ಮುದನೂರಿನ ಕೋರಿಸಿದ್ದೇಶ್ವರ ಶಾಖಾ ಮಠದಲ್ಲಿ ದಸರಾ ಉತ್ಸವ
ಸಂಜೆವಾಣಿ ವಾರ್ತೆ
ಕೆಂಭಾವಿ:ಅ.೨:ಪಟ್ಟಣ ಸಮೀಪದ ಮುದನೂರಿನ ಕೋರಿಸಿದ್ದೇಶ್ವರ ಶಾಖಾ ಮಠದಲ್ಲಿ ದಸರಾ ಉತ್ಸವದ ಅಂಗವಾಗಿ ಶ್ರೀದೇವಿ ಪುರಾಣ ಪಾರಾಯಣ ಮತ್ತು ಶ್ರೀ ಮಠದ ಪೂಜ್ಯರ ೨೪ನೇ ವರ್ಷದ ಅನುಷ್ಠಾನ ಕಾರ್ಯಕ್ರಮವು ಇದೇ ಅ.೩ ಗುರವಾರ ದಂದು ಪ್ರಾರಂಭವಾಗಿ ಅ.೧೨ರ ವರೆಗೆ ನಾಲವಾರದ ಕೋರಿಸಿದ್ದೇಶ್ವರ ಸಂಸ್ಥಾನದ ಪೂಜ್ಯಾರಾದ ಷ.ಬ್ರ.ಶ್ರೀ ಡಾ.ಸಿದ್ದ ತೊಟೇಂದ್ರ ಶಿವಾಚಾರ್ಯರ ಕೃಪಾ ಸನ್ನಿಧಿಯಲ್ಲಿ ನೇರವೆರಲಿದ್ದು ನಾಡಿನ ವಿವಿಧ ಮಠಾಧೀಶರು ರಾಜಕೀಯ ಮುಖಂಡರುಗಳು ವಿವಿಧ ಕ್ಷೇತ್ರದ ಕಲಾವಿದರುಗಳು ಸೇರಿದಂತೆ ,ಶ್ರೀ ಮಠದ ಸದ್ಬಕ್ತರು ಭಾಗವಹಿಸಲಿದ್ದಾರೆ ಎಂದು ಮುದನೂರ ಕೋರಿಸಿದ್ದೇಶ್ವರ ಶಾಖಾ ಮಠದ ಪೀಠಾಧಿಪತಿಗಳಾದ ಷ.ಬ್ರ ಸಿದ್ದಚನ್ನ ಮಲ್ಲಿಕಾರ್ಜುನ ಶಿವಾಚಾರ್ಯರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ,