ಸಮಾಜಕ್ಕೆ ಛಾಯಾಗ್ರಾಹಕರ ಕೊಡುಗೆ ಅನನ್ಯ
ಕಲಬುರಗಿ:ಆ.20: ಒಂದು ಚಿತ್ರ ಸಾವಿರ ಶಬ್ದಗಳಿಗೆ ಸಮಾನ. ವ್ಯಕ್ತಿ ಹಾಗೂ ಯಾವುದೇ ವರ್ಣಿಸಲಾಗದದೃಶ್ಯವನ್ನು ನೈಜವಾಗಿ ಸೆರಹಿಡಿಯುವ ಕಲೆ ಸಾಮಾನ್ಯವಾದುದಲ್ಲ. ಇದರಿಂದ ಆ ಸಂದರ್ಭಖುದ್ದಾಗಿ ವೀಕ್ಷಿಸಿದ ಅನುಭವಉಂಟಾಗುವಂತೆ ಮಾಡಿ, ಅಲ್ಲಿನಸ್ಥಿತಿ-ಗತಿಯ ನೈಜಚಿತ್ರಣನೀಡುವಕೆಲಸ ಮಾಡುವಛಾಯಾಗ್ರಾಹಕರಕೊಡುಗೆಸಮಾಜಕ್ಕೆತುಂಬಾಅನನ್ಯವಾಗಿದೆಯೆಂದುಉಪನ್ಯಾಸಕಎಚ್.ಬಿ.ಪಾಟೀಲ ಹೇಳಿದರು.
ನಗರದನೆಹರುಗಂಜ ಪ್ರದೇಶ ಬಸ ನಿಲ್ದಾಣ ಸಮೀಪವಿರುವ ‘ದೇವಿ ಫೋಟೋ ಸ್ಟುಡಿಯೋ’ದಲ್ಲಿ’ಬಸವೇಶ್ವರ ಸಮಾಜ ಸೇವಾ ಬಳಗ’ದ ಸೋಮವಾರವತಿಯಿಂದ ಏರ್ಪಡಿಸಿದ್ದ ‘187ನೇ ವಿಶ್ವ ಛಾಯಾಗ್ರಾಹಕರ ದಿನಾಚರಣೆ’ಯಲ್ಲಿಅವರುಮಾತನಾಡುತ್ತಿದ್ದರು.
ಖ್ಯಾತ ಫೋಟೋಗ್ರಾಫರ್ ಶಿವರಾಜ ತೊನಸಳ್ಳಿ ಮಾತನಾಡಿ, ಕ್ಯಾಮರಾ ಮಾನವನ ಕಣ್ಣುಗಳಿಂದ್ದಂತೆ. ಕೆಲವು ಸಲ ನಾವೂ ನೋಡಿದ್ದು ನೆನಪಿಗೆ ಬರದಿದ್ದರೂ, ಕ್ಯಾಮಾರಾವು ಶಾಶ್ವತದಾಖಲೆಯನ್ನುಒದಗಿಸುತ್ತದೆ. ಪ್ರಸ್ತುತವಾಗಿ ಮೋಬೈಲ್‍ಯುಗದಲ್ಲಿಛಾಯಾಗ್ರಾಹಕರುತೀರ್ವ ಸ್ಪರ್ಧೆಯನ್ನು ಎದುರಿಸಿ ಕಾರ್ಯನಿರ್ವಹಿಸಬೇಕಾಗಿರುವದುಒಂದು ಸವಾಲಿನ ಕಾರ್ಯವಾಗಿದೆ. ಸರ್ಕಾರದಿಂದ ಸೌಲಭ್ಯಗಳು ದೊರೆಯಬೇಕಾಗಿವೆಎಂದರು.
ಕಾರ್ಯಕ್ರಮದಲ್ಲಿಪ್ರಮುಖರಾದ ಶಿವಯೋಗೆಪ್ಪಾ ಎಸ್. ಬಿರಾದಾರ, ಅಂಬರೀಶಕಲ್ಲೂರ, ಬಸವರಾಜಕುಲಕರ್ಣಿ, ರಮೇಶ ಹಿರೇಮಠ, ವಿನೋದ ಕಲಬುರ್ಗಿ, ಸುನಿಲ ಹೊಸಮನಿ, ಬಸವರಾಜ ತೊನಸಳ್ಳಿ ಸೇರಿದಂತೆಇನ್ನಿತರರಿದ್ದರು.