ವಿಶ್ವದಲ್ಲಿಯೇ ಪ್ರಥಮ ಮಹಿಳಾ ಸೈನ್ಯ ಕಟ್ಟಿದ ಧೀರೆ ಬೆಳವಡಿ ಮಲ್ಲಮ್ಮ
ಕಲಬುರಗಿ:ಆ.20: ವಿಶ್ವದಲ್ಲಿಯೇ ಮೊದಲ ಬಾರಿಗೆ ಎರಡು ಸಾವಿರಕ್ಕೂ ಅಧಿಕ ಮಹಿಳಾ ಸೈನಿಕ ಪಡೆ ಕಟ್ಟಿ, ಮೊಘಲರು, ಬ್ರಿಟಿಷ್‍ರ ವಿರುದ್ಧ ಹೋರಾಡಿದ ವೀರ ಕನ್ನಡತಿ ಬೆಳವಡಿ ಮಲ್ಲಮ್ಮನವರು ಮಹಿಳಾ ಲೋಕಕ್ಕೆ ಮಾದರಿಯಾಗಿದ್ದಾರೆ. ಕನ್ನಡ ನಾಡಿಗೆ ಗೌರವ ತಂದು ಕೊಟ್ಟಿರುವ ಇವರ ಕೊಡುಗೆಯನ್ನು ಕನ್ನಡದ ಇತಿಹಾಸದಲ್ಲಿ ಸೇರ್ಪಡೆಯಾಗಬೇಕು ಎಂದು ಉಪನ್ಯಾಸಕ, ಚಿಂತಕಎಚ್.ಬಿ.ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯ ಶಿವ ನಗರದಲ್ಲಿರುವ ‘ಜ್ಞಾನ ಚಿಗುರು ಟ್ಯೂಟೋರಿಯಲ್ಸ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ಜರುಗಿದ ‘ಬೆಳವಡಿ ಮಲ್ಲನವರ ಜಯಂತಿ’ಯಲ್ಲಿ ಅವರು ಮಾತನಾಡಿದರು.
ಮುಖ್ಯ ಶಿಕ್ಷಕಿ ಚಂಪಾಕಲಾ ನೆಲ್ಲೂರೆ ಮಾತನಾಡಿ, ಕನ್ನಡ ನಾಡಿನ ಬೆಲ್ಳಿ ಚುಕ್ಕೆ, ಮಹಿಳಾ ಶಿರೋಮಣಿ ಮಲ್ಲಮ್ಮನವರು ಸಮಸ್ಥ ಮಹಿಳೆಯರಿಗೆ ಸ್ಪೂರ್ತಿಯಾಗಿದ್ದಾರೆ. ಅವರಲ್ಲಿರುವ ಧೈರ್ಯ, ಕನ್ನಡಪರ ಕಾಳಜಿ ಅನುಕರಣೀಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಮರ ಜಿ.ಬಂಗರಗಿ, ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್.ಬಿರಾದಾರ, ಪ್ರಮುಖರಾದ ಪವಿತ್ರಾ, ಭಾಗ್ಯಲಕ್ಷ್ಮೀ, ಶೃಷ್ಟಿ, ಆನಂದ, ಸಂಗಮೇಶ್, ತಜುಮುಲ್ಲಾ, ಸ್ವರೂಪ್ ಹಾಗೂ ವಿದ್ಯಾರ್ಥಿಗಳಿದ್ದರು.