ನಾಗರದಿನ್ನಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ: ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ
ವಿಜಯಪುರ, ಆ.20:ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲ್ಲೂಕಿನ ನಾಗರದಿನ್ನಿ ಗ್ರಾಮದಲ್ಲಿ ಚಿರತೆ ಹಾಗೂ ಚಿರತೆ ಮರಿಗಳು ಪ್ರತ್ಯಕ್ಷವಾಗಿದ್ದು, ಜನರು ಆತಂಕಕ್ಕೀಡಾಗಿದ್ದಾರೆ.
ವಿಜಯಪುರ ಜಿಲ್ಲೆ ಕೊಲ್ಹಾರ ತಾಲೂಕಿನ ನಾಗರದಿನ್ನಿ
ಗ್ರಾಮದ ರೈತ ಸುರೇಶ ಕುಬಕಡ್ಡಿ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಅಳವಡಿಸಿದ ಸಿಸಿ ಕ್ಯಾಮರಾಗಳಲ್ಲಿ ಚಿರತೆ ಹಾಗೂ ಮರಿಗಳು ಕಾಣಿಸಿಕೊಂಡಿವೆ.
ಅಲ್ಲದೆ ರೈತ ಮಹಾದೇವ ಕೋಲಕಾರ ಜಮೀನಿನ ಬಳಿ ಕೂಡಾ ಚಿರತೆ ಮತ್ತು ಚಿರತೆ ಮರಿಗಳು ಕಾಣಿಸಿಕೊಂಡಿವೆ. ಇದರಿಂದಾಗಿ ಗ್ರಾಮದಲ್ಲಿ ಭಯದ ವಾತಾವರಣ ಆವರಿಸಿದೆ.
ಸುದ್ದಿ ತಿಳಿದ ತಕ್ಷಣ ಅರಣ್ಯಾಧಿಕಾರಿ, ತಹಶೀಲ್ದಾರ ಹಾಗೂ ಪೆÇಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶೀಘ್ರವಾಗಿ ಚಿರತೆ ಹಾಗೂ ಮರಿಗಳನ್ನು ಸೆರೆ ಹಿಡಿಯುವುದಾಗಿ ಅರಣ್ಯಾಧಿಕಾರಿಗಳು ಭರವಸೆ ನೀಡಿದ್ದಾರೆ.
ಜನರು ಸುರಕ್ಷತೆಯಿಂದ ಓಡಾಡಬೇಕೆಂದು ಉಪ ವಲಯ ಅರಣ್ಯಾಧಿಕಾರಿ ಬಸವರಾಜ ಕೊಣ್ಣೂರ, ಕೊಲ್ಹಾರ ತಹಶೀಲ್ದಾರ್ ಎಸ್.ಎಸ್. ನಾಯಕಲಮಠ ಸೂಚನೆ ನೀಡಿದ್ದಾರೆ.
ಆದಾಗ್ಯೂ ಹೊಲದ ಕೆಲಸಕ್ಕೆ ಹೋಗುವ ಹಾಗೂ ತೋಟದ ಮನೆಯಲ್ಲಿ ವಾಸಿಸುತ್ತಿರುವ ಗ್ರಾಮಸ್ಥರಿಗೆ ಭಯ, ಆತಂಕ ಇನ್ನೂ ದೂರವಾಗಿಲ್ಲ. ಈಗಲೂ ಗ್ರಾಮಸ್ಥರು ಉಸಿರು ಬಿಗಿ ಹಿಡಿದುಕೊಂಡು ಜೀವಿಸುವಂತಾಗಿದೆ.