ಶೀಘ್ರವೇ ಇಂದಿರಾ ಕ್ಯಾಂಟಿನ್ ಆರಂಭಕ್ಕೆ ಶಾಸಕ ಬಿಆರ್ ಸೂಚನೆ
ಆಳಂದ:ಆ.20: ಪಟ್ಟಣದ ಶ್ರೀ ರಾಮರುಕಟ್ಟೆಯಲ್ಲಿ ಇಂದಿರಾ ಕ್ಯಾಂಟಿನ್ ಆರಂಭಿಸುವ ಮೂಲಕ ಜನತೆಗೆ ಅನುಕೂಲ ಕಲ್ಪಿಸಲು ಶೀಘ್ರವಾಗಿ ಕೈತ್ತಿಕೊಳ್ಳುವ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಮುಖ್ಯಮಂತ್ರಿಗಳ ಸಲಹೆಗಾರ, ಶಾಸಕ ಬಿ.ಆರ್. ಪಾಟೀಲ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ಪುರಸಭೆ ಆವರಣದಲಿ ಸೋಮವಾರ ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾ ನಗರ ಅಭಿವೃದ್ಧಿ ಕೋಶ, ಮತ್ತು ಪುರಸಭೆ ಆಶ್ರಯದಲ್ಲಿ 60 ಲಕ್ಷ ರೂಪಾಯಿ ವೆಚ್ಚದ ಶ್ರೀರಾಮ ಮಾರುಕಟ್ಟೆಯಲ್ಲಿ ಇಂದಿರಾ ಕ್ಯಾಂಟಿನ್ ನಿರ್ಮಾಣ ಕೈಗೊಳ್ಳುವ ಕಾಮಗಾರಿಯ ಭೂಮಿ ಪೂಜೆಯನ್ನು ಸೋಮವಾರ ಸಂಕೇತಿಕವಾಗಿ ಪುರಸಭೆ ಆವರಣದಲ್ಲಿ ನೆರವೇರಿಸಿ ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿಂದಿನ ಅಧಿಕಾರವಧಿಯಲ್ಲಿ ಬಡವರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಎಲ್ಲಡೆ ಇಂದಿರಾ ಕ್ಯಾಂಟಿನ್ ಜಾರಿಗೆ ತಂದಿದ್ದರು. ಆದರೆ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಯೋಜನೆ ಉದ್ದೇಶಿತ ಹೊಸ ಕ್ಯಾಂಟಿನ್‍ಗಳು ಆರಂಬಿಸದೇ ಯೋಜನೆ ಸ್ಥಗಿತಗೊಂಡಿತ್ತು. ಈಗ, ಮತ್ತೆ ಸಿದ್ಧರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದರಿಂದ ಈ ಯೋಜನೆಗೆ 60 ಲಕ್ಷ ರೂಪಾಯಿಯನ್ನು ಮಂಜೂರಿಸಲಾಗಿದೆ. ತಕ್ಷಣವೇ ಶ್ರೀರಾಮ ಮಾರುಕಟ್ಟೆಯಲ್ಲಿ ಈ ಕಾಮಗಾರಿ ಕೈಗೊಂಡು, ಶೀಘ್ರವೇ ಕ್ಯಾಂಟೀನ್ ಆರಂಭಿಸಿ, ಬಡವರಿಗೆ ಅನುಕೂಲ ಕಲ್ಪಿಸಬೇಕಾಗಿದೆ, ಪಟ್ಟಣಕ್ಕೆ ವ್ಯಾಪಾರ ವೈಹಿವಾಟಿಗೆ ಬರುವ ಬಡವರಿಗೆ ಅನುಕೂಲವಾಗಲಿದೆ. ಶೀಘ್ರವೇ ಕ್ಯಾಂಟಿನ್ ನಿಮಾರ್ಣ ಕಾಮಗಾರಿ ಕೈಗೊಂಡು ಆರಂಭಿಸಬೇಕು ಎಂದು ಮುಖ್ಯಾಧಿಕಾರಿಗಳಿಗೆ ಅವರು ಸಲಹೆ ನೀಡಿದರು.
ವೇದಿಕೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಸಂಗಮೇಶೆಟ್ಟಿ ಪನಶೆಟ್ಟಿ, ಪರಿಸರ ಅಭ್ಯಂತರ ರವಿಕಾಂತ್ ಮಿಸ್ಕಿನ್, ಸಹಾಯಕ ಅಭಿಯಂತರ ಜಗದೀಶ್ ಹಿರೇಮಠ್, ಪುರಸಭೆ ಸದಸ್ಯರಾದ ಚಂದ್ರಕಾಂತ್ ಹತ್ತರಕಿ, ಲಕ್ಷ್ಮಣ್ ಜಳಕಿ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಸಿದ್ದರಾಮ್ ಪ್ಯಾಟಿ, ಸಂಜಯ ನಾಯಕ, ಅಬ್ದುಲ್ ರಸೀದ್, ಪಾಶಾ ಗುತ್ತೇದಾರ, ಫಿರಾಸತ್ ಅನ್ಸಾರಿ, ಶಿವರಾಯ ಸರಸಂಬಿ, ಶಿವರಾಯ ಮಂಗಲಗಿ, ಮತ್ತಿತರರು ಉಪಸ್ಥಿತರಿದ್ದರು.
ಶಾಸಕರಿಗೆ ಪೌರಕಾರ್ಮಿಕ ನೌಕರ ಸಂಘದ ಅಧ್ಯಕ್ಷ ಶಿವರಾಯ ಸರಸಂಬಿ ಶಾಲು ಹೊದಿಸಿ ಸನ್ಮಾನಿಸಿದರು.
ವ್ಯವಸ್ಥಾಪಕ ಲಕ್ಷ್ಮಣ ಕಟ್ಟಿಮನಿ ಸ್ವಾಗತಿಸಿದರು. ಮಲ್ಲಿನಾಥ ಕಾಮದಿ ನಿರೂಪಿಸಿದರು. ಶಫಿರೋತೆ ವಂದಿಸಿದರು.
ಶಾಲಾ ಕೋಣೆಗೆ ಅಡಿಗಲ್ಲು:
ಬಳಿಕ ಪಟ್ಟಣದ ನೇಕಾರ ಕಾಲೋನಿಯಲ್ಲಿ 50 ಲಕ್ಷ ರೂಪಾಯಿ ವೆಚ್ಚದಲ್ಲಿ ್ಲ ಪ್ರಾಥಮಿಕ ಶಾಲೆಯ ಕೋಣೆಗಳ ನಿರ್ಮಾಣಕ್ಕೆ ಸಿಎಂ ಸಲಹೆಗಾರ, ಶಾಸಕ ಬಿ.ಆರ್. ಪಾಟೀಲ ಅವರು ಅಡಿಗಲ್ಲು ನೆರವೇರಿಸಿದರು. ಪಿಡಬ್ಲೂಡಿ ಎಇಇ ಆನಂದಕುಮಾರ, ಗುತ್ತೇಗೆದಾರ ಜಮೀಲ್ ಅನ್ಸಾರಿ ಸೇರಿದಂತೆ ಮುಖಂಡರು, ಬಡಾವಣೆಯ ನಾಗರಿಕರು ಉಪಸ್ಥಿತರಿದ್ದರು.