ಮಾನವೀಯ ಮೌಲ್ಯಗಳನ್ನು ಸಾರಿದ ನುಲಿ ಚಂದಯ್ಯ: ಬಲ್ಲೂರ್
ಔರಾದ್ :ಆ.20: 12ನೇ ಶತಮಾನದ ದಾರ್ಶನಿಕ, ಬಸವಾದಿ ಶರಣ ಸಮೂಹದ ವಚನಕಾರರು ನೂಲಿಯ ಚಂದಯ್ಯ, ತಮ್ಮ ವಚನಗಳ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದವರು ಕಾಯಕ ದಾಸೋಹಕ್ಕೆ ಮಹತ್ವದ ಸ್ಥಾನ ನೀಡಿ ಬದುಕಿ ಶ್ರಮದ ಮಹತ್ವ ಸಾರಿದ ಶ್ರೇಷ್ಠ ವಚನಕಾರ ಎಂದು ಸಾಹಿತಿ ವಿದ್ಯಾವತಿ ಬಲ್ಲೂರು ಅಭಿಪ್ರಾಯಪಟ್ಟರು.
ಪಟ್ಟಣದ ತಹಸೀಲ್ ಕಛೇರಿಯಲ್ಲಿ ಸೋಮವಾರ ನಡೆದ ನುಲಿಯ ಚಂದಯ್ಯ ಜಯಂತಿ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಬಸವಾದಿ ಶರಣರ ವಚನಗಳು ಮಾನವೀಯತೆಯ ಅದ್ಭುತ ಸಂದೇಶಗಳನ್ನು ಸಾರುತ್ತವೆ. ಬಸವಣ್ಣನ ನೇತೃತ್ವದಲ್ಲಿ ಅಂದು ಎಲ್ಲರೂ ಒಗ್ಗೂಡಿದಂತೆ ಪ್ರಸ್ತುತ ನಾವುಗಳು ಒಗ್ಗೂಡಿ ಬಸವ ತತ್ವವನ್ನು ಅಪ್ಪಿಕೊಂಡು ಬದುಕಿದಾಗ ಮಾತ್ರ ಸುಂದರ ಸಮಾಜ ನಿರ್ಮಾಣವಾಗಲು ಸಾಧ್ಯ.
ಸುಂದರ ಸಾರ್ಥಕ ಬದುಕಿನ ಹಸನಕ್ಕಾಗಿ ಸಮಾನತೆಯ ಸಂಕಲ್ಪದೊಂದಿಗೆ ನಡೆದ ಕ್ರಾಂತಿಯೇ ಬಸವಾದಿ ಶರಣರ ಕಲ್ಯಾಣ ಕ್ರಾಂತಿಯಾಗಿತ್ತು. ನುಲಿ ಚಂದಯ್ಯ ಅವರು ಸಹ ಈ ಕಲ್ಯಾಣ ನಾಡು ಕಂಡ ಅಪರೂಪದ ಮಹಾನುಭಾವ ಶರಣ ಅವರಾಗಿದ್ದರು ಎಂದರು.
ತಾಲೂಕು ಅಧ್ಯಕ್ಷ ಧನರಾಜ ಮಾನೆ ಮಾತನಾಡಿ, 12ನೇ ಶತಮಾನದಲ್ಲಿ ಬಾಳಿ ಬದುಕಿದ ಗುರು ನುಲಿ ಚಂದಯ್ಯ ಅವರ ಆದರ್ಶಗಳು ಜೀವನದಲ್ಲಿ ಅಳವಡಿಸಿಕೊಂಡು ಬದುಕಬೇಕಿದೆ. ಶೋಷಿತ ಸಮುದಾಯದ ಏಳ್ಗೆಗೆ ಶಿಕ್ಷಣವೇ ಅಸ್ತ್ರ. ಹಾಗಾಗಿ ಶಿಕ್ಷಣ ಪಡೆಯುವ ಮೂಲಕ ಸಮುದಾಯ ಅಭಿವೃದ್ಧಿಯಾಗಬೇಕು ಎಂಬದು ನಾವು ಅರಿಯಬೇಕು ಎಂದರು.
ರಾಮಣ್ಣ ವಡೆಯರ್ ಮಾತನಾಡಿ, ಬುದ್ದ ಬಸವ ಅಂಬೇಡ್ಕರ್ ದಾರಿಯಲ್ಲಿ ನಾವು ಸಾಗಬೇಕು ಎಂದರು. ಡಾ. ಧನರಾಜ ರಾಗಾ ಮಾತನಾಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಮಲಶೆಟ್ಟಿ ಚಿದ್ರೆ, ಉಪನೋಂದಣಿ ಅಧಿಕಾರಿ ಪ್ರೇಮಿಕುಮಾರಿ, ಅಬ್ದುಲ್ ರಹೀಮ, ಡಾ. ಪೆÇಯಾಜ ಅಲಿ, ಬಾಲಾಜಿ ಅಮರವಾಡಿ, ಜಿಲ್ಲಾಧ್ಯಕ್ಷ ಸಂತೋಷ ಹಳೆಂಬರೆ, ಜಿಲ್ಲಾ ಕಾರ್ಯದರ್ಶಿ ಸಂಜೀವ ಬೇಲೂರ್, ಜಿಲ್ಲಾ ಕುಳುವ ಮಹಾಸಂಘ ಪ್ರಧಾನ ಕಾರ್ಯದರ್ಶಿ ಸಂತೋಷ ಕಮಠಾಣೆ, ನರಸಿಂಗ ಮಾನೆ, ವಾಮನ ಮಾನೆ, ವಿಜಯಕುಮಾರ ಮಾಣಿಕೇಶ್ವರ, ಬಾಲಾಜಿ ಜಾಧವ, ವೈಜಿನಾಥ ವಡೆಯರ್, ನಾಗನಾಥ ಶಂಕು, ಅನೀಲಕುಮಾರ ಮೆಲ್ದೊಡ್ಡಿ, ರವೀಂದ್ರ ಮೇತ್ರೆ, ಮಾಣಿಕ ನೇಳಗಿ, ಪ್ರಮೀಳಾ ಸೇರಿದಂತೆ ಇನ್ನಿತರರಿದ್ದರು.