ಅಂತರ್ ದೃಷ್ಟ್ಟಿಗಳು ಜ್ಞಾನದ ಭಂಡಾರ
ಕಲಬುರಗಿ:ಆ.20:ಪೂಜ್ಯಡಾ.ಶರಣಬಸವಪ್ಪಅಪ್ಪಅವರು ಬರೆಯುವ ಅಂತರ್‍ದೃಷ್ಟಿಗಳು ಜ್ಞಾನದ ಭಂಡಾರಗಳಾಗಿವೆ ಎಂದುಗೋದುತಾಯಿದೊಡ್ಡಪ್ಪಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯೆಡಾ,ಪುಟ್ಟಮಣಿದೇವಿದಾಸ ಹೇಳಿದರು.
ಕಲಬುರಗಿಯ ಶರಣಬಸವೇಶ್ವರದೇವಸ್ಥಾನದಲ್ಲಿ 30 ದಿನಗಳ ಸಾಂಸ್ಕøತಿಕ ಶಿವಾನುಭವ ಉಪನ್ಯಾಸ ಮಾಲಿಕೆಯಲ್ಲಿ ಸೋಮವಾರಅಂತರ್‍ದೃಷ್ಟಿ ವಿಷಯಕುರಿತು ಮಾತನಾಡಿದರು.
ಅಂತರ್‍ದೃಷ್ಟಿಯಲ್ಲಿ ಪೂಜ್ಯಡಾ.ಅಪ್ಪಾಜಿಯವರು ಹೇಳದೆ ವಿಷಯಗಳಿಲ್ಲ, ಅವು ಚಿಂತನೆಗಳನ್ನು ಅಭಿವ್ಯಕ್ತಿಗೊಳಿಸುತ್ತವೆ. ಅದರಲ್ಲಿದಾಸೋಹ, ಭಕ್ತಿ, ಅಧ್ಯಾತ್ಮೀಕತೆ, ಯೋಗ, ಶಿವಯೋಗ ಹೀಗೆ ಅನೇಕ ವಿಷಯಗಳನ್ನು ಕೂಡಿರುವಜ್ಞಾನದ ಬುತ್ತಿಯಾಗಿದೆ. ಅದರಲ್ಲಿ ಬರೆದಂತಹ ವಿಷಯಗಳು ಅಂತರಂಗದಿಂದ ಬಂದಿರುವವು, ಪೂಜ್ಯರಅಂತರಂಗದದೃಷ್ಟಿಗೆಗೋಚರವಾಗಿ ಭಾಷಿಕಅಭಿವ್ಯಕ್ತಿ ಪಡೆದುಓದುಗರಅಂತರಂಗವನ್ನು ಜಾಗೃತಗೊಳಿಸಿವೆ. ಇವು ಮಸ್ತಕದಿಂದ ಹುಟ್ಟುದವುಗಳಾಗಿ, ಹೃದಯಭಾವದ ಸಂಸ್ಕಾರ ಹೊಂದಿ, ಜೀವನ ಪ್ರಾಮಾಣ್ಯದ ನೆಲೆ ಪಡೆದ ಒಳಗಣ್ಣಿನ ದಾರ್ಶನಿಕ ಕಿರಣಗಳು. ಮಹಾದಾಸೋಹಿ ಶರಣಬಸವರ ಹಾಗೂ ದರ್ಶನಬೆಳಸಿ ಬಂದರಾಜನಿಂದ ಸೇವಕನವರೆಗಿನಎಲ್ಲ ಸ್ತರದಜನರೊಡನೆ ವಿಚಾರ-ವಿನಿಮಯ ಮಾಡುವಾಗಆತ್ಮಾನುಭವದಿಂದ ಅವಿರ್ಭವಿಸಿರುವ ನಿತ್ಯಸತ್ಯದಆಂತರಂಗಿಕಅಭಿವ್ಯಕ್ತಿಯ ಸಾರಸಾರಾಯ ಈ ಅಂತರ್‍ದೃಷ್ಟಿಗಳು ಬಾಹ್ಯ ಚಕ್ಷುಗಳಿಗೆ ಕಾಣುವ ವಿಶ್ವಜೀವನದ ಹತ್ತು ಹಲವು ವಿಷಯಗಳನ್ನು ಅಂತರ್‍ಚಕ್ಷುವಿನ ದರ್ಶನಕ್ಕೆ ಅಳವಡಿಸಿ ಮತ್ತೆ ಅವುಗಳನ್ನು ವಿಶ್ವಮಾನವನ ಶ್ರೇಯೋನ್ನತಿಗಾಗಿ ಸಮರ್ಪಿಸಲಾಗಿದೆ. ಇಂತಹ ಸಮರ್ಪಣೆಯ ಚಿಂತನೆಗಳಲ್ಲಿ ಬೌತಿಕಆಧ್ಯಾತ್ಮಿಕ ವಲಯಕ್ಕೆ ಸಂಬಂಧಿಸಿದ ವಿವಿಧ ವಿಚಾರಗಳನ್ನು ಓದುಗರಿಗೆ ಅತ್ಯಂತ ವಿನೂತನವೂ,, ಬೋಧನಪ್ರದವೂಆಗಿದೆ. ಶರಣಬಸವರ ಮಹಾದಾಸೋಹ ಪರಂಪರೆ, ಸಮಕಾಲೀನ ಬದುಕಿನ ಭಿನ್ನ ಭಿನ್ನ ಕ್ಷೇತ್ರಗಳ ವಿದ್ಯಮಾನಇವೆಲ್ಲ ಪೂಜ್ಯಅಪ್ಪಅವರುತಮ್ಮದೃಷ್ಟಿಯಲ್ಲಿಕಂಡಂತೆ ಹೇಳಿದ್ದಾರೆ. ಇಲ್ಲಿನ ಚಿಂತನೆಗಳು ಅತ್ಯಂತ ಸಹಜವಾಗಿಯೇರೂಪ ಪಡೆದು ಬಂದವುಗಳಾಗಿವೆ. ಮನುಷ್ಯನ ಬದುಕನ್ನು ಶಿವಜೀವನವನ್ನಾಗಿಯೂ ದಾಸೋಹಜೀವನವನ್ನಾಗಿಯೂರೂಪಿಸುವಲ್ಲಿ ಪ್ರೇರಣೆ, ಸ್ಪೂರ್ತಿ ನೀಡುತ್ತವೆ. ಕೆಲವೊಂದುಅಂತರ್‍ದೃಷ್ಟಿಯಲ್ಲಿ ವಿಜ್ಞಾನ ಮತ್ತುತತ್ವಜ್ಞಾನಕುರಿತು ಹೇಳಿದ್ದಾರೆ. ಯಾವುದೇ ಫಲದಆಪೇಕ್ಷೆಇಲ್ಲದೆಕಾರ್ಯವನ್ನು ಮಾಡುವುದರಿಂದ ದೇವರುಗೊತ್ತಿರದೆ ಫಲವನ್ನು ನೀಡುತ್ತಾನೆಎಂದುತಮ್ಮಅಂತರ್‍ದೃಷ್ಟಿಯಲ್ಲಿ ಹೇಳಿದ್ದಾರೆ ಎಂದು ತಿಳಿಸಿದರು.