ಸುರಿದ ಮಳೆಗೆ ಕೊಚ್ಚಿಹೋದ ಟಮ್ಯಾಟೋ ಬೆಳೆ
ಸಂಜೆವಾಣಿ ವಾರ್ತೆ
ದಾವಣಗೆರೆ. ಆ.೨೦; ದಿಢೀರ್ ಸುರಿದ ಬಾರಿ ಮಳೆಯಿಂದಾಗಿ ಟೊಮೊಟೋ ಫಸಲು ನೀರಿನಲ್ಲಿ ಕೊಚ್ಚಿ ಹೋದ ಘಟನೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಆರುಂಡಿ ಗ್ರಾಮದಲ್ಲಿ ನಡೆದಿದೆ.ಆರುಂಡಿ ಗ್ರಾಮದ ಜವಳಿ ಸುರೇಶ್ ಎಂಬುವವರು  ಟೊಮೊಟೋ ಫಸಲು ಕಟಾವು ಮಾಡಿ ಬಾಕ್ಸ್ ಗೆ ತುಂಬುತ್ತಿದ್ದಾಗ ಏಕಾಏಕಿ ಒಂದು ಘಂಟೆಗೂ ಹೆಚ್ಚು ಮಳೆ ಸುರಿಯಿತು. ಪರಿಣಾಮ ಬಾಕ್ಸ್ ಗೆ ತುಂಬಲು ರಾಶಿ ಹಾಕಿದ್ದ ಟೊಮೊಟ್ಯೋ ನೀರಿನಲ್ಲಿ ಕೊಚ್ಚಿ ಹೋಗಿದ್ದು ಇದೀಗ ಆ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು ಸುಮಾರು 25 ಸಾವಿರಕ್ಕೂ ಹೆಚ್ಚು ನಷ್ಟ ಉಂಟಾಗಿದೆ  ಎನ್ನಲಾಗುತ್ತಿದೆ..