ಮೊಬೈಲ್ ವ್ಯಸನಕ್ಕಾಗಿ ತಲೆ ತಗ್ಗಿಸಬೇಡಿ, ಪುಸ್ತಕ ಓದಲು ತಲೆ ತಗ್ಗಿಸಿ: ಮುನ್ನೂರ
ಅಫಜಲಪುರ: ಆ.20:ಇತ್ತಿಚಿಗೆ ಮೊಬೈಲ್ ಬಳಕೆ ಹೆಚ್ಚಾಗಿ ಗೀಳಾಗುತ್ತಿದೆ. ವಿದ್ಯಾರ್ಥಿಗಳು ಮೊಬೈಲ್ ವ್ಯಸನ ತಲೆಗೇರಿಸಿಕೊಂಡು ತಲೆ ತಗ್ಗಿಸಬೇಡಿ. ಪುಸ್ತಕಗಳನ್ನು ಓದುವುದಕ್ಕಾಗಿ ತಲೆ ತಗ್ಗಿಸಿದರೆ ಮುಂದೊಂದು ದಿನ ಅದು ನಿಮ್ಮ ತಲೆ ಎತ್ತಿ ನಿಲ್ಲುವಂತೆ ಮಾಡುತ್ತದೆ ಎಂದು ಸಾಹಿತಿ, ಪತ್ರಕರ್ತರಾದ ಮಹಿಪಾಲ್‍ರೆಡ್ಡಿ ಮುನ್ನೂರ ಹೇಳಿದರು.
ಪಟ್ಟಣದ ಡಾ. ಎಪಿಜೆ ಅಬ್ದುಲ್ ಕಲಾಂ ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ 2024-25ನೇ ಸಾಲಿನ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಹಾಗೂ ಕಲಾಂ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕಾಲ ಬದಲಾಗಿದೆ ಹೀಗಾಗಿ ಓದಿನತ್ತ ಹೆಚ್ಚು ಗಮನ ಸಮಯ ಪ್ರಜ್ಞೆಯಿಂದ ಇಟ್ಟುಕೊಂಡು ಓದಿ, ಸುಮ್ಮನೆ ಟೈಂ ಪಾಸ್‍ಗಾಗಿ ಓದುವುದು ಬೇಡ. ಎಂದು ಸಲಹೆ ನೀಡಿದ ಅವರು ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣ ನೀಡುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಎಪಿಜೆ ಅಬ್ದುಲ್ ಕಲಾಂ ಕಾಲೇಜನ್ನು ಕಟ್ಟಿ ಬೆಳೆಸುತ್ತಿರುವ ಶಿವಾನಂದ ಚಿಂಚೋಳಿ ಅವರ ಶ್ರಮ ಶ್ಲಾಘನೀಯವಾದದ್ದು ಎಂದರು.
ವಿಶ್ವಾರಾಧ್ಯ ಶ್ರೀ ಮಳೇಂದ್ರ ಶಿವಾಚಾರ್ಯರು ಸಾನಿಧ್ಯ ವಹಿಸಿ ಮಾತನಾಡುತ್ತಾ, ಗುರಿ ಇಲ್ಲದ ಜೀವನ ಗರಿ ಇಲ್ಲದ ಹಕ್ಕಿ ಇದ್ದಂತೆ ಎಂದು ಸಲಹೆ ನೀಡಿದರಲ್ಲದೆ ಶಿಕ್ಷಣ ಸಂಸ್ಥೆಗೆ ತಮ್ಮ ವೈಯಕ್ತಿಕವಾಗಿ 51 ಸಾವಿರ ರೂಪಾಯಿ ದೇಣಿಗೆ ನೀಡಿದರು.
ಗುರುಲಿಂಗಯ್ಯ ಸಾಲಿಮಠ ಉದ್ಘಾಟಿಸಿ ಮಾತನಾಡುತ್ತಾ, ಇತ್ತಿಚಿಗೆ ಪರೀಕ್ಷೆಗಳಲ್ಲಿ ವೆಬ್ ಕಾಸ್ಟಿಂಗ್ ಬಂದು ಬಹಳ ಅನುಕೂಲವಾಗಿದೆ. ವಿದ್ಯಾರ್ಥಿಗಳು ಕ್ರೀಯಾಶಿಲರಾಗಲು ಈ ಪದ್ದತಿ ಮುಂದುವರೆಯಬೇಕು ಎಂದರು.
ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಹಿರೇಮಠ ಮಾತನಾಡಿ ತಂತ್ರಜ್ಞಾನ ಮತ್ತು ಸ್ಪರ್ಧಾತ್ಮಕವಾಗಿರುವ ಈ ಯುಗದಲ್ಲಿ ಯಾರೂ ಸಹ ನೀವಿರುವ ಬಳಿ ಬಂದು ಸೌಕರ್ಯಗಳನ್ನು ತಂದು ಕೊಡುವುದಿಲ್ಲ. ಹೀಗಾಗಿ ನೀವು ನಿಮ್ಮ ಗುರಿ ಸಾಧನೆಗಾಗಿ ನಿತ್ಯ ಶ್ರಮ ವಹಿಸಲೇಬೇಕು. ನಿಮ್ಮ ಹೆತ್ತವರು ನಿಮ್ಮ ಬಗ್ಗೆ ಸಾಕಷ್ಟು ಕನಸುಗಳನ್ನು ಕಂಡಿದ್ದಾರೆ, ಅವುಗಳ ಸಾಕಾರದ ಜೊತೆಗೆ ನಿಮ್ಮ ಬದುಕು ರೂಪಿಸಿಕೊಳ್ಳುವುದಕ್ಕಾಗಿ ಪ್ರತಿಕ್ಷಣ ನೀವು ಹೋರಾಟ ಮಾಡಬೇಕು ಎಂದು ಕರೆ ನೀಡಿದರು.
ಮಹಾಂತೇಶ ಪಾಟೀಲ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಶಿವಾನಂದ ಚಿಂಚೋಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವಸತಿ ನಿಲಯ ಪಾಲಕಿ ಗೀತಾ ಬಾಸುತ್ಕರ್ ಮಾತನಾಡಿದರು.
ಈ ಸಂದರ್ಭದಲ್ಲಿ ಚಂದ್ರಕಾಂತ ನಾವಿ, ಬಿ.ಡಿ ಅಂಜುಟಗಿ, ಬಿ.ಎಸ್ ಬಿರಾದಾರ, ಶಿವಕುಮಾರ ಬಮ್ಮನಳ್ಳಿ, ಚಂದ್ರಶಾ ಸುತಗುಡಿ, ಕಾಶಿನಾಥ ತಳಕೇರಿ, ನಿಂಗಣ್ಣ ಕೂಡಲಗಿ, ಅಂಬಣ್ಣ ಬೇಡರ, ಕಸ್ತೂರಿ ತರಸೆ, ಶರಣಗೌಡ, ಶಿವಕುಮಾರ ಬಮನಳ್ಳಿ, ಸುಷ್ಮೀತಾ, ವಿಜಯಲಕ್ಷ್ಮಿ, ಸುಚಿತ್ರಾ ಮುಗಳಿ, ವೈಭವಲಕ್ಷ್ಮಿ ಡಾಂಗೆ ಇದ್ದರು.