ರಾಖೀ ಕಟ್ಟಿ ಕೃತಜ್ಞತೆ ಸಲ್ಲಿಸಿದ ವಿದ್ಯಾರ್ಥಿನಿಯರು
ಕಲಬುರಗಿ:ಆ.20:ವಿವೇಕಾನಂದ ವಿದ್ಯಾ ನಿಕೇತನ ಶಾಲೆಯ ವಿದ್ಯಾರ್ಥಿನಿಯರು ಅಶೋಕ ನಗರ ಪೆÇಲೀಸ್ ಠಾಣೆಗೆ ಆಗಮಿಸಿ, ನೀವು ನಮ್ಮ ನಿಜವಾದ ರಕ್ಷಕರು, ನಾವು ನಿಮಗೆ ರಾಖೀ ಕಟ್ಟಿ ಕೃತಜ್ಞತೆ ಹೇಳಲು ಬಂದಿದ್ದೇವೆ, ದಯವಿಟ್ಟು ಅನುಮತಿ ಕೊಡಿ ಎಂದಾಗ, ಸಿಬ್ಬಂದಿಯ ಮುಖದಲ್ಲಿ ಮಂದಹಾಸ.ಪ್ರೀತಿಯಿಂದ ಮಕ್ಕಳನ್ನುಅತಿಥಿಗಳಂತೆ ಬರಮಾಡಿಕೊಂಡರು. ಮಕ್ಕಳು ಪೆÇಲೀಸ್ ಸಿಬ್ಬಂದಿಗೆ ರಾಖಿ ಕಟ್ಟಿ, ಆರತಿ ಬೆಳಗಿ ಸಿಹಿ ತಿನಿಸಿದರು .
ಶಾಲೆಯ ಮುಖ್ಯೋಪಾದ್ಯಾಯಿನಿ ಅಂಬಿಕಾ ರೆಡ್ಡಿ ಮಕ್ಕಳನ್ನುದ್ದೇಶಿಸಿ ಮಾತನಾಡಿ, ಪೆÇಲೀಸರೂ ನಮ್ಮಂತೆ ಮನುಷ್ಯರು. ಅವರಿಗೂ ಕುಟುಂಬ, ಮಕ್ಕಳು, ಭಾವನೆಗಳು ಇರುತ್ತವೆ.ಅವರ ಬಗ್ಗೆ ತಪ್ಪು ಅಭಿಪ್ರಾಯ ಇರಬಾರದು. ಅವರನ್ನು ಗೌರವದಿಂದ ಕಾಣುವುದು ನಮ್ಮ ಕರ್ತವ್ಯ ಎಂದರು.
ಠಾಣೆಯ ಎ.ಎಸ್.ಐ ಶಿವಶರಣಪ್ಪ ಪಾಣೆಗಾಂವ, ಆರಕ್ಷಕರಾದ ಮಲ್ಲಿಕಾರ್ಜುನ, ಸಂತೋಷ ಪವಾರ, ಇಶಾಖ ಪಟೇಲ್, ಸುನೀಲ ಹಾಗೂ ಶಿವುಕುಮಾರ ಅವರು ಮಕ್ಕಳಿಂದ ರಾಖೀ ಕಟ್ಟಿಸಿಕೊಂಡರು. ಶೈಕ್ಷಣಿಕ ಸಂಯೋಜಕಿ ಸುಮಾ ಭಗವತಿ, ಮಲ್ಲಿಕಾರ್ಜುನ ಜವಳಗಿ ಹಾಗೂ ಮಕ್ಕಳು ಉಪಸ್ಥಿತರಿದ್ದರು.