ಪುಣ್ಯ ಪುರುಷರ ಜೀವನ ಚರಿತ್ರೆಯಿಂದ ಮನಸ್ಸು ಶುದ್ಧ
ಕಲಬುರಗಿ:ಆ.20:ಪುಣ್ಯಪುರುಷರ ಜೀವನ ಚರಿತ್ರೆಗಳನ್ನು ಓದುವುದರಿಂದ ಮನಸ್ಸು ಶುದ್ಧವಾಗುತ್ತದೆ ಎಂದು ಅಪ್ಪ ಪಬ್ಲಿಕ್ ಶಾಲೆಯ ಹಿಂದಿ ಪ್ರಾಧ್ಯಾಪಕಿ ಶ್ರೀಮತಿ ಶಿಲ್ಪರಾಣಿ ಪಾಟೀಲ ಹೇಳಿದರು.
ಕಲಬುರಗಿಯ ಶರಣಬಸವೇಶ್ವರ ದೇವಸ್ಥಾನದಲ್ಲಿ 30 ದಿನಗಳ ಸಾಂಸ್ಕøತಿಕ ಶಿವಾನುಭವ ಉಪನ್ಯಾಸ ಮಾಲಿಕೆಯಲ್ಲಿ ಮಂಗಳವಾರ ಪುಣ್ಯಪುರುಷರ ಜೀವನ ಚರಿತ್ರೆಗಳು ಎಂಬ ವಿಷಯ ಕುರಿತು ಮಾತನಾಡಿದರು.
ಪುಣ್ಯಪುರುಷರ ಜೀವನ ಚರಿತ್ರೆಗಳು ಅಂತರಂಗವನ್ನು ಶುದ್ಧಿಸಿ, ಮೌಲಿಕ ಬದುಕನ್ನು ಕಟ್ಟಿಕೊಳ್ಳುತ್ತವೆ. ಸತ್ಪುರುಷರ ಜೀವನ ಚಿರಿತ್ರೆಗಳು ಜೀವನಕ್ಕೆ ಮಾದರಿಯಾಗಿವೆ. ಮಹಾದಾಸೋಹಿ ಶರಣಬಸವರು ಜೀವನ ಪವಿತ್ರವಾದದ್ದು . ಶರಣಬಸವೇಶ್ವರ ನಂತರ ಬಂದಂತಹ ಎಲ್ಲ ಶರಣರ ಜೀವನ ಬಹಳ ಶ್ರೇಷ್ಠವಾಗಿತ್ತು. ಅದರಲ್ಲೂ ಪೂಜ್ಯ ದೊಡ್ಡಪ್ಪ ಅಪ್ಪನವರು ಎರಡನೇ ಶರಣಬಸವರೆ ಆಗಿದ್ದರು. ಅವರು ಅನೇಕ ಪವಾಡಗಳನ್ನೇ ಮಾಡಿದರು. ಕಷ್ಟ ಅಂತ ಬಂದ ಭಕ್ತರ ಸಮಸ್ಯೆಗಳನ್ನು ಪರಿಸುತ್ತಿದ್ದರು. ಅವರು ದಾಸೋಹ, ಕಾಯಕಕ್ಕೆ ಮಹತ್ವ ನೀಡಿದರು. ಯಾರೂ ಮೇಲು ಅಥವಾ ಯಾರೂ ಕೀಳು ಎಂದು ಭಾವಿಸಲಿಲ್ಲ. ಎಲ್ಲರನ್ನು ತಮ್ಮವರೆಂದು ನೋಡುತ್ತಿದ್ದರು. ಅದರಂತೆ ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರು ಪೂಜ್ಯ ದೊಡ್ಡಪ್ಪ ಅಪ್ಪ ಅವರು ಹಾಕಿದ ದಾರಿಯಲ್ಲೇ ನಡೆದು ವಿದ್ಯಾಭಂಡಾರಿಯಾದರು. ಸಾಹಿತ್ಯ, ಸಂಸ್ಕೃತಿ, ಕಲೆ, ವಿಜ್ಞಾನಕ್ಕೆ ಹೆಚ್ಚು ಒತ್ತು ಕೊಟ್ಟು ಬೆಳೆಸಿದರು. ಈ ಭಾಗ ಶೈಕ್ಷಣಿಕವಾಗಿ ಬೆಳೆಯಲು ಬಹಳಷ್ಟು ಶ್ರಮವಹಿಸಿದ್ದಾರೆ. ಅನ್ನ ದಾಸೋಹದ ಜೊತೆಗೆ ಅಕ್ಷರ ದಾಸೋಹವನ್ನು ಮಾಡಿದರು. ಇವರೆಲ್ಲ ಪುಣ್ಯಪುರುಷರಾಗಿದ್ದಾರೆ. ಅವರ ಜೀವನ ಚಿರತ್ರೆಗಳು ಪುಸ್ತಕಗಳಾಗಿ ಹೊರಬಂದಿವೆ. ಶರಣಬಸವೇಶ್ವರ ಸಂಸ್ಥಾನದಿಂದ ಅನೇಕ ಪುಣ್ಯಪುರುಷರ ಜೀವನ ಚರಿತ್ರೆ ಕುರಿತು ಪುಸ್ತಕಗಳು ಹೊರ ಬಂದಿವೆ. ಪೂಜ್ಯ ದೊಡ್ಡಪ್ಪ ಅಪ್ಪ ಕುರಿರು ಶ್ರೇ಼ಷ್ಠ ವಿದ್ವಾಂಸ ಎಲ್.ಬಸವರಾಜ, ವೀರಶೈವ ಸಮಾಜದವರು, ಡಾ.ಎಸ್ೆಂ.ಹಿರೇಮಠ ಅವರು ಶರಣಬಸವೇಶ್ವರ ಜೀವನ ಕುರಿತು ಅನೇಕ ಡಾ.ನೀಲಾಂಬಿಕಾ ಪೆÇಲೀಸ್ ಪಾಟೀಲರು ಮಹಾದಾಸೋಹಿ ಶರಣಬಸವರ ಜನಪದ ಮಹಾಕಾವ್ಯ, ಡಾ.ಶಿವರಾಜ ಶಾಸ್ತ್ರೀ ಅವರು ದಾಸೋಹ ಪರಿಣಾಮಿ, ಹೆಚ್.ತಿಪ್ಪೇರುದ್ರಸ್ವಾಮಿಯವರು ವಚನ ಚಳುವಳಿ, ಚಿತ್ತಲೋಕದ ಚಿದ್ಬೇಳಗು ಹೀಗೆ ಅನೇಕ ಪುಣ್ಯಪುರುಷರ ಜೀವನ ಚರಿತ್ರೆಯ ಪುಸ್ತಕಗಳು ಹೊರಬಂದಿವೆ ಎಂದು ಹೇಳಿದರು.