾಣಿ ವಾರ್ತೆ
ಜಗಳೂರು.ಆ.೨೧ : – ಸಂಪತ್ತು,ಅಧಿಕಾರ,ಅವಕಾಶಗಳ ಸಮಾನ ಹಂಚಿಕೆಯ ದೂರದೃಷ್ಠಿ ಪರಿಕಲ್ಪನೆ ಹೊಂದಿದ ಹಾಗೂ ಸಾಮಾ ಜಿಕ‌ನ್ಯಾಯಕ್ಕೆ ಅಡಿಪಾಯ ಹಾಕಿದ ದೂರದೃಷ್ಠಿಯ ನಾಯಕ ಮಾಜಿ ಮುಖ್ಯಮಂತ್ರಿ ದಿ.ದೇವರಾಜ್ ಅರಸು ಅವರ ಆದರ್ಶ ಗಳು ಪೀಳಿಗೆಯಿಂದ ಪೀಳಿಗೆಗೆ ತಲುಪಲಿ ಎಂದು ಶಾಸಕ.ಬಿ. ದೇವೇಂದ್ರಪ್ಪ ಅಭಿಮತ ವ್ಯಕ್ತಪಡಿಸಿದರು.ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಆಡಳಿತ,ತಾಲೂಕು ಪಂಚಾಯಿತಿ,ಪಟ್ಟಣಪಂಚಾಯಿತಿ,ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ದೇವರಾಜ್ ಅರಸು ಅವರ 109ನೇ ಜನ್ಮ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಸಾಮಾಜಿಕ ಸ್ತರದಲ್ಲಿ ಶೋಷಿತ ಮತ್ತು ಮೇಲ್ವರ್ಗದವರ ಮಧ್ಯೆ ಅಸಮಾನತೆ,ಶೋಷಣೆ,ಅಸ್ಪೃಶ್ಯತೆ ವಿಜೃಂಭಿಸುತ್ತಿದ್ದ ಕಾಲಘಟ್ಟ ದಲ್ಲಿ ಅಂಬೇಡ್ಕರ್ ಸಂವಿಧಾನದ ಆಶಯದಂತೆ ಶೋಷಿತ,ಹಿಂದು ಳಿದ ವರ್ಗದವರಿಗೆ ಸಮಾನತೆ,ಮೀಸಲಾತಿ ಒದಗಿಸಿದಧೀಮಂತ ರಾಜಕಾರಣಿ ದೇವರಾಜ್ ಅರಸು ಅವರ ಕೊಡುಗೆಯನ್ನು ಭಾಷಣದಲ್ಲಿ ಆಲಿಸಿ ಮರೆತರೆ ಪ್ರಯೋಜನವಿಲ್ಲ.ಪ್ರತಿನಿತ್ಯ ಸ್ಮೃತಿ ಪಟಲದಲ್ಲಿ ಪುನರಾವರ್ತಿತಗೊಳ್ಳಬೇಕಿದೆ ಎಂದರು.ಕಳೆದ 50 ವರ್ಷಗಳ‌ಹಿಂದೆ ತಾಲೂಕಿನಲ್ಲಿ ಜೀವಂತವಾಗಿದ್ದ ಮನುಕುಲವೇ ತಲೆತಗ್ಗಿಸುವಂತಹ ದಲಿತರು ಮಲಹೋರುವ ಪದ್ದತಿಯನ್ನು ನಾನು ಬಾಲ್ಯಾವಸ್ಥೆಯಲ್ಲಿ ಕಣ್ಣಾರೆ ಕಂಡಿರುವೆ. ಇಂತಹ ಅನಿಷ್ಠ ಪದ್ದತಿ ನಿಷೇಧಗೊಳಿಸಿದ ದೇವರಾಜ್ ಅರಸು ಅವರ ಆಡಳಿತ ವೈಖರಿಯನ್ನು ಮನಗಂಡು.ಪ್ರಸಕ್ತ ಸ್ಪರ್ಧಾತ್ಮಕ ಜಗತ್ತಿನಲ್ಲಿ ದಲಿತ,ಹಿಂದುಳಿದ ಸಮುದಾಯಗಳು ಜಾಗೃತರಾಗಿ ಮೀಸಲಾತಿ ಸದುಪಯೋಗಪಡೆದುಕೊಂಡು ಭವಿಷ್ಯರೂಪಿಸಿ ಕೊಳ್ಳಬೇಕು.ಹಟ್ಟಿಗಳ ಗುಡಿಸಲುಗಳಿಗೆ ಮುಕ್ತಿನೀಡಿ,ಹೈಟೆಕ್ ಬಡಾವಣೆಗಳಲ್ಲಿ ನಿವಾಸಿಗಳಾಗಬೇಕಿದೆ ಎಂದು ಕರೆ ನೀಡಿದರು.