ವೃತ್ತಿಯುದ್ದಕ್ಕೂ ಸಮಾಜ ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸುವುದು ದೊಡ್ಡದು
ಕಲಬುರಗಿ:ಆ.20: ಸರ್ಕಾರಿ ಸೇವೆಗೆ ಆಕಸ್ಮಿಕವಾಗಿ ಸೇವೆ ಸೇರಿದ್ದಾದರೂ ಸೇವೆಯ ಆರಂಭದಿಂದ ನಿವೃತ್ತಿ ವರೆಗೂ ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸುವುದು ದೊಡ್ಡದು ಎಂದು ಶಿಕ್ಷಣ ಇಲಾಖೆಯ ವಿಶ್ರಾಂತ ನಿರ್ದೇಶಕ ಎನ್. ಬಿ. ಪಾಟೀಲ್ ಹೇಳಿದರು.
ಶಿಕ್ಷಣ ಇಲಾಖೆಯಲ್ಲಿ ಸುದೀರ್ಘ 40 ವರ್ಷಗಳ ಕಾಲ ಸೇವೆ ಸಲ್ಲಿಸಿ ಪ್ರಥಮ ದರ್ಜೆ ಸಹಾಯಕ ಹುದ್ದೆಯಿಂದ ನಿವೃತ್ತರಾದ ವಿಜಯಕುಮಾರ ಹಂಚನಾಳ ಅವರಿಗೆ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾದ ಬೀಳ್ಕೊಡುಗೆ ಸಮಾರಂಭ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ನಿವೃತ್ತಿ ಯಾದ ನಂತರವೂ ಒಬ್ಬ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಸಾರ್ವಜನಿಕರು ನೆನೆಸಿಕೊಂಡರೆಂದರೆ ಸೇವೆ ಸಾರ್ಥಕವೆನಿಸುತ್ತದೆ. ಇದನ್ನು ಈ ಸಮಾರಂಭದಲ್ಲಿ ಪಾಲ್ಗೊಂಡ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಸಾಕ್ಷಿಕರಿಸುತ್ತಿದೆ ಎಂದು ಪಾಟೀಲ್ ಹೇಳಿದರು.
ಖ್ಯಾತ ಉದ್ದಿಮೆದಾರರಾದ ನಾಗರೆಡ್ಡಿ ಪಾಟೀಲ್ ಕರದಾಳ ಮಾತನಾಡಿ, ಯಾವುದೇ ಕ್ಷೇತ್ರವಿರಲಿ ಪ್ರಮಾಣಿಕತೆಯಿಂದ ದುಡಿದರೆ ಜನ ಗುರುತಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.
ಉಪನಿರ್ದೇಶಕರಾದ ನಾಗರಾಜ ಡೋಣಿ, ಸೂರ್ಯಕಾಂತ ಮದಾನೆ, ಹಿರಿಯ ಸಹಾಯಕ ನಿರ್ದೇಶಕ ಸಿ.ಎಸ್. ಮುಧೋಳ ಸೇರಿದಂತೆ ಇತರರು ಮಾತನಾಡಿದರು.
ಭರತನೂರಿನ ಚಿಕ್ಕ ಗುರುನಂಜೇಶ್ವರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ, ಎಲ್ಲರಿಗೂ ಸರ್ಕಾರಿ ಸೇವೆ ಸಲ್ಲಿಸಲು ಅವಕಾಶ ಸಿಗೋದಿಲ್ಲ. ಆದರೆ ವಿಜಯಕುಮಾರ ಹಂಚನಾಳ ಅವರು ತಮ್ಮ ಸುದೀರ್ಘ ನಾಲ್ಕು ದಶಕದುದ್ದಕ್ಕೂ ಪ್ರಮಾಣಿಕ ಹಾಗೂ ಕಠಿಣೆತೆಯಿಂದ ಕಾರ್ಯನಿರ್ವಹಿಸಿರುವುದು ಮಾದರಿಯಾಗಿದೆ ಎಂದು ಶ್ಲಾಘಿಸಿದರು.
ತೊನಸನಹಳ್ಳಿ ಕೊಟ್ಟೂರೇಶ್ವರ ಶರಣರು ಸಹ ಮಾತನಾಡಿದರು. ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಜಯಕುಮಾರ ನಾಗಮ್ಮ ಹಂಚನಾಳ ದಂಪತಿಯನ್ನು ಸನ್ಮಾನಿಸಲಾಯಿತು. ಸನ್ಮಾನಿತಗೊಂಡು ಮಾತನಾಡಿದ ವಿಜಯಕುಮಾರ, ಶಿಕ್ಷಣ ಇಲಾಖೆಯಲ್ಲಿ ಉತ್ತಮವಾಗಿ ಸೇವೆ ಸಲ್ಲಿಸುವಂತಾಗಕು ಎಲ್ಲರ ಸಹಕಾರ ಅಡಗಿದೆ ಎಂದರು.
ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರುಗಳಾದ ಮಹೇಶ ಹೂಗಾರ, ಮಲ್ಲಯ್ಯ ಗುತ್ತೇದಾರ, ಮುಖಂಡರಾದ ಕರಬಸಪ್ಪ ಮಾಲಿಪಾಟೀಲ್, ರವೀಂದ್ರ ಸಜ್ಜನಶೆಟ್ಟಿ, ಮರೆಪ್ಪ ಬಸವಪಟ್ಟಣ, ಭಾನುಕುಮಾರ ಗಿರೆಗೋಳ ಸೇರಿದಂತೆ ಮುಂತಾದವರಿದ್ದರು.