ತುಳಜಾಪೂರ ಅಂಭಾಭವಾನಿ ಜಾತ್ರೆಗೆ ಪ್ರಯುಕ್ತವಿಶೇಷ (ಹೆಚ್ಚಿನ) ಬಸ್‍ಗಳ ಕಾರ್ಯಾಚರಣೆ
ಕಲಬುರಗಿ:ಅ.1:ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕಲಬುರಗಿ ವಿಭಾಗ-2 ವತಿಯಿಂದ ಇದೇ ಅಕ್ಟೋಬರ್ 2 ರಿಂದ 18 ರವರೆಗೆ ಮಹಾನವಮಿ/ದಸರ ಹಬ್ಬದ ಪ್ರಯುಕ್ತ ತುಳಜಾಪೂರ ಅಂಬಾಭವಾನಿ ದರ್ಶನಕ್ಕೆ ಹೋಗುವ ಭಕ್ತಾದಿಗಳ ಅನುಕೂಲಕ್ಕಾಗಿ ವಿಶೇಷ (ಹೆಚ್ಚಿನ) ಬಸ್‍ಗಳನ್ನು ನಿಗಮದ ಕೆಳಕಂಡ ಬಸ್ ನಿಲ್ದಾಣದಿಂದ /ಘಟಕಗಳಿಂದ ವ್ಯವಸ್ಥೆ ಮಾಡಲಾಗಿದೆ ಎಂದು ಕಲಬುರಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕಲಬುರಗಿ ವಿಭಾಗ-2ರ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.
ವಿಭಾಗೀಯ ಸಂಚಾರ ಅಧಿಕಾರಿ-ರವೀಂದ್ರಕುಮಾರ-7760984086, ನಿಲ್ದಾಣ ಅಧಿಕಾರಿಗಳು-ಮಲ್ಲಿಕಾರ್ಜುನ ಜೋಗೂರ-9880807959, ಸಹಾಯಕ ಸಂಚಾರ ವ್ಯವಸ್ಥಾಪಕ-7760993920, ಕಲಬುರಗಿ ಕೇಂದ್ರ ಬಸ್ ನಿಲ್ಧಾಣದ ಅನಿಲಕುಮಾರ-8618637395, ಆಳಂದ ಬಸ್ ನಿಲ್ದಾಣದ ಘಟಕ ವ್ಯವಸ್ಥಾಪಕ-ಯೋಗಿನಾಥ ಸರಸಂಬಿ-7760992116, ಜೇವರ್ಗಿ ಬಸ್ ನಿಲ್ಧಾಣದ ಘಟಕ ವ್ಯವಸ್ಥಾಪಕ ಜೆ.ಡಿ. ದೊಡಮನಿ-7760992118 ಹಾಗೂ ಅಫಜಲಪೂರ ಬಸ್ ನಿಲ್ದಾಣದ ಘಟಕ ವ್ಯವಸ್ಥಾಪಕ ಅಮೀನಪ್ಪ ಬೋವಿ-7760992121.
ಇದಲ್ಲದೇ 40 ರಿಂದ 45, ಪ್ರಯಾಣಿಕರಿದ್ದಲ್ಲಿ ಸದರಿ ಗ್ರಾಮದಿಂದಲೇ ನೇರವಾಗಿ ಸಾರಿಗೆ ಸೌಲಭ್ಯ ಒದಗಿಸಲಾಗುತ್ತದೆ. ಸಾರ್ವಜನಿಕ/ ಪ್ರಯಾಣಿಕರ/ ಭಕ್ತಾದಿಗಳು ಇದರ ಸದುಪಯೋಗ ಪಡೆಯಬೇಕೆಂದು ಅವರು ತಿಳಿಸಿದ್ದಾರೆ.